ಯುಎಇದುಬೈಯ ಕರಾನಿ ಇಂಟೀರಿಯರ್'ನಲ್ಲಿ ಕಾರ್ಮಿಕ ಜಾಗೃತಿ ಅಭಿಯಾನ

ದುಬೈಯ ಕರಾನಿ ಇಂಟೀರಿಯರ್’ನಲ್ಲಿ ಕಾರ್ಮಿಕ ಜಾಗೃತಿ ಅಭಿಯಾನ

ದುಬೈ: ದುಬೈಯ ಭಾರತೀಯ ರಾಯಭಾರಿ ಕಚೇರಿ ಮತ್ತು ಏಮ್ ಇಂಡಿಯಾ ಫೋರಂ ಸಂಯುಕ್ತ ಆಶ್ರಯದಲ್ಲಿ ದುಬೈಯ ಕರಾನಿ ಇಂಟೀರಿಯರ್ ಎಲ್‌ಎಲ್‌ಸಿಯಲ್ಲಿ ಕಾರ್ಮಿಕರ ಜಾಗೃತಿ ಅಭಿಯಾನ ಇತ್ತೀಚಿಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮವು ಯೋಗಾದೊಂದಿಗೆ ಪ್ರಾರಂಭವಾಯಿತು. ನಂತರ ದುಬೈನ PBSK ವತಿಯಿಂದ ಕಲ್ಯಾಣ ಯೋಜನೆಗಳು ಮತ್ತು ದೂರು ಪರಿಹಾರ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಲಾಯಿತು. ಆರ್ಥಿಕ ವಂಚನೆಗಳ ಕುರಿತು ICAI ದುಬೈ ಶಾಖೆಯವರು ಉಪನ್ಯಾಸ ನೀಡಿದರು.

ಭಾರತೀಯ ರಾಯಭಾರಿ ಕಚೇರಿಯಿಂದ ಕಾರ್ಮಿಕ ಮತ್ತು ಮದದ್ ವಿಭಾಗದ ಕಾನ್ಸುಲ್ ಪಬಿತ್ರ ಮಜುಂದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಮಿಕ ವಿಭಾಗದ ಉಪ ಕಾನ್ಸುಲ್ ದೀಪಕ್ ದಾಗರ್, ಗುರೂಜಿ ರಾಜರಾಮಜಿ, ಸಂತ್ ಕೃಪರಾಮಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಏಮ್ ಇಂಡಿಯಾ ಫೋರಂನ ಸಂಸ್ಥಾಪಕ ಅಧ್ಯಕ್ಷ ಶಿರಾಲಿ ಶೈಖ್ ಮುಝಫರ್ ಅವರ ನೇತೃತ್ವದಲ್ಲಿ, ಸಮನ್ವಯಕರಾದ ಮೊಹಮ್ಮದ್ ಅಝೀಮ್ ಮತ್ತು ಉಪಾಧ್ಯಕ್ಷ ಮೊಹಮ್ಮದ್ ನಿಯಾಝ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಆರ್ಥಿಕ ವಂಚನೆಗಳು, ಸೈಬರ್ ಅಪರಾಧಗಳು, ನಕಲಿ ಉದ್ಯೋಗ ಏಜೆನ್ಸಿಗಳು, ಸಿಮ್ ಕಾರ್ಡ್ ವಂಚನೆ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿದರು.

ಕಾರ್ಯಕ್ರಮದ ಅಂತ್ಯದಲ್ಲಿ ದುಬೈಯ ಭಾರತೀಯ ರಾಯಭಾರಿ ಕಚೇರಿಯವರು ಕಾರ್ಮಿಕರ ಹಿತಾಸಕ್ತಿಗಾಗಿ ಏಮ್ ಇಂಡಿಯಾ ಫೋರಂ ಕೈಗೊಂಡಿರುವ ಮಹತ್ವದ ಕಾರ್ಯಗಳಿಗಾಗಿ ಪ್ರಶಂಸೆ ವ್ಯಕ್ತಪಡಿಸಿದರು.

Hot this week

DKSC ಕುವೈತ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾಗಿ ಅನ್ವರ್ ಸಾಹೇಬ್ ಕುಂಜಾಲ್ ಆಯ್ಕೆ

ಕುವೈತ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC), ಇದರ ಕುವೈತ್ ರಾಷ್ಟ್ರೀಯ...

ಕರ್ನಾಟಕ ಸಂಘ ಖತರ್‌ನಿಂದ ರಮಝಾನ್‌ ಸೇವಾ ಕಾರ್ಯ: ಇಫ್ತಾರ್ ಆಹಾರ ಕಿಟ್‌ಗಳ ವಿತರಣೆ

ಕರ್ನಾಟಕ ಸಂಘ ಖತರ್‌ (KSQ), ರಮಝಾನ್‌ ಮಾಸದ ಪವಿತ್ರ ಚಟುವಟಿಕೆಗಳ ಭಾಗವಾಗಿ...

ಅಟ್ಲಾಂಟ ಒಕ್ಕಲಿಗರ ಕೂಟದಿಂದ ಪ್ರಥಮ ಸಮಾವೇಶ

ಕೆ. ಆರ್. ಶ್ರೀನಾಥ್, ಅಟ್ಲಾಂಟ ಅಟ್ಲಾಂಟ: ಫೆಬ್ರವರಿ 22ರ ರವಿವಾರದಂದು ಅಟ್ಲಾಂಟದಲ್ಲಿ ನೆಲಸಿರುವ...

AIM India Forum Delegation Meets Indian Ambassador to UAE

Abu Dhabi: A delegation from AIM India Forum met...

Konkani movie ‘My Dear Father’ thrills audience in Kuwait with double premiere shows

Kuwait: The Konkani film My Dear Father was screened...

Related Articles

Popular Categories