ದುಬೈ/ ಯುಎಇ: ಕಳೆದ ನಾಲ್ಕು ತಿಂಗಳಿನಿಂದ ಯುಎಇಯಲ್ಲಿದ್ದ ಸಾರ್ವಜನಿಕ ಕ್ಷಮಾಪಣೆ ಅಭಿಯಾನ ಡಿ.31ಕ್ಕೆ ಅಂತ್ಯಗೊಳ್ಳಲಿದೆ. ಈ ಅವಧಿಯೊಳಗೆ ಸೂಕ್ತ ದಾಖಲೆಗಳಿಲ್ಲದ ಅನಿವಾಸಿಗರು ಶರಣಾಗುವ ಮೂಲಕ ಸ್ವಂತ ಊರಿಗೆ ಹಿಂದಿರುಗಬಹುದು. ಇಲ್ಲವೇ ದಾಖಲೆಗಳನ್ನು ಸರಿಪಡಿಸಬಹುದು ಎಂದು ದುಬೈಯ ಜಿಡಿಆರ್‌ಎಫ್‌ಎ ನಿರ್ದೇಶಕ ಜ.ಲೆ.ಜ.ಮುಹಮ್ಮದ್ ಅಹ್ಮದ್ ಅಲ್ ಮರಿ ಹೇಳಿದ್ದಾರೆ.
ಸಾರ್ವಜನಿಕ ಕ್ಷಮಾಪಣೆ ಅವಧಿ ಮುಗಿದ ಬಳಿಕ ಕಾನೂನು ಉಲ್ಲಂಘಿಸಿ ನೆಲೆಸಿರುವವರನ್ನು ಪತ್ತೆಹಚ್ಚಿಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.
ಈ ನಾಲ್ಕು ತಿಂಗಳ ಕ್ಷಮಾಪಣ ಕಾಲಾವಧಿಯು ಯುನೈಟಡ್ ಅರಬ್ ಎಮಿರೇಟ್ಸ್‌ನ ಮಾನವೀಯತೆಯ ಉದಾಹರಣೆಯಾಗಿದ್ದು, ಇದರ ಸದುಪಯೋಗವನ್ನು ಹಲವರು ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಯುಎಇಯಲ್ಲಿ ಬಹಳಷ್ಟು ಜನರು ಎದುರಿಸುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಅಹ್ಮದ್ ಅಲ್ ಮರಿ, ತಂದೆಯ ಸೂಕ್ತ ದಾಖಲೆಗಳಿಲ್ಲದ ಯುಎಇಯಲ್ಲಿ ಜನಿಸಿದ ಹಲವು ಮಕ್ಕಳ ವ್ಯಾಕ್ಸಿನೇಶನ್ ಸಮಸ್ಯೆ ಸಹಿತ ಹಲವು ಸಮಸ್ಯೆಗಳನ್ನು ಪರಿಹರಿಸಿದೆ ಎಂದು ತಿಳಿಸಿದ್ದಾರೆ.

ಯುಎಇ: ಡಿ.31ಕ್ಕೆ ಸಾರ್ವಜನಿಕ ಕ್ಷಮಾಪಣೆ ಅಂತ್ಯ
4 ತಿಂಗಳ ಅಭಿಯಾನದಲ್ಲಿ ಹಲವು ಅನಿವಾಸಿಯರಿಗೆ ಲಾಭ
Popular Categories