ಯುಎಇಯುಎಇಯಲ್ಲಿ ಉದ್ಯಮ ಚಟುವಟಿಕೆಗೆ 26 ವರ್ಷ: ತುಂಬೆ ಸಮೂಹದಿಂದ...

ಯುಎಇಯಲ್ಲಿ ಉದ್ಯಮ ಚಟುವಟಿಕೆಗೆ 26 ವರ್ಷ: ತುಂಬೆ ಸಮೂಹದಿಂದ ಸಂಭ್ರಮಾಚರಣೆ

ದುಬೈ, ಆ. 19: ತುಂಬೆ ಸಮೂಹ ಸಂಸ್ಥೆ ಅರಬ್ ಎಮಿರೇಟ್ಸ್‌ನಲ್ಲಿ ತನ್ನ ಉದ್ಯಮ ಚಟುವಟಿಕೆಗಳಿಗೆ 2024 ಆಗಸ್ಟ್‌ಗೆ 26 ವರ್ಷಗಳು ತುಂಬಿದ ಸಂಭ್ರಮದಲ್ಲಿದೆ.

ಈ ಪಯಣದ ಬಗ್ಗೆ ಪ್ರತಿಕ್ರಿಯಿಸಿರುವ ತುಂಬೆ ಸಮೂಹದ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯ್ದಿನ್, ‘‘ಯುಎಇಯಲ್ಲಿ ನಮ್ಮ 26 ವರ್ಷಗಳ ಪಯಣ ಭಾರತ ಹಾಗೂ ಯುಎಇ ನಡುವಿನ ಬಲವಾದ ದ್ವಿಪಕ್ಷೀಯ ಸಂಬಂಧವನ್ನು ದೃಡೀಕರಿಸಿದೆ. ಅಲ್ಲದೆ, ಯುಎಇ ಸರಕಾರ ಹಾಗೂ ಅದರ ದೂರದೃಷ್ಟಿಯ ನಾಯಕರಿಂದ ನಾವು ಯಥೇಚ್ಚ ಬೆಂಬಲ ಪಡೆದಿದ್ದೇವೆ’’ ಎಂದಿದ್ದಾರೆ.

ಅವರು ನೀಡಿದ ಪ್ರೋತ್ಸಾಹ ಭಾರತೀಯ ಉದ್ಯಮಗಳು ಅಭಿವೃದ್ಧಿ ಹೊಂದುವ ಹಾಗೂ ರಾಷ್ಟ್ರ ಪ್ರಗತಿಗೆ ಅರ್ಥಪೂರ್ಣ ಕೊಡುಗೆ ನೀಡುವ ಪರಿಸರ ವ್ಯವಸ್ಥೆಯನ್ನು ರೂಪಿಸಿದೆ ಎಂದು ತುಂಬೆ ಮೊಯ್ದಿನ್ ತಿಳಿಸಿದ್ದಾರೆ.

2028ರ ಆಶಯಕ್ಕೆ ಅನುಗುಣವಾಗಿ ನಮ್ಮ ಜಾಗತಿಕ ಕಾರ್ಯಾಚರಣೆಯನ್ನು ಇನ್ನಷ್ಟು ವಿಸ್ತರಿಸುವ ಹಾಗೂ ನೂತನ ಉಪಕ್ರಮಗಳನ್ನು ಪರಿಚಯಿಸುವ ಅವಕಾಶಗಳ ಕುರಿತು ಉತ್ಸುಕರಾಗಿದ್ದೇವೆ. ಆ ಮೂಲಕ ಈ ಕ್ಷೇತ್ರದಲ್ಲಿ ನಮ್ಮ ಸಾಧನೆ ಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಬದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

1997ರಲ್ಲಿ ಡಾ. ತುಂಬೆ ಮೊಯ್ದಿನ್ ಅವರು ಸ್ಥಾಪಿಸಿದ ಈ ಸಮೂಹ ತನ್ನ ಪ್ರಮುಖ ಉದ್ಯಮವಾದ ಗಲ್ಫ್ ವೈದ್ಯಕೀಯ ವಿಶ್ವವವಿದ್ಯಾನಿಲಯದೊಂದಿಗೆ ಯುಎಇಯ ಆರೋಗ್ಯ ಸೇವೆ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಶಕ್ತಿ ಯಾಗಿದೆ ಬೆಳವಣಿಗೆ ಹೊಂದಿದೆ. ಭಾರತೀಯ ಉದ್ಯಮಿ ನಿರ್ವಹಿಸುತ್ತಿರುವ ಅತಿ ದೊಡ್ಡ ಖಾಸಗಿ ವೈದ್ಯಕೀಯ ವಿಶ್ವವಿದ್ಯಾನಿಲಯವಾಗಿ ಪ್ರಗತಿಯಾಗಿದೆ ಹಾಗೂ ಯುಎಇಗೆ ಶೇ. 60ರಷ್ಟು ವೈದ್ಯರನ್ನು ಪೂರೈಸುತ್ತದೆ. ಶೈಕ್ಷಣಿಕ ಆರೋಗ್ಯ ವ್ಯವಸ್ಥೆಯಾಗಿ ಗುರುತಿಸಲಾದ ಈ ವಿಶ್ವವಿದ್ಯಾನಿಲಯ ಆರೋಗ್ಯ ಸೇವೆ, ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ಉತ್ಕೃಷ್ಟವಾಗಿದೆ.

Hot this week

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

ಅದ್ದೂರಿಯಾಗಿ ನಡೆದ ಕರ್ನಾಟಕ ಸಂಘ ಖತರ್‌ನ ‘ಎಂಜಿನಿಯರ್ಸ್ ಡೇ’

ದೋಹಾ(ಖತರ್): ಜಗಮೆಚ್ಚಿದ ಎಂಜಿನಿಯರ್ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ...

Related Articles

Popular Categories