ದುಬೈ: ರವಿವಾರದಂದು ದುಬೈಯ ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಸ್(ಬಿಸಿಸಿಐ) ಆಶ್ರಯದಲ್ಲಿ ನಡೆದ ‘ಬ್ಯಾರಿ ಮೇಳ-2025’ರಲ್ಲಿ ‘ತವಕ್ಕಲ್ ಓವರ್ಸೀಸ್’ನ ಇಸ್ಲಾಮಿಕ್ ಆ್ಯಪ್’ನ್ನು ಬಿಡುಗಡೆಗೊಳಿಸಲಾಯಿತು.

ಸಾಮಾಜಿಕ ಹಾಗು ಧಾರ್ಮಿಕ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ದುಬೈಯ ತವಕ್ಕಲ್ ಓವರ್ಸೀಸ್ ಸಂಘಟನೆಯ ಜಾಹೀರಾತು-ಮುಕ್ತ ಇಸ್ಲಾಮಿಕ್ ಅಪ್ಲಿಕೇಶನ್ “ತವಕ್ಕಲ್ ಮುಸ್ಲಿಂ” ಅನ್ನು ಬೆಂಗಳೂರು ಶಾಂತಿ ನಗರ ಶಾಸಕ N.A ಹಾರಿಸ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

“ತವಕ್ಕಲ್ ಮುಸ್ಲಿಂ” ಆ್ಯಪ್’ನ್ನು ಬ್ಯಾರಿಗಳ ತಂಡವು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ಈ ಅಪ್ಲಿಕೇಶನ್’ನಲ್ಲಿ ಇಸ್ಲಾಮಿನ ಆಧ್ಯಾತ್ಮಿಕ ವಿಷಯಗಳಾದ ನಮಾಝಿನ ಸಮಯ, ಕಿಬ್ಲಾ, ಕುರಾನ್, ಕ್ಯಾಲೆಂಡರ್, ದುವಾ, ಝಕಾತ್’ನ ಬಗ್ಗೆ ವಿವರಣೆ ಇದೆ. ಆಧುನಿಕ ಯುಗದಲ್ಲಿ ನಮ್ಮ ಬೆರಳ ತುದಿಯಲ್ಲಿ ಅಮೂಲ್ಯ ಮಾಹಿತಿಯನ್ನು ಒದಗಿಸುವಂತೆ ಈ ಆ್ಯಪ್’ನ್ನು ವಿನ್ಯಾಸಗೊಳಿಸಲಾಗಿದೆ. ಪ್ರಸ್ತುತ ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಐಒಎಸ್(iOS App) ಆ್ಯಪ್ ಸ್ಟೋರ್ ಎರಡರಲ್ಲೂ ಲಭ್ಯವಿದೆ ಎಂದು ತವಕ್ಕಲ್ ಓವರ್ಸೀಸ್’ನ ಅಬ್ದುಲ್ ರಝಕ್ ತಿಳಿಸಿದ್ದಾರೆ.

ಬಿಡುಗಡೆಯ ಸಂದರ್ಭದಲ್ಲಿ ದುಬೈಯ ತವಕ್ಕಲ್ ಓವರ್ಸೀಸ್’ನ ಅಧ್ಯಕ್ಷ ಇಲಿಯಾಸ್ ಅಹ್ಮದ್ ಉಚ್ಚಿಲ, ಮಾಜಿ ಅಧ್ಯಕ್ಷ ಅಬ್ದುಲ್ ರಝಕ್, ಉಪಾಧ್ಯಕ್ಷ ಶಮೀರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಝಬೀಹ್, ಅಬ್ದುಲ್ ರಹೀಮ್ ಶೇಖ್, ತನ್ವಿರ್ ಉಚ್ಚಿಲ, ಹಬೀಬ್ ಅಡ್ಡೂರು ಸೇರಿದಂತೆ ಮತ್ತಿತರರು ಹಾಜರಿದ್ದರು.
