ದುಬೈ: ಖ್ಯಾತ ಗಾಯಕ ಹಾಗು ಉದ್ಯಮಿ ಆಗಿರುವ ದುಬೈಯ ‘ಆಕ್ಮೆ’ ಬಿಲ್ಡಿಂಗ್ ಮೆಟಿರಿಯಲ್ಸ್’ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್ ಸಾರಥ್ಯದಲ್ಲಿ ಎಪ್ರಿಲ್ 12ರ ಶನಿವಾರದಂದು ದುಬೈನ ಅಲ್- ಜದ್ದಾಫ್’ನ ‘ಸ್ವಿಸ್ ಇಂಟರ್ ನ್ಯಾಷನಲ್ ಸ್ಕೂಲಿನಲ್ಲಿ ‘ಸ್ಯಾಂಡಲ್‌ವುಡ್ ಟು ಬಾಲಿವುಡ್’ ಎಂಬ ವಿಶೇಷ ಸಂಗೀತ, ನೃತ್ಯ ಹಾಗು ಹಾಸ್ಯಮಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಹರೀಶ್ ಶೇರಿಗಾರ್ ಅವರೊಂದಿಗೆ ಇನ್ನಿತರ ಸ್ಥಳೀಯ ಗಾಯಕರಾದ ನವೀದ್ ಮಾಗುಂಡಿ, ನಯನಾ ರಾಜಗೋಪಾಲ್, ಅಕ್ಷತಾ ರಾವ್, ಜೋಸೆಫ್ ಮಥಾಯಸ್, ಗುಣಶೀಲ ಶೆಟ್ಟಿ, ವಿಘ್ನೇಷ್, ಸುರೇಶ್ ದೇವಾಡಿಗ, ಡಾ.ಪುಷ್ಪರಾಜ್ ಶೆಟ್ಟಿ, ಸನ್ನಿಥಿ ಶೆಟ್ಟಿ ಸಾಥ್ ನೀಡಲಿದ್ದು, ರಾಜಗೋಪಾಲ ಮತ್ತು ತಂಡದವರ ಮ್ಯೂಸಿಕ್ ಇದ್ದು, ಸಂಗೀತ ಪ್ರಿಯರನ್ನು ಮೋಡಿ ಮಾಡಲಿದ್ದಾರೆ.
ಜೊತೆಗೆ ‘ಸೌಲ್ & ಬೀಟ್ಸ್ ವಿಎಮ್ ಕ್ರ್ಯೂ’ ದುಬೈ ತಂಡದಿಂದ ನೃತ್ಯ ಹಾಗೂ ದುಬೈಯ ‘ಗಮ್ಮತ್ ಕಲಾವಿದೆರ್’ ಅವರಿಂದ ‘ರಂಗ ಸಾರಥಿ’ ವಿಶ್ವನಾಥ ಶೆಟ್ಟಿ ನಿರ್ದೇಶನದ ‘ಗಮ್ಮತೇ ಗಮ್ಮತ್’ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

ದುಬೈಯ ಪ್ರೀಸಿಯಸ್ ಪಾರ್ಟೀಸ್ & ಇಂಟರ್ನ್ಯಾಶನಲ್ ಸರ್ವೀಸ್ ಎಲ್.ಎಲ್.ಸಿ. ಸಂಯೋಜನೆಯಲ್ಲಿ ನಡೆಯಲಿರುವ ‘ಸ್ಯಾಂಡಲ್‌ವುಡ್ ಟು ಬಾಲಿವುಡ್’ ಕಾರ್ಯಕ್ರಮಕ್ಕೆ ‘ಉಚಿತ’ ಪ್ರವೇಶವಿದ್ದು ಎ.12 ಸಂಜೆ 6 ಗಂಟೆಗೆ ಮುಖ್ಯ ದ್ವಾರಗಳು ತೆರಯಲಿದ್ದು, ಆರಂಭದಲ್ಲಿ ಬರುವ ಪ್ರೇಕ್ಷಕರಿಗೆ ಮೊದಲ ಆದ್ಯತೆ ಎಂದು ಆಯೋಜಕರು ತಿಳಿಸಿದ್ದಾರೆ.
ದುಬೈಯಲ್ಲಿ ಒಂದಲ್ಲ ಒಂದು ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸದಾ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಕನ್ನಡಿಗ ಹರೀಶ್ ಶೇರಿಗಾರ್, ತಾವು ಆಯೋಜಿಸುವ ಕಾರ್ಯಕ್ರಮಗಳಿಂದ ಬರುವ ಹಣವನ್ನೆಲ್ಲ ಬಡವರಿಗೆ, ಸಾಮಾಜಿಕ ಕಾರ್ಯಗಳಿಗೆ ನೀಡುವ ಮೂಲಕ ಎಲ್ಲರಿಗೂ ಮಾದರಿ ಆಗಿದ್ದಾರೆ.
‘ಧೂಮ್ ಧಮಾಕಾ’ ಹೆಸರಿನಲ್ಲಿ ಹಲವು ಕಾರ್ಯಕ್ರಮ
ಕಳೆದ 10 ವರ್ಷದ ಬಳಿಕ ಹರೀಶ್ ಶೇರಿಗಾರ್ ಸಾರಥ್ಯದಲ್ಲಿ ಈಗ ‘ಸ್ಯಾಂಡಲ್‌ವುಡ್ ಟು ಬಾಲಿವುಡ್’ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ. ದುಬೈನಲ್ಲಿ ‘ಧೂಮ್ ಧಮಾಕಾ’ ಹೆಸರಿನಲ್ಲಿ 2011ರಲ್ಲಿ ಹೆಸರಾಂತ ಹಾಸ್ಯ ಕಲಾವಿದರಾದ ಸ್ವಪ್ನಿಲ್, ವಿಐಪಿ ಹಾಗೂ 2013 ರಲ್ಲಿ ಕೃಷ್ಣ, ಸುದೇಶ್ ಮತ್ತು 2015 ರಲ್ಲಿ ಬಾಲಿವುಡ್ ಖ್ಯಾತ ಕಲಾವಿದರಾದ ಜಾನಿ ಲೀವರ್ ಹಾಗೂ ಅವರ ಪುತ್ರಿ ಜೇಮಿ ಲೀವರ್ ಅವರಿಂದ ವಿಶೇಷ ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದರು.