ಇತರೆಒಮಾನ್ ಕರಾವಳಿಯಲ್ಲಿ ಮುಳುಗಿದ ತೈಲ ಟ್ಯಾಂಕರ್: 13 ಭಾರತೀಯರು...

ಒಮಾನ್ ಕರಾವಳಿಯಲ್ಲಿ ಮುಳುಗಿದ ತೈಲ ಟ್ಯಾಂಕರ್: 13 ಭಾರತೀಯರು ನಾಪತ್ತೆ

ಮಸ್ಕತ್: ಸೋಮವಾರ ಒಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮುಳುಗಿದ ಪ್ರಕರಣದಲ್ಲಿ 13 ಮಂದಿ ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ದೇಶದ ಸಾಗರ ಭದ್ರತಾ ಕೇಂದ್ರ ಪ್ರಕಟಿಸಿದೆ.‌

“ಪ್ರೆಸ್ಟೀಜ್ ಫಾಲ್ಕನ್” ಹೆಸರಿನ ಹಡಗಿನಲ್ಲಿ 13 ಮಂದಿ ಭಾರತೀಯರು ಮತ್ತು ಮೂವರು ಶ್ರೀಲಂಕನ್ನರು ಇದ್ದರು ಎಂದು ಒಮಾನಿ ಕೇಂದ್ರ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.

ಹಡಗು ಮಗುಚಿದ ಸ್ಥಿತಿಯಲ್ಲೇ ಇನ್ನೂ ಮುಳುಗಿಕೊಂಡಿದೆ ಎಂದು ಸಾಗರ ಭದ್ರತಾ ಕೇಂದ್ರ ಹೇಳಿದ್ದಾಗಿ ರಾಯ್ಟರ್ಸ್ ವರದಿ ಮಾಡಿದೆ. ಹಡಗಿನಿಂದ ಇನ್ನೂ ತೈಲ ಉತ್ಪನ್ನಗಳು ಸೋರಿಕೆಯಾಗುತ್ತಿವೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ.

ಶಿಪ್ಪಿಂಗ್ ವೆಬ್ ಸೈಟ್ ಮೆರಿಟ್ರಾಫಿಕ್.ಕಾಮ್ ಪ್ರಕಾರ, ದುಬೈನ ಹಮ್ರಿಯಾದಿಂದ ಹೊರಟ ಈ ಹಡಗು ಯೆಮನ್ ನ ಅಡೇನ್ ಬಂದರು ನಗರಕ್ಕೆ ಪ್ರಯಾಣಿಸುತ್ತಿತ್ತು. ನಾಲ್ಕು ದಿನ ಹಿಂದೆ ಇದರ ನಿಖರ ಸ್ಥಳದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪ್ರೆಸ್ಟೀಜ್ ಫಾಲ್ಕನ್ ಹಡಗು 117 ಮೀಟರ್ ಉದ್ದದ್ದಾಗಿದ್ದು, 2007ರಲ್ಲಿ ಈ ತೈಲ ಟ್ಯಾಂಕರ್ ನಿರ್ಮಿಸಲಾಗಿತ್ತು.

Hot this week

ಬಹರೈನ್; ಆಗಸ್ಟ್ 21ರಂದು ‘ಕೆಸಿಎಫ್’ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ...

ಭಾರತೀಯ ರಾಯಭಾರ ಕಚೇರಿಯ ಡಾ.ಈಶ್ ಸಿಂಘಾಲ್​​ಗೆ ಭಾವಪೂರ್ಣ ಬೀಳ್ಕೊಡುಗೆ; ಕರ್ನಾಟಕ ಸಂಘ ಖತರ್‌ನಿಂದ ಅಭಿನಂದನೆ

ದೋಹಾ(ಖತರ್): ಖತರ್‌ನಲ್ಲಿ ತಮ್ಮ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ರಾಯಭಾರ ಕಚೇರಿಯ...

ವಂದೇ ಮಾತರಂ ಮತ್ತು ಜನಗಣಮನ ಗೀತೆಯೊಂದಿಗೆ ಅಮೇರಿಕದಲ್ಲಿ ಗೃಹಪ್ರವೇಶ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ 1875ರಲ್ಲಿ ಭಾರತದಲ್ಲಿ ಮೊಳಗಿದ ‘ವಂದೇ ಮಾತರಂ’ 150...

ದುಬೈ; ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಸಾಮಾಜಿಕ ಸಮ್ಮಿಲನ ಕಾರ್ಯಕ್ರಮ

ದುಬೈ: ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಬದ್ಧವಾಗಿರುವ...

ನ್ಯೂಯಾರ್ಕ್; ಆಲ್ಬನಿಯಲ್ಲಿ ಸಂಭ್ರಮದ ಕನ್ನಡ ಕಲಿ ಪದವಿ ಪ್ರದಾನ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಆಲ್ಬನಿ(ನ್ಯೂಯಾರ್ಕ್): ಅಮೇರಿಕದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ...

Related Articles

Popular Categories