ವಾರ್ತಾಭಾರತಿ ಮಾಧ್ಯಮ ಸಂಸ್ಥೆ ಅನಿವಾಸಿ ಕನ್ನಡಿಗರಿಗಾಗಿಯೇ ಮೀಸಲಾದ globalkannadiga.com ಎಂಬ ಹೊಸ ವೆಬ್ ಸೈಟ್ ಲೋಕಾರ್ಪಣೆ ಮಾಡುತ್ತಿರುವುದು ಬಹಳ ಸಂತೋಷದ ವಿಷಯ. ವಾರ್ತಾಭಾರತಿ ಸದಾ ಅನಿವಾಸಿ ಕನ್ನಡಿಗರಿಗೆ ಆದ್ಯತೆ ನೀಡುತ್ತಾ ಬಂದಿದೆ. ಅನಿವಾಸಿ ಕನ್ನಡಿಗರ ಕಾರ್ಯಕ್ರಮಗಳು, ಸಮಸ್ಯೆಗಳಿಗೆ ಪತ್ರಿಕೆ ಹಾಗು ವೆಬ್ ಸೈಟ್ ಗಳ ಮೂಲಕ ವಾರ್ತಾಭಾರತಿ ಧ್ವನಿಯಾಗಿದೆ. ಈಗ ಹೊಸ ವೆಬ್ ಸೈಟ್ globalkannadiga.com ಅನಿವಾಸಿ ಕನ್ನಡಿಗರ ಸುದ್ದಿ, ಮಾಹಿತಿ, ಅವರ ಸಾಧನೆಗಳು, ಅವರಿಗಿರುವ ಸವಾಲು, ಸಮಸ್ಯೆಗಳನ್ನು ಕರ್ನಾಟಕ ಸರಕಾರಕ್ಕೆ ತಲುಪಿಸುವ ವೇದಿಕೆಯಾಗಿ ಈ ಹೊಸ ವೆಬ್ ಸೈಟ್ ಕೆಲಸ ಮಾಡಲಿದೆ ಎಂಬ ಭರವಸೆ ನಮಗಿದೆ. ಇದು ಜಗತ್ತಿನ ಎಲ್ಲ ದೇಶಗಳ ಕನ್ನಡಿಗರನ್ನು ತಲುಪಲಿ, ಅವರ ಆಶೋತ್ತರಗಳಿಗೆ ಸ್ಪಂದಿಸಲಿ. ಶುಭವಾಗಲಿ.
ಬಿ ಝಕರಿಯಾ ಜೋಕಟ್ಟೆ
ಸಿಇಒ, ಅಲ್ ಮುಝೈನ್, ಜುಬೈಲ್, ಸೌದಿ ಅರೇಬಿಯಾ