ಯುಎಇಅಬ್ದುಲ್ಲ ಮಾದುಮೂಲೆಗೆ ಅಬುಧಾಬಿಯಲ್ಲಿ ಅದ್ಧೂರಿ ಬೀಳ್ಕೊಡುಗೆ

ಅಬ್ದುಲ್ಲ ಮಾದುಮೂಲೆಗೆ ಅಬುಧಾಬಿಯಲ್ಲಿ ಅದ್ಧೂರಿ ಬೀಳ್ಕೊಡುಗೆ

ಅಬುಧಾಬಿ: ಇಪ್ಪತ್ತೈದು ವರ್ಷಗಳ ದೀರ್ಘಕಾಲ ಅನಿವಾಸಿ ಜೀವನವನ್ನು ಕೊನೆಗೊಳಿಸಿ ತಾಯ್ನಾಡಿಗೆ ಮರಳುತ್ತಿರುವ ಸಾಮಾಜಿಕ ಮುಂದಾಳು, ಝಾಎದ್ ಫೌಂಡೇಶನ್ ಅಬುಧಾಬಿ ಇದರ ಆರ್ಥಿಕ ತಜ್ಞ , ಇಂಡಿಯನ್ ಸ್ಕೂಲ್ ಅಬುಧಾಬಿ ಇದರ ಬೋರ್ಡ್ ಸದಸ್ಯರೂ ಆಗಿದ್ದ ಅಬ್ದುಲ್ಲ ಮಾದುಮೂಲೆಯವರಿಗೆ ಅನಿವಾಸಿ ಕನ್ನಡಿಗ ಸಂಘಟನೆಯಾದ ಕೆಸಿಎಫ್ ಯುಎಇ ಇದರ ವತಿಯಿಂದ ಅದ್ಧೂರಿ ಬೀಳ್ಕೊಡುಗೆ ಸಮಾರಂಭವನ್ನು ಕೆಸಿಎಫ್ ಅಬುಧಾಬಿ ಕಚೇರಿಯಲ್ಲಿ ನಡೆಸಲಾಯ್ತು.

ಹಸೈನಾರ್ ಅಮಾನಿಯವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ಪ್ರಸ್ತುತ ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರ್‌ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಅಬ್ದುಲ್ ಹಮೀದ್ ಪಿಎಂಎಚ್, ಹಕೀಂ ತುರ್ಕಳಿಕೆ, ಕೆ ಎಚ್ ಸಖಾಫಿ ಮೊದಲಾದವರು ಮಾತನಾಡಿದರು.

ಸಂಘಟನೆಯ ಗೌರವ ಸ್ಮರಣಕೆಗಳನ್ನು ಸ್ವೀಕರಿಸಿದ ಅಬ್ದುಲ್ಲ ಮಾದುಮೂಲೆಯವರು ಕೆಸಿಎಫ್ ನ ಸಾಮಾಜಿಕ ಸಾಂಸ್ಕೃತಿಕ ಸೇವಾ ಚಟುವಟಿಕೆಯೊಂದಿಗಿನ ಅಭಿಮಾನವನ್ನು ಹಾಗೂ ಉತ್ತರ ಕರ್ನಾಟಕದಲ್ಲಿ ನಡೆಸಿಕೊಂಡು ಬರುತ್ತಿರುವ ಶೈಕ್ಷಣಿಕ ಕ್ರಾಂತಿಯನ್ನೂ ಅಭಿನಂದಿಸಿ ಮಾತನಾಡಿದರು. ಅದೇ ರೀತಿ ಸಮುದಾಯದ ಹಕ್ಕುಗಳ ರಕ್ಷಣೆಗೆ ವಿದ್ಯಾಭ್ಯಾಸ ಒಂದೇ ದಾರಿ, ಆದುದರಿಂದ ಯುವ ಸಮೂಹವು ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕಾಗಿದೆ ಎಂದರು.

ಕಬೀರ್ ಬಾಯಂಬಾಡಿ ಸ್ವಾಗತಿಸಿದರು. ಉಮರ್ ಈಶ್ವರಮಂಗಲ ವಂದಿಸಿದರು.

Hot this week

ಕನ್ನಡ ಸಂಘ ಬಹರೈನ್; ಸೆಪ್ಟೆಂಬರ್ 5ರಂದು ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ

ಬಹರೈನ್: ಬಹರೈನ್‌ನಲ್ಲಿರುವ ಕನ್ನಡ ಸಮುದಾಯವನ್ನು ಕನ್ನಡ ಸಂಘ ಬಹರೈನ್‌ನ ನೂತನ ಕಾರ್ಯಕಾರಿ...

ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಗ್ಗೆ 8:30ಕ್ಕೆ...

ಬಹರೈನ್ ರೇಡಿಯೋ ಆರ್ ಜೆ ಕಮಲಾಕ್ಷ ಅಮೀನ್​ಗೆ ‘ಗೋಲ್ಡನ್ ಐಕಾನಿಕ್ ಅವಾರ್ಡ್’ ಗೌರವ ಪ್ರಶಸ್ತಿ

ಮಂಗಳೂರು: ಬಹರೈನ್ ನ ಕಸ್ತೂರಿ ಕನ್ನಡ ಎಫ್ಎಂ ರೇಡಿಯೋ ಆರ್ ಜೆ...

Related Articles

Popular Categories