ಯುಎಇದುಬೈಯಲ್ಲಿ ಸಂಕಷ್ಟಕ್ಕೀಡಾಗಿರುವ ಪ್ರವಾಸಿ ಕನ್ನಡಿಗರಿಗೆ ಧೈರ್ಯ ತುಂಬಿದ ಎಂ.ಎ.ಗಫೂರ್

ದುಬೈಯಲ್ಲಿ ಸಂಕಷ್ಟಕ್ಕೀಡಾಗಿರುವ ಪ್ರವಾಸಿ ಕನ್ನಡಿಗರಿಗೆ ಧೈರ್ಯ ತುಂಬಿದ ಎಂ.ಎ.ಗಫೂರ್

ದುಬೈ: ಅಮೇರಿಕ-ಇಸ್ರೇಲ್ ಹಾಗು ಇರಾನ್ ಮಧ್ಯೆಗಿನ ಸಂಘರ್ಷದಿಂದ ದುಬೈಯಲ್ಲಿ ಸಂಕಷ್ಟಕ್ಕೀಡಾಗಿರುವ ಕನ್ನಡಿಗ ಪ್ರವಾಸಿಗರ ಜೊತೆ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಆದಷ್ಟು ಬೇಗ ಕರ್ನಾಟಕಕ್ಕೆ ಕರೆತರುವ ವ್ಯವಸ್ಥೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.

ಕನ್ನಡಿಗಾಸ್ ಹೆಲ್ಪ್ ಲೈನ್ ಸಂಯೋಜಕ, ಬಿಸಿಸಿಐ ಯುಎಇ ಅಧ್ಯಕ್ಷರಾದ ಹಿದಾಯತ್ ಅಡ್ಡೂರು ಅವರ ನೇತೃತ್ವದಲ್ಲಿ ತಂಡವೊಂದು ಸೋಮವಾರ ಸಂಜೆ ದುಬೈಯಲ್ಲಿ ಸಿಲುಕಿ ಹಾಕಿಕೊಂಡಿರುವ ಕನ್ನಡಿಗ ಪ್ರವಾಸಿಗರನ್ನು ಭೇಟಿಯಾಗಿ ಅವರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಿತು.

ಈ ವೇಳೆ ದೂರವಾಣಿ ಮೂಲಕ ಕನ್ನಡಿಗ ಪ್ರವಾಸಿಗರ ಜೊತೆ ಮಾತನಾಡಿದ ಗಫೂರ್ ಅವರು, ನಿಮಗೆ ಎಲ್ಲ ರೀತಿಯಿಂದಲೂ ಕರ್ನಾಟಕ ಸರಕಾರ ರಕ್ಷಣೆಗೆ ಬದ್ಧವಾಗಿದೆ. ನೀವು ಯಾರು ಆತಂಕಕ್ಕೀಡಾಗಬೇಡಿ, ಸರಕಾರದ ಜೊತೆ ತಾನು ಮಾತನಾಡುವುದಾಗಿಯೂ ಧೈರ್ಯ ತುಂಬಿದರು.

ಈ ವೇಳೆ ಶಶಿಧರ್ ನಾಗರಾಜಪ್ಪ(ಅಧ್ಯಕ್ಷರು, ಕರ್ನಾಟಕ ಸಂಘ, ದುಬೈ), ಸಲೀಂ ಮೂಡಬಿದ್ರೆ(ಉದ್ಯಮಿ), ಇಕ್ರಂ ಮೊಹಮ್ಮದ್ ಮೂಳೂರು, ಸಮದ್ ಬಿರಾಲಿ, ಅದ್ದು ಹೊನ್ನಾವರ, ಸಿನಾನ್ ಸಿದ್ದಿಕಿ, ನವಾಝ್ ವಾಮಂಜೂರು ಸೇರಿದಂತೆ ಮತ್ತಿತರರು ಹಾಜರಿದ್ದರು.

Hot this week

ದುಬೈ; ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ನಲ್ಲಿ ಓಣಂ ಹಬ್ಬ ಆಚರಣೆ

ದುಬೈ : ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಫಾರ್ಚೂನ್ ಗ್ರೂಪ್...

ಕನ್ನಡಿಗರ ಕೂಟ ದುಬೈ ವತಿಯಿಂದ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್‌ಗೆ ಸನ್ಮಾನ

ಬೆಂಗಳೂರು: ಕನ್ನಡಿಗರ ಕೂಟ, ದುಬೈ ತಂಡವು ಮಾಜಿ ಭಾರತೀಯ ಕ್ರಿಕೆಟಿಗ ಹಾಗೂ...

ಫ್ಲೋರಿಡಾ ತುಳು ಕೂಟದ 2ನೇ ವಾರ್ಷಿಕ ಪೊಟ್ಲಕ್ ಪಿಕ್ನಿಕ್ ಸಂಭ್ರಮ

ಅಮೇರಿಕದ ಫ್ಲೋರಿಡಾ ತುಳು ಕೂಟವು ಇತ್ತೀಚೆಗೆ ಕ್ಯಾಸೆಲ್‌ಬೆರ್ರಿ ಒರ್ಲಾಂಡೊದಲ್ಲಿ ತನ್ನ ಎರಡನೇ...

ಭಾರತದ ನೂತನ ಕಾನ್ಸುಲ್ ಜನರಲ್ ಡಾ.ವಿಷ್ಣುವರ್ಧನ ರೆಡ್ಡಿಗೆ ಕನ್ನಡಿಗರ ಕೂಟ ದುಬೈಯಿಂದ ಸ್ವಾಗತ

ದುಬೈ: ಯುಎಇಯ ಪ್ರತಿಷ್ಠಿತ ಕನ್ನಡ ಸಂಘಟನೆಗಳಲ್ಲಿ ಒಂದಾಗಿರುವ ಕನ್ನಡಿಗರ ಕೂಟ, ದುಬೈ...

Related Articles

Popular Categories