ವಾರ್ತಾಭಾರತಿಯು ಪ್ರಾರಂಭಿಸುತ್ತಿರುವ ಹೊಸ ವೆಬ್ ತಾಣ globalkannadiga.com ಅನಿವಾಸಿ ಕನ್ನಡಿಗರಿಗೆ ತಮ್ಮ ಕಥೆಗಳು, ಸಾಧನೆಗಳು ಮತ್ತು ಸವಾಲುಗಳನ್ನು ಹಂಚಿಕೊಳ್ಳಲು ಮತ್ತು ಕರ್ನಾಟಕದೊಂದಿಗಿನ ಅವರ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಬಹಳ ಮುಖ್ಯವಾದ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.
ಈ ವೆಬ್‌ಸೈಟ್ ಅನಿವಾಸಿ ಕನ್ನಡಿಗರು ಮತ್ತು ನಮ್ಮ ತಾಯ್ನಾಡಿನ ನಡುವಿನ ಅಂತರವನ್ನು ಕಡಿಮೆ ಮಾಡುವುದಲ್ಲದೆ, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವ ನಿರೀಕ್ಷೆಯಿದೆ. ಕನ್ನಡ ಸಾಂಸ್ಕೃತಿಕ ಶಕ್ತಿ ವಿಶ್ವದಾದ್ಯಂತ ಹಬ್ಬಲು ಈ ವೆಬ್ ಸೈಟ್ ಸಹಾಯ ಮಾಡಲಿದೆ ಎಂಬ ಹಾರೈಕೆ.
ಪ್ರವೀಣ್ ಕುಮಾರ್ ಶೆಟ್ಟಿ
ಅಧ್ಯಕ್ಷರು, ಕೆಎನ್‌ಆರ್‌ಐ ವೇದಿಕೆ,
(ಯುಎಇ)