ಕುವೈತ್ಕುವೈತ್‌: ಅಗ್ನಿ ಅವಘಡದಲ್ಲಿ ಕೇರಳ ಮೂಲದ ಒಂದೇ ಕುಟುಂಬದ...

ಕುವೈತ್‌: ಅಗ್ನಿ ಅವಘಡದಲ್ಲಿ ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ಮೃತ್ಯು

ಕುವೈತ್‌: ಕುವೈತ್‌ನ ಅಬ್ಬಸ್ಸಿಯಾ ಎಂಬಲ್ಲಿನ ತಮ್ಮ ನಿವಾಸದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕೇರಳದ ಪಟ್ಟಣಂತಿಟ್ಟ ಮೂಲದ ಒಂದೇ ಕುಟುಂಬದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಮೃತರನ್ನು ಮ್ಯಾಥ್ಯೂ ಮುಝಕ್ಕಲ್‌, ಅವರ ಪತ್ನಿ ಲಿನಿ ಅಬ್ರಹಾಂ ಮತ್ತು ಮಕ್ಕಳಾದ ಐಸಾಕ್‌ ಮತ್ತು ಎರಿನ್‌ ಎಂದು ಗುರುತಿಸಾಗಿದೆ.

ರಜೆಯನ್ನು ತಮ್ಮ ಊರಾದ ನೆಡುಂಬಸ್ಸೆರಿಯಲ್ಲಿ ಕಳೆದು ಗುರುವಾರ ರಾತ್ರಿಯಷ್ಟೇ ಕುಟುಂಬ ಕುವೈತ್‌ಗೆ ಮರಳಿತ್ತು. ಮ್ಯಾಥ್ಯೂ ಕುವೈತ್‌ನಲ್ಲಿ 15 ವರ್ಷಗಳಿಂದ ಉದ್ಯೋಗದಲ್ಲಿದ್ದರು. ಪತ್ನಿ ನರ್ಸ್‌ ಆಗಿದ್ದರು, ಮಕ್ಕಳೂ ಕುವೈತ್‌ನ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಕೊಠಡಿಯಲ್ಲಿದ್ದ ಎಸಿಯಲ್ಲಿ ಉಂಟಾದ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

Hot this week

ದುಬೈ; ಅ.11ರಂದು ‘ಗಮ್ಮತ್ ಕಲಾವಿದೆರ್ ದುಬೈ’ ತಂಡದಿಂದ ‘ಪೋನಗ ಕೊನೊಪರಾ..?’ ನಾಟಕ

ದುಬೈ: ಯುಎಇಯಲ್ಲಿರುವ ನಾಟಕ ಅಭಿಮಾನಿಗಳಿಗೆ ಕಳೆದ ಹಲವಾರು ವರ್ಷಗಳಿಂದ ಮನರಂಜನೆ ನೀಡುತ್ತಾ...

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

Related Articles

Popular Categories