ರಾಸ್ ಅಲ್ ಖೈಮಾ: ಶನಿವಾರದಂದು ರಾಸ್ ಅಲ್ ಖೈಮಾದಲ್ಲಿ ಧಾರಾಕಾರ ಮಳೆ ಸುರಿದಿದೆ. ಮಳೆಯಿಂದಾಗಿ ವಾತಾವರಣ ತಂಪಾಗಿದ್ದು, ಪ್ರದೇಶದ ಒಣ ಹವಾಮಾನದ ಬದಲು ತಂಪಾದ ಹವಾಮಾನವು ರಾಸ್ ಅಲ್ ಖೈಮಾವನ್ನು ಆವರಿಸಿದೆ.
ರಾಸ್ ಅಲ್ ಖೈಮಾದ ಉತ್ತರ ಭಾಗದಲ್ಲಿರುವ ವಾದಿ ಶಾಮ್‌ನಲ್ಲಿ, ಭಾರೀ ಮಳೆಯಾದ ಕಾರಣ ಒಣಗಿದ್ದ ತೊರೆಗಳಿಗೆ ಮತ್ತು ಜೀವ ಬಂದಂತೆ ಮಳೆ ನೀರು ಹರಿಯಲು ಪ್ರಾರಂಭವಾಗಿದೆ.
UAE ಯ ಅತ್ಯುನ್ನತ ಶಿಖರವಾದ ಜೆಬೆಲ್ ಜೈಸ್ ಬಳಿಯ ನಿವಾಸಿಗಳು, ಮಳೆಯ ವಾತಾವರಣಕ್ಕೆ ಸಂತಸ ವ್ಯಕ್ತಪಡಿಸಿದ್ದು, ತುಂತುರು ಮಳೆಯ ನಿನಾದವನ್ನು ಅನುಭವಿಸಿದರು.
ಮುಂದಿನ 36 ಗಂಟೆಗಳಲ್ಲಿ ಯುಎಇ ಮೇಲೆ ಹವಾಮಾನ ಪ್ರಭಾವ ಬೀರುವ ಮುನ್ಸೂಚನೆ ಇದ್ದುದರಿಂದ ಮಳೆಯಾಗಿದೆ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಹವಾಮಾನ ಕೇಂದ್ರದ (NCM) ಪ್ರಕಾರ, ರವಿವಾರದ ಹವಾಮಾನವು ಭಾಗಶಃ ಮೋಡದಿಂದ ಮೋಡ ಕವಿದ ಆಕಾಶ, ಸಾಂದರ್ಭಿಕ ಧೂಳಿನೊಂದಿಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಉತ್ತರ, ಪೂರ್ವ, ಕರಾವಳಿ ಪ್ರದೇಶಗಳು ಮತ್ತು ದ್ವೀಪಗಳಲ್ಲಿಯೂ ಸಹ ಮಳೆಯಾಗುವ ಸಾಧ್ಯತೆಯಿದೆ.