ಯುಎಸ್‌ಎವಂದೇ ಮಾತರಂ ಮತ್ತು ಜನಗಣಮನ ಗೀತೆಯೊಂದಿಗೆ ಅಮೇರಿಕದಲ್ಲಿ ಗೃಹಪ್ರವೇಶ

ವಂದೇ ಮಾತರಂ ಮತ್ತು ಜನಗಣಮನ ಗೀತೆಯೊಂದಿಗೆ ಅಮೇರಿಕದಲ್ಲಿ ಗೃಹಪ್ರವೇಶ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್

1875ರಲ್ಲಿ ಭಾರತದಲ್ಲಿ ಮೊಳಗಿದ ‘ವಂದೇ ಮಾತರಂ’ 150 ವರ್ಷಗಳ ನಂತರ, ಸಾವಿರಾರು ಮೈಲು ದೂರದ ಅಮೇರಿಕದ ಕನ್ನಡಿಗರ ಮನೆಯಲ್ಲೂ ಮೊಳಗಿದೆ!

ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ಕನ್ನಡಿಗರಾದ ಸುಚಿತ ಜಾಜು ಮತ್ತು ಅಮೋಲ್ ಜಾಜು ಅವರ ನೂತನ ಮನೆಯ ಗೃಹಪ್ರವೇಶ ಸಮಾರಂಭ ಸಂಭ್ರಮದಿಂದ ನಡೆಯಿತು.

ಗೃಹಪ್ರವೇಶದ ಅಂಗವಾಗಿ ಹೋಮ, ಹವನ ಹಾಗೂ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಲಾಗಿತ್ತು. ಪೂಜೆಯ ಕೊನೆಯಲ್ಲಿ ಮಂಗಳಾರತಿ ನಡೆಯುತ್ತಿದ್ದ ಸಂದರ್ಭದಲ್ಲಿ ಪುರೋಹಿತರಾದ ಶ್ರೀಧರ ಆಚಾರ್ಯ ಅವರು ಅಂದು ಆಗಸ್ಟ್ 15 ಎಂಬುದನ್ನು ನೆನಪಿಸಿ ಭಾರತದ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸುವಂತೆ ಕರೆ ನೀಡಿದರು.

ಅಲ್ಲಿ ನೆರೆದಿದ್ದ ಎಲ್ಲರೂ ಒಟ್ಟಾಗಿ ‘ವಂದೇ ಮಾತರಂ’ ಮತ್ತು ‘ಜನಗಣಮನ’ ಗೀತೆಗಳನ್ನು ಹಾಡಿದರು. ನಂತರ ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಗಳು ಮೊಳಗಿದವು. ಗೃಹಪ್ರವೇಶದ ಸಂಭ್ರಮ ಕ್ಷಣಾರ್ಧದಲ್ಲಿ ದೇಶಭಕ್ತಿಯ ಸಂಭ್ರಮವಾಗಿಯೂ ಮಾರ್ಪಟ್ಟಿತು.

ಬಂಕಿಮಚಂದ್ರ ಚಟ್ಟೋಪಾಧ್ಯಾಯರು 1875ರಲ್ಲಿ ರಚಿಸಿದ ‘ವಂದೇ ಮಾತರಂ’ಗೆ ಈಗ 150 ವರ್ಷಗಳ ಸಂಭ್ರಮ. ಈ ಐತಿಹಾಸಿಕ ಸಂದರ್ಭವನ್ನು ಸ್ಮರಣೀಯವಾಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2025ರ ನವೆಂಬರ್‌ನಿಂದ 2026ರ ನವೆಂಬರ್‌ವರೆಗೆ ದೇಶಾದ್ಯಂತ ‘ವಂದೇ ಮಾತರಂ’ 150ನೇ ವರ್ಷಾಚರಣೆಯನ್ನು ಹಮ್ಮಿಕೊಂಡಿದೆ.

ಅದೇ ‘ವಂದೇ ಮಾತರಂ’ ಇಂದು ತಾಯ್ನಾಡಿನಿಂದ ಸಾವಿರಾರು ಮೈಲು ದೂರದ ಅಮೇರಿಕದ ಆಲ್ಬನಿಯ ಮನೆಯೊಂದರ ಗೃಹಪ್ರವೇಶದಲ್ಲೂ ಮೊಳಗಿರುವುದು ವಿಶೇಷ.

ಮನೆ ಅಮೇರಿಕದಲ್ಲಿರಬಹುದು… ಆದರೆ ಮನಸ್ಸಿನಲ್ಲಿ ಭಾರತ! ….ತಾಯ್ನಾಡಿನಿಂದ ಸಾವಿರಾರು ಮೈಲು ದೂರದಲ್ಲಿ ನೆಲೆಸಿದ್ದರೂ ತಮ್ಮ ಮನೆಯ ಶುಭ ಸಮಾರಂಭದಲ್ಲಿಯೂ ಸ್ವಾತಂತ್ರ್ಯ ದಿನವನ್ನು ಮರೆಯದೆ ವಂದೇ ಮಾತರಂ ಮತ್ತು ಜನಗಣಮನ ಹಾಡಿ ದೇಶಪ್ರೇಮ ಮೆರೆದ ಈ ಕ್ಷಣ ನಿಜಕ್ಕೂ ಸ್ಫೂರ್ತಿದಾಯಕ.

ದೇಶಪ್ರೇಮಕ್ಕೆ ಗಡಿಗಳಿಲ್ಲ, ದೂರವೂ ಅಡ್ಡಿಯಲ್ಲ. ತಾಯ್ನಾಡು ಸಾವಿರಾರು ಮೈಲು ದೂರವಿದ್ದರೂ ಭಾರತವನ್ನು ಹೃದಯದಲ್ಲಿ ಹೊತ್ತು ಬದುಕಬಹುದು ಎಂಬುದಕ್ಕೆ ಈ ಗೃಹಪ್ರವೇಶವೇ ಒಂದು ಸುಂದರ ಉದಾಹರಣೆ. ಈ ಅಪರೂಪದ ದೇಶಭಕ್ತಿಯ ಕ್ಷಣಗಳ ವಿಡಿಯೋ ನೋಡಿ.

Hot this week

ಅಕ್ಟೋಬರ್ 4ರಂದು ದುಬೈಯಲ್ಲಿ ‘ವಿಖಾಯ ಡೇ’ ಬೃಹತ್ ರಕ್ತದಾನ ಶಿಬಿರ

ದುಬೈ: ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ವಿಖಾಯ ವತಿಯಿಂದ, ದಕ್ಷಿಣ ಕನ್ನಡ ಜಿಲ್ಲಾ ಖಾಝಿಯಾಗಿದ್ದ...

ಅಭಿಯಂತರರ ದಿನಾಚರಣೆ ಆಚರಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ರಾಯಭಾರ ಕಚೇರಿ, ದೋಹಾ ಆಶ್ರಯದ ಭಾರತೀಯ ಸಾಂಸ್ಕೃತಿಕ ಕೇಂದ್ರದ...

Aim India Forum raises concerns of Indian workers with senior MEA officials in UAE

Dubai, UAE, September 2026: Aim India Forum (AIF) held...

ಕರ್ನಾಟಕ ಸಂಘ ಖತರ್‌ನಿಂದ ಉಪ ರಾಯಭಾರ ಮುಖ್ಯಸ್ಥ ಸಂದೀಪ್ ಕುಮಾರ್‌ಗೆ ಭಾವಪೂರ್ಣ ಬೀಳ್ಕೊಡುಗೆ

ದೋಹಾ: ಕರ್ನಾಟಕ ಸಂಘ ಖತರ್‌ (KSQ) ನಿಯೋಗವು ಅಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು...

ನ್ಯೂಯಾರ್ಕ್; ಅಗ್ನಿಶಾಮಕ ವೀರರಿಗೆ ವಿಶಿಷ್ಟ ನಮನ: 42 ಮಹಡಿ ಏರಿದ ಕನ್ನಡತಿಯರು ಉಮಾ–ಸುಪ್ರಿಯಾ

ಬೆಂಕಿ ಬಸಣ್ಣ, ನ್ಯೂಯಾರ್ಕ್ ಆಲ್ಬನಿ, ನ್ಯೂಯಾರ್ಕ್: ಆಲ್ಬನಿ ಪ್ರದೇಶದ ಕ್ಯಾಪಿಟಲ್ ಡಿಸ್ಟ್ರಿಕ್ಟ್ ಕನ್ನಡ...

Related Articles

Popular Categories