ಯುಎಇಬ್ಯಾರೀಸ್ ವೆಲ್ಫೇರ್ ಫೋರಮ್ ವತಿಯಿಂದ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ...

ಬ್ಯಾರೀಸ್ ವೆಲ್ಫೇರ್ ಫೋರಮ್ ವತಿಯಿಂದ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮಾದುಮೂಲೆಗೆ ಬೀಳ್ಕೊಡುಗೆ

ಅಬುಧಾಬಿ: ತಾಯ್ನಾಡಿಗೆ ವಾಸ್ತ್ಯವ್ಯ ಬದಲಿಸುತ್ತಿರುವ ಅಬ್ದುಲ್ಲಾ ಮಾದುಮೂಲೆ ಅವರಿಗೆ ಬ್ಯಾರೀಸ್ ವೆಲ್ಫೇರ್ ಫೋರಮ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು.

ನಗರದ ಗ್ರಾಂಡ್ ಕಾಂಟಿನೆಂಟಲ್ ಹೋಟೆಲ್‌ನಲ್ಲಿ ನಡೆದ ಸಮಾರಂಭವು ಬಿ.ಡಬ್ಲ್ಯೂ.ಫ್ ಅಧ್ಯಕ್ಷ ಮೊಹಮ್ಮದ್ ಅಲಿ ಉಚ್ಚಿಲ್ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಅಬ್ದುಲ್ಲಾ ಮಾದುಮೂಲೆ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಅಬ್ದುಲ್ಲ ಮಾದುಮೂಲೆ ತಾವು ನಡೆದು ಬಂದ ದಾರಿ, ಬಿ ಡಬ್ಲ್ಯೂ ಫ್ ನೊಂದಿಗಿನ 22 ವರ್ಷದ ನಂಟನ್ನು ನೆನಪಿಸಿ ಭಾವುಕರಾದರು. ಮೊಹಮ್ಮದ್ ಅಲಿ ಉಚ್ಚಿಲ್ ತಮ್ಮ ಮತ್ತು ಮಾದುಮೂಲೆಯವರ ದೀರ್ಘಕಾಲದ ಸ್ನೇಹ, ಸಮುದಾಯ ಸೇವೆಯಲ್ಲಿ ಒಟ್ಟಿನ ಪಯಣ ಕುರಿತು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

Hot this week

400 ಭಾರತೀಯರನ್ನು ತಾಯ್ನಾಡಿಗೆ ಕಳುಹಿಸಿದ ಬಹರೈನ್ ಕನ್ನಡ ಸಂಘ!

ಬಹರೈನ್: ತಾಯ್ನಾಡಿಗೆ ಮರಳಲು ಬಯಸಿದ ಸುಮಾರು 400 ಭಾರತೀಯರಿಗೆ ಕನ್ನಡ ಸಂಘ...

ಗಲ್ಫ್ ಸಂಘರ್ಷದ ನಡುವೆಯೂ ಪ್ರಯಾಣಿಕರಿಗೆ ‘ಓಯಸಿಸ್’ ಆಗಿರುವ ಒಮಾನ್!

ಮಸ್ಕತ್: ಇರಾನ್–ಅಮೇರಿಕ ಸಂಘರ್ಷದ ಪರಿಣಾಮವಾಗಿ ಮಧ್ಯಪ್ರಾಚ್ಯದ ವಾಯುಪ್ರದೇಶದಲ್ಲಿ ಅನಿಶ್ಚಿತತೆ ಉಂಟಾದ ಹಿನ್ನೆಲೆಯಲ್ಲಿ...

ಜರ್ಮನಿ; ರೈನ್ ಮೈನ್ ಕನ್ನಡ ಸಂಘದ ನೂತನ ಅಧ್ಯಕ್ಷರಾಗಿ ಲೋಕನಾಥ ರಾವ್ ಚೌಹಾಣ್ ಆಯ್ಕೆ

ಜರ್ಮನಿ: ರೈನ್ ಮೈನ್ ಕನ್ನಡ ಸಂಘದ ವಾರ್ಷಿಕ ಸಭೆಯು ಇತ್ತೀಚೆಗೆ ಜರ್ಮನಿಯ...

ಕೊಲ್ಲಿ ಯುದ್ಧ; ಗಲ್ಫ್ ರಾಷ್ಟ್ರಗಳಲ್ಲಿ ಅಗತ್ಯವಸ್ತುಗಳ ಮೇಲೆ ಬೀರುತ್ತಿದೆ ಪರಿಣಾಮ!

ಸೌದಿ ಅರೇಬಿಯಾ: ಅಮೇರಿಕ-ಇಸ್ರೇಲ್ ಹಾಗೂ ಇರಾನ್ ಮಧ್ಯೆ ನಡುಯುತ್ತಿರುವ ಸಂಘರ್ಷವು ಮುಂದುವರಿಯುತ್ತಿರುವುದರಿಂದ...

Related Articles

Popular Categories