ಯುಎಇಯುಎಇ: ಡಿ.31ಕ್ಕೆ ಸಾರ್ವಜನಿಕ ಕ್ಷಮಾಪಣೆ ಅಂತ್ಯ

ಯುಎಇ: ಡಿ.31ಕ್ಕೆ ಸಾರ್ವಜನಿಕ ಕ್ಷಮಾಪಣೆ ಅಂತ್ಯ

4 ತಿಂಗಳ ಅಭಿಯಾನದಲ್ಲಿ ಹಲವು ಅನಿವಾಸಿಯರಿಗೆ ಲಾಭ


ದುಬೈ/ ಯುಎಇ: ಕಳೆದ ನಾಲ್ಕು ತಿಂಗಳಿನಿಂದ ಯುಎಇಯಲ್ಲಿದ್ದ ಸಾರ್ವಜನಿಕ ಕ್ಷಮಾಪಣೆ ಅಭಿಯಾನ ಡಿ.31ಕ್ಕೆ ಅಂತ್ಯಗೊಳ್ಳಲಿದೆ. ಈ ಅವಧಿಯೊಳಗೆ ಸೂಕ್ತ ದಾಖಲೆಗಳಿಲ್ಲದ ಅನಿವಾಸಿಗರು ಶರಣಾಗುವ ಮೂಲಕ ಸ್ವಂತ ಊರಿಗೆ ಹಿಂದಿರುಗಬಹುದು. ಇಲ್ಲವೇ ದಾಖಲೆಗಳನ್ನು ಸರಿಪಡಿಸಬಹುದು ಎಂದು ದುಬೈಯ ಜಿಡಿಆರ್‌ಎಫ್‌ಎ ನಿರ್ದೇಶಕ ಜ.ಲೆ.ಜ.ಮುಹಮ್ಮದ್ ಅಹ್ಮದ್ ಅಲ್ ಮರಿ ಹೇಳಿದ್ದಾರೆ.
ಸಾರ್ವಜನಿಕ ಕ್ಷಮಾಪಣೆ ಅವಧಿ ಮುಗಿದ ಬಳಿಕ ಕಾನೂನು ಉಲ್ಲಂಘಿಸಿ ನೆಲೆಸಿರುವವರನ್ನು ಪತ್ತೆಹಚ್ಚಿಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.
ಈ ನಾಲ್ಕು ತಿಂಗಳ ಕ್ಷಮಾಪಣ ಕಾಲಾವಧಿಯು ಯುನೈಟಡ್ ಅರಬ್ ಎಮಿರೇಟ್ಸ್‌ನ ಮಾನವೀಯತೆಯ ಉದಾಹರಣೆಯಾಗಿದ್ದು, ಇದರ ಸದುಪಯೋಗವನ್ನು ಹಲವರು ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಯುಎಇಯಲ್ಲಿ ಬಹಳಷ್ಟು ಜನರು ಎದುರಿಸುತ್ತಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಅಹ್ಮದ್ ಅಲ್ ಮರಿ, ತಂದೆಯ ಸೂಕ್ತ ದಾಖಲೆಗಳಿಲ್ಲದ ಯುಎಇಯಲ್ಲಿ ಜನಿಸಿದ ಹಲವು ಮಕ್ಕಳ ವ್ಯಾಕ್ಸಿನೇಶನ್ ಸಮಸ್ಯೆ ಸಹಿತ ಹಲವು ಸಮಸ್ಯೆಗಳನ್ನು ಪರಿಹರಿಸಿದೆ ಎಂದು ತಿಳಿಸಿದ್ದಾರೆ.

Hot this week

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್​​ರನ್ನು ಗೌರವಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗುವಂತೆ, ಮಂಗಳೂರಿನ ಸಾಹಸಿ ಸೋಲೋ ವಿಶ್ವ...

ಕನ್ನಡ ಸಂಘ ಬಹರೈನ್‌ಗೆ ಪ್ರತಿಷ್ಠಿತ “ನವ ಕರ್ನಾಟಕ ರತ್ನ” ಪ್ರಶಸ್ತಿ

ಬೆಂಗಳೂರು: ಕನ್ನಡ ಭಾಷೆ, ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರ...

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ...

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

Related Articles

Popular Categories