ಯುಎಇಯುಎಇಯಲ್ಲಿ 40 ಲಕ್ಷದ ಸನಿಹ ತಲುಪಿದ ಅನಿವಾಸಿ ಭಾರತೀಯರ...

ಯುಎಇಯಲ್ಲಿ 40 ಲಕ್ಷದ ಸನಿಹ ತಲುಪಿದ ಅನಿವಾಸಿ ಭಾರತೀಯರ ಸಂಖ್ಯೆ

ದುಬೈ/ಯುಎಇ: ಯುಎಇಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸಂಖ್ಯೆ ಸಾರ್ವಕಾಲಿಕ ದಾಖಲೆಯತ್ತ ಸಾಗಿದೆ. ದುಬೈ ಕಾನ್ಸುಲೇಟ್‌ನ ಇತ್ತೀಚೆಗಿನ  ಹೊಸ ಲೆಕ್ಕಾಚಾರಗಳ ಪ್ರಕಾರ 39 ಲಕ್ಷ ಅನಿವಾಸಿ ಭಾರತೀಯರು ಯುಎಇಯಲ್ಲಿ ನೆಲೆಸಿರುವುದಾಗಿ ತಿಳಿದು ಬಂದಿದೆ.

ಯುಎಇಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸಂಖ್ಯೆ 40 ಲಕ್ಷದ ಸನಿಹ ತಲುಪುತ್ತಿದೆ ಎಂದು ದುಬೈಯ ಭಾರತೀಯ ಕಾನ್ಸುಲ್ ಜನರಲ್ ಸತೀಶ್ ಸಿವನ್ ತಿಳಿಸಿದ್ದಾರೆ. ಕಳೆದ ವರ್ಷದ ಲೆಕ್ಕಾಚಾರಗಳ ಪ್ರಕಾರ 39 ಲಕ್ಷ ಜನರು ಭಾರತದಿಂದ ಯುಎಇಗೆ ಆಗಮಿಸಿದ್ದಾರೆಂದು ಅವರು ತಿಳಿಸಿದ್ದಾರೆ.

ಇನ್‌ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ದುಬೈ ಚಾಪ್ಟರ್ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಸತೀಶ್ ಸಿವನ್, 2012ರಲ್ಲಿ ಈ ಸಂಖ್ಯೆ 22 ಲಕ್ಷವಿತ್ತು. ಆದರೆ ಕೇವಲ 12 ವರ್ಷಗಳಲ್ಲಿ 17 ಲಕ್ಷ ಜನರು ಭಾರತದಿಂದ ಯುಎಇಗೆ ಬಂದಿದ್ದಾರೆ. 2023ರಲ್ಲಿ ಮಾತ್ರ 1 ಲಕ್ಷದ 30 ಸಾವಿರ ಜನ ಭಾರತದಿಂದ ಯುಎಇಗೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಯುಎಇಯಲ್ಲಿನ ಭಾರತೀಯರ ಹೆಚ್ಚಳದಿಂದಾಗಿ ಈ ಎರಡೂ ರಾಷ್ಟ್ರಗಳ ಸಂಬಂಧವನ್ನು ಗಟ್ಟಿಗೊಳಿಸಿದೆ. ಯುಎಇಯ ಆರೋಗ್ಯ, ರಿಯಲ್ ಎಸ್ಟೇಟ್, ರಿಟೈಲ್ ಕ್ಷೇತ್ರಗಳಲ್ಲಿ ಭಾರತೀಯ ಹೆಚ್ಚಿನ ಹೂಡಿಕೆಯನ್ನು ಮಾಡುತ್ತಿದ್ದು, ಇದು ಯುಎಇಯ ಬೆಳವಣಿಗೆಗೆ ಕೊಡುಗೆಯನ್ನು ನೀಡುತ್ತಿದೆ ಎಂದು ಸತೀಶ್ ಸಿವನ್ ತಿಳಿಸಿದ್ದಾರೆ.

Hot this week

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್​​ರನ್ನು ಗೌರವಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗುವಂತೆ, ಮಂಗಳೂರಿನ ಸಾಹಸಿ ಸೋಲೋ ವಿಶ್ವ...

ಕನ್ನಡ ಸಂಘ ಬಹರೈನ್‌ಗೆ ಪ್ರತಿಷ್ಠಿತ “ನವ ಕರ್ನಾಟಕ ರತ್ನ” ಪ್ರಶಸ್ತಿ

ಬೆಂಗಳೂರು: ಕನ್ನಡ ಭಾಷೆ, ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರ...

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ...

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

Related Articles

Popular Categories