ಮಾಹಿತಿಯುಕೆ: ಚೆವೆನಿಂಗ್ ಸ್ಕಾಲರ್‌ಶಿಪ್ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರ ಒಪ್ಪಂದ

ಯುಕೆ: ಚೆವೆನಿಂಗ್ ಸ್ಕಾಲರ್‌ಶಿಪ್ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರ ಒಪ್ಪಂದ

ಬೆಳಗಾವಿ: ಮಹಿಳಾ ಪದವೀಧರರಿಗೆ ಯುಕೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡಲು ಯುಕೆಯ ಚೆವೆನಿಂಗ್ ಸ್ಕಾಲರ್‌ಶಿಪ್ ಕಾರ್ಯಕ್ರಮದೊಂದಿಗೆ ಕರ್ನಾಟಕ ಸರ್ಕಾರವು ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.

ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್, “ದಕ್ಷಿಣ ಭಾರತದಲ್ಲಿ ಚೆವೆನಿಂಗ್ ಪ್ರಸ್ತಾಪವನ್ನು ಸ್ವೀಕರಿಸಿದ  ಮೊದಲ ರಾಜ್ಯ ಕರ್ನಾಟಕವಾಗಿದೆ” ಎಂದು ಹೇಳಿದರು.

ಒಟ್ಟಾರೆ, ಮುಂದಿನ ಮೂರು ವರ್ಷಗಳಲ್ಲಿ 15 ಮಹಿಳಾ ಪದವೀಧರರು ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಾರೆ. ಐದು ಮಹಿಳೆಯರ ಮೊದಲ ಬ್ಯಾಚ್ ಸೆಪ್ಟೆಂಬರ್ 2025 ರಿಂದ ತಮ್ಮ ಯುಕೆ ಶಿಕ್ಷಣವನ್ನು ಮುಂದುವರಿಸಲಿದೆ. 3 ವರ್ಷದ ಕಾರ್ಯಕ್ರಮಕ್ಕೆ ಅಂದಾಜು ರೂ. 6 ಕೋಟಿ ವೆಚ್ಚವಾಗಲಿದ್ದು, ಇದರಲ್ಲಿ ರೂ. 3 ಕೋಟಿಯನ್ನು ರಾಜ್ಯ ಸರ್ಕಾರ ಮತ್ತು ಉಳಿದವು ಚೆವೆನಿಂಗ್ ಭರಿಸಲಿದೆ ಎಂದು ತಿಳಿದು ಬಂದಿದೆ.

Hot this week

ನವೆಂಬರ್ 6ರಂದು ಕರ್ನಾಟಕ ಸಂಘ ಖತರ್‌ನ 71ನೇ ರಾಜ್ಯೋತ್ಸವ ‘ಕರುನಾಡ ವೈಭವ-2026’ 

ದೋಹಾ: ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ...

ದುಬೈ; ಯುಎಇ ಬಂಟ್ಸ್‌ನ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ಸಂಪನ್ನ

ದುಬೈ : ಅರಬ್ ಸಂಯುಕ್ತ ಸಂಸ್ಥಾನದ ಜಾತಿ ಸಂಘಟನೆಗಳಲ್ಲಿ ಹಿರಿಯ ಸಂಘಟನೆಯಾದ...

ಜುಬೈಲ್; ‘AQWA 40-ಯಾರ್ಡ್ ಕ್ರಿಕೆಟ್ ಟೂರ್ನಮೆಂಟ್’: ದಿಲ್‌ಪಸಂದ್ ಮೂಳೂರು ಚಾಂಪಿಯನ್, HMC ಅದಮಾರ್ ರನ್ನರ್‌ಅಪ್

ಜುಬೈಲ್ (ಸೌದಿ ಅರೇಬಿಯಾ): ಮೂಳೂರಿನ ಅಲ್-ಖಮರ್ ವೆಲ್ಫೇರ್ ಅಸೋಸಿಯೇಷನ್ (AQWA KSA)...

ಅಮರ ಮಧುರ ಗೀತೆ: ನೆನಪಿನಂಗಳದಲ್ಲಿ ಮತ್ತೆ ಅರಳಲಿವೆ ಹಳೆಯ ಕನ್ನಡ ಹಾಡುಗಳು; ಅ.29ರಂದು ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ

ಮನಾಮ(ಬಹರೈನ್): ಕೆಲವು ಹಾಡುಗಳು ಕೇವಲ ಸಂಗೀತವಲ್ಲ; ಅವು ಬದುಕಿನ ಅಮೂಲ್ಯ ನೆನಪುಗಳು....

ಕರ್ನಾಟಕ ಸಂಘ ಶಾರ್ಜಾದಿಂದ ‘ಮಯೂರ ಸವಿರುಚಿ 2026’: ಬೆಂಕಿರಹಿತ ಅಡುಗೆಯಲ್ಲಿ ಸೃಜನಶೀಲತೆ ಮೆರೆದ ಸ್ಪರ್ಧಿಗಳು

ಕರ್ನಾಟಕ ಸಂಘ ಶಾರ್ಜಾದ ವತಿಯಿಂದ ನಡೆದ ವಿನೂತನ ವಿಶೇಷ ಕಾರ್ಯಕ್ರಮ ದುಬೈ :...

Related Articles

Popular Categories