ಖತರ್ಖತರ್ ಪ್ರಧಾನಿ ಭೇಟಿಯಾದ ವಿದೇಶಾಂಗ ಸಚಿವ ಜೈಶಂಕರ್

ಖತರ್ ಪ್ರಧಾನಿ ಭೇಟಿಯಾದ ವಿದೇಶಾಂಗ ಸಚಿವ ಜೈಶಂಕರ್

ದೋಹ : ವಿದೇಶಾಂಗ ಸಚಿವ ಎಸ್. ಜೈಶಂಕರ್ ರವಿವಾರ ಖತರ್ ಪ್ರಧಾನಿ ಮುಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಾಸಿಮ್ ಅಲ್‍ಥಾನಿಯನ್ನು ಭೇಟಿ ಮಾಡಿದ್ದು ಉಭಯ ನಾಯಕರು ರಾಜಕೀಯ, ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ಸಂಸ್ಕøತಿ ಮತ್ತು ಜನರ ನಡುವಿನ ಸಂಬಂಧಗಳನ್ನು ಕೇಂದ್ರೀಕರಿಸಿ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದರು.

ಖತರ್ ಗೆ ಒಂದು ದಿನದ ಭೇಟಿಗಾಗಿ ಆಗಮಿಸಿದ್ದ ಜೈಶಂಕರ್ ವಿದೇಶಾಂಗ ಖಾತೆಯನ್ನು ಹೊಂದಿರುವ ಮುಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅವರೊಂದಿಗೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಭಾರತ-ಖತರ್ ಸಂಬಂಧಗಳ ಮತ್ತಷ್ಟು ವರ್ಧನೆ, ಮತ್ತು ಪರಸ್ಪರ ಹಿತಾಸಕ್ತಿಯ ವಿಷಯಗಳ ಕುರಿತು ನಿರಂತರ ಮಾತುಕತೆ ಮುಂದುವರಿಸಲು ಎರಡೂ ದೇಶಗಳು ಸಮ್ಮತಿಸಿವೆ ಎಂದು ಭಾರತದ ವಿದೇಶಾಂಗ ಇಲಾಖೆ `ಎಕ್ಸ್’ ಮಾಡಿದೆ.

Hot this week

ಬಹರೈನ್‌ನಲ್ಲಿ ಡಿ.19ರಂದು ಉಡುಪಿ ಪ್ರಜ್ಞಾನಂ ತಂಡದಿಂದ ‘ಹೆಜ್ಜಗೊಲಿದ ಬೆಳಕು’ ನಾಟಕ ಪ್ರದರ್ಶನ

ಬಹರೈನ್: ಬಹರೈನ್‌ನ ಕನ್ನಡ ಸಂಘದ ಆಶ್ರಯದಲ್ಲಿ ಉಡುಪಿ ಪ್ರಜ್ಞಾನಂ ಟ್ರಸ್ಟ್ (ರಿ)ನಿರ್ಮಿಸಿದ...

ದುಬೈ; ಅದ್ದೂರಿಯಾಗಿ ನಡೆದ ಯುಎಇ ಬಂಟ್ಸ್‌ನ 48ನೇ ವರ್ಷದ ಕೂಡುಕಟ್ಟ್ ‘ಭಾವೈಕ್ಯ’ ಬಂಟರ ಸಮಾಗಮ

​ದುಬೈ: ಇಲ್ಲಿನ ಶೇಖ್ ಝಾಯೆದ್ ರಸ್ತೆಯಲ್ಲಿರುವ ಮಿಲೆನಿಯಂ ಪ್ಲಾಝಾ ಹೋಟೆಲ್‌ನ ಸಭಾಂಗಣದಲ್ಲಿ...

Al Qamar Moolur Family fest held in Umm Al Quwain

Umm Al Quwain: Al Qamar Moolur Family Fest 2025...

ಕಲಾದರ್ಪಣ 2025: ಕುವೈತ್ ಕನ್ನಡ ಕೂಟದ ಅದ್ದೂರಿ ರಾಜ್ಯೋತ್ಸವ; ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಸಮ್ಮಿಲನ

ಕುವೈತ್: ಕುವೈತ್ ಕನ್ನಡ ಕೂಟ ಒಂದು ಸಾಮಾಜಿಕ-ಸಾಂಸ್ಕೃತಿಕ ಸಂಘಟನೆ, 41 ವರ್ಷಗಳಿಂದ...

ಅಜ್ಮಾನ್; ತುಂಬೆ ಸಮೂಹ ಸಂಸ್ಥೆಯಿಂದ BCF ಅಧ್ಯಕ್ಷ ಡಾ.ಬಿ.ಕೆ.ಯೂಸುಫ್​ಗೆ ʼLIFE TIME ACHIEVEMENT AWARDʼ

ಅಜ್ಮಾನ್: ತುಂಬೆ ಸಂಸ್ಥೆಯ 28ನೇ ವಾರ್ಷಿಕ ಅನಿವಾಸಿ ಕನ್ನಡಿಗರ ಸ್ನೇಹ ಸಮ್ಮಿಳನ...

Related Articles

Popular Categories