ಯುಎಸ್‌ಎನ್ಯೂಯಾರ್ಕ್‌ನ ಆಲ್ಬನಿಯ ಸುಪ್ರಿಯಾ ಶೆಟ್ಟಿಗೆ ‘ಮಿಸ್ಸೆಸ್ ಅಕ್ಕ- 2026’...

ನ್ಯೂಯಾರ್ಕ್‌ನ ಆಲ್ಬನಿಯ ಸುಪ್ರಿಯಾ ಶೆಟ್ಟಿಗೆ ‘ಮಿಸ್ಸೆಸ್ ಅಕ್ಕ- 2026’ ಕಿರೀಟ

ಫಿಲಡೆಲ್ಫಿಯಾ: ಫಿಲಡೆಲ್ಫಿಯಾದಲ್ಲಿ ನಡೆದ ಅಕ್ಕ (AKKA) ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನದಲ್ಲಿ ನ್ಯೂಯಾರ್ಕ್‌ನ ಆಲ್ಬನಿ ಕನ್ನಡ ಸಮುದಾಯದ ಸುಪ್ರಿಯಾ ಶೆಟ್ಟಿ ‘Mrs. AKKA 2026’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ತಮ್ಮ ಬಹುಮುಖ ಕಲಾ ಪ್ರತಿಭೆಗೆ ‘Mrs. Artistic Powerhouse’ ಗೌರವವನ್ನೂ ಪಡೆದು ಆಲ್ಬನಿ ಕನ್ನಡಿಗರಿಗೆ ಹೆಮ್ಮೆ ತಂದಿದ್ದಾರೆ.

ಸುಪ್ರಿಯಾ ಕೇವಲ ಪ್ರತಿಭಾವಂತ ಕಲಾವಿದೆಯಲ್ಲ; ಆಲ್ಬನಿ ಕನ್ನಡ ಸಮುದಾಯದ ಸಕ್ರಿಯ ಸ್ವಯಂಸೇವಕಿಯೂ ಹೌದು. ಆಲ್ಬನಿ ಕನ್ನಡಕೂಟದ ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ನೃತ್ಯ ಸಂಯೋಜಿಸಿ, ಮಹಿಳೆಯರು ಮತ್ತು ಮಕ್ಕಳಿಗೆ ನೃತ್ಯ ಕಲಿಸಿ ವೇದಿಕೆಗೆ ಸಿದ್ಧಪಡಿಸಿದ್ದಾರೆ. Tri-City India Associationನ Spring Festival ಕಾರ್ಯಕ್ರಮಗಳಿಗೂ ಹಲವು ನೃತ್ಯಗಳನ್ನು ಸಂಯೋಜಿಸಿದ್ದಾರೆ.

ಸುಪ್ರಿಯಾ ಅವರ ಕಲಾಪಯಣ ಐದನೇ ತರಗತಿಯಲ್ಲಿಯೇ ಆರಂಭವಾಯಿತು. ಕುಟುಂಬದಲ್ಲಿದ್ದ ಕಲೆ ಮತ್ತು ಚಿತ್ರರಂಗದ ಹಿನ್ನೆಲೆ ಅವರ ಪ್ರತಿಭೆಗೆ ಬಾಲ್ಯದಲ್ಲಿಯೇ ಪ್ರೇರಣೆಯಾಯಿತು. ಭರತನಾಟ್ಯದಲ್ಲಿ ಶಾಸ್ತ್ರೀಯ ತರಬೇತಿ ಪಡೆದ ಅವರು, ನಂತರ Hip-Hop, Contemporary, Jazz ಮತ್ತು Broadway theatrical performance ಸೇರಿದಂತೆ ಹಲವು ಆಧುನಿಕ ನೃತ್ಯಶೈಲಿಗಳಲ್ಲಿ ಪರಿಣತಿ ಗಳಿಸಿದರು. ಬೆಂಗಳೂರಿನ Hipnotics Dance Companyಯಲ್ಲಿ company dancer ಆಗಿ ಆರಂಭಿಸಿ, instructor ಮತ್ತು manager ಆಗಿಯೂ ಕಾರ್ಯನಿರ್ವಹಿಸಿದರು. Latino Rhythms Dance Academyಯಲ್ಲಿ Salsa, Bachata ಮತ್ತು Kizomba ಮೊದಲಾದ ಲ್ಯಾಟಿನ್ ನೃತ್ಯಪ್ರಕಾರಗಳಲ್ಲಿಯೂ ತರಬೇತಿ ಪಡೆದಿದ್ದಾರೆ.

ನೃತ್ಯದ ಹೊರತಾಗಿಯೂ ಸುಪ್ರಿಯಾ ಅವರದ್ದು ಬಹುಮುಖ ಪ್ರತಿಭೆ. ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿರುವ ಅವರು voice-over artist ಆಗಿಯೂ ಕೆಲಸ ಮಾಡಿದ್ದಾರೆ. ‘Miss Bangalore Queen 2009’ ಕಿರೀಟವನ್ನು ಗೆದ್ದಿದ್ದು, Maa TV ನೃತ್ಯ ರಿಯಾಲಿಟಿ ಶೋವೊಂದರಲ್ಲಿ runner-up ಆಗಿದ್ದಾರೆ. ಹಂಪಿ ಉತ್ಸವ ಸೇರಿದಂತೆ ಹಲವು ಪ್ರತಿಷ್ಠಿತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಅಮೇರಿಕಕ್ಕೆ ಬರುವ ಮೊದಲು ತಮ್ಮದೇ Dance School ಮತ್ತು Event Management Companyಯನ್ನೂ ನಡೆಸಿದ್ದರು.

ಭಾರತದಲ್ಲಿ ಆರಂಭವಾದ ಈ ಕಲಾಪಯಣವನ್ನು ಅಮೇರಿಕದಲ್ಲೂ ಮುಂದುವರಿಸಿರುವ ಸುಪ್ರಿಯಾ, ತಾವು ಕಲಿತ ಕಲೆಯನ್ನು ಆಲ್ಬನಿಯ ಮಹಿಳೆಯರು ಮತ್ತು ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾ ಸಮುದಾಯದ ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರಂತರವಾಗಿ ಕೊಡುಗೆ ನೀಡುತ್ತಿದ್ದಾರೆ. ಇದೀಗ ‘Mrs. AKKA 2026’ ಕಿರೀಟ ಅವರ ಕಲಾಪಯಣಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.

ಪಾವನಗೆ ‘Mrs. Timeless Grace’
ಇದೇ ಅಕ್ಕ ವೇದಿಕೆಯಲ್ಲಿ ಆಲ್ಬನಿಯ ಮತ್ತೊಬ್ಬ ಪ್ರತಿಭಾವಂತೆ ಪಾವನ ಅವರು ‘Mrs. Timeless Grace’ ಕಿರೀಟವನ್ನು ಗೆದ್ದಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಪಾವನ, ಸುಮಾರು ಆರು ವರ್ಷಗಳ ವಿರಾಮದ ನಂತರ ಅಮೇರಿಕದಲ್ಲಿ Computer Scienceನಲ್ಲಿ Master’s ಪದವಿ ಪೂರ್ಣಗೊಳಿಸಿದ್ದು, ಪ್ರಸ್ತುತ ನ್ಯೂಯಾರ್ಕ್‌ನ ಹಣಕಾಸು ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಐದು ಭಾಷೆಗಳನ್ನು ಬಲ್ಲ ಪಾವನ, ಸಂಗೀತ ಮತ್ತು ನೃತ್ಯವನ್ನು ಬಹಳವಾಗಿ ಪ್ರೀತಿಸುತ್ತಾರೆ. Certified Makeup Artist ಕೂಡ ಆಗಿರುವ ಅವರಿಗೆ ಹೊಸ ಮತ್ತು ವಿಭಿನ್ನ ಶೈಲಿಗಳನ್ನು ಪ್ರಯೋಗಿಸುವುದು ಇಷ್ಟ. ವಿಶೇಷವೆಂದರೆ, ಇದು ಅವರ ಮೊದಲ Pageant ಮತ್ತು ಮೊದಲ AKKA ಸಮ್ಮೇಳನವಾಗಿದ್ದು, ಮೊದಲ ಪ್ರಯತ್ನದಲ್ಲಿಯೇ ‘Mrs. Timeless Grace’ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸುಪ್ರಿಯಾ ಶೆಟ್ಟಿ ಅವರ ‘Mrs. AKKA 2026’ ಮತ್ತು ‘Mrs. Artistic Powerhouse’, ಪಾವನ ಅವರ ‘Mrs. Timeless Grace’ — ಹೀಗೆ ಮೂರು ಕಿರೀಟಗಳು ಈ ಬಾರಿ ಆಲ್ಬನಿಯ ಪಾಲಾಗಿವೆ.

ಫಿಲಡೆಲ್ಫಿಯಾದ ಅಕ್ಕ ರಜತ ಮಹೋತ್ಸವದಲ್ಲಿ ಈ ಇಬ್ಬರು ಪ್ರತಿಭಾವಂತ ಮಹಿಳೆಯರು ಗಳಿಸಿದ ಸಾಧನೆ ಆಲ್ಬನಿ ಕನ್ನಡ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗಿದೆ.

— ಬೆಂಕಿ ಬಸಣ್ಣ, ನ್ಯೂಯಾರ್ಕ್

Hot this week

ದುಬೈಯಲ್ಲಿ ಪದ್ಮಶಾಲಿ ಸಮುದಾಯದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ; ಭಕ್ತಿ,ಸಂಸ್ಕೃತಿ ಹಾಗೂ ಸಮುದಾಯದ ಒಗ್ಗಟ್ಟಿಗೆ ಸಾಕ್ಷಿಯಾದ ಕಾರ್ಯಕ್ರಮ

ದುಬೈ, : ದುಬೈ ಪದ್ಮಶಾಲಿ ಸಮುದಾಯದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಭಕ್ತಿ,...

ಬೆಂಗಳೂರು; ಕನ್ನಡಿಗರ ಕೂಟ, ದುಬೈಯಿಂದ ಪದ್ಮಶ್ರೀ ಭೀಮವ್ವ ದೊಡ್ಡಬಾಳಪ್ಪರಿಗೆ ಪ್ರತಿಷ್ಠಿತ ‘ಹುಟ್ಟೂರ ಸನ್ಮಾನ‌’ ಪ್ರದಾನ

ಬೆಂಗಳೂರು: ಕನ್ನಡಿಗರ ಕೂಟ, ದುಬೈ ವತಿಯಿಂದ ಬೆಂಗಳೂರಿನಲ್ಲಿ ನಡೆದ “ಹುಟ್ಟುೂರ ಸನ್ಮಾನ”...

ದುಬೈ; ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ನಲ್ಲಿ ಓಣಂ ಹಬ್ಬ ಆಚರಣೆ

ದುಬೈ : ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಫಾರ್ಚೂನ್ ಗ್ರೂಪ್...

ಕನ್ನಡಿಗರ ಕೂಟ ದುಬೈ ವತಿಯಿಂದ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್‌ಗೆ ಸನ್ಮಾನ

ಬೆಂಗಳೂರು: ಕನ್ನಡಿಗರ ಕೂಟ, ದುಬೈ ತಂಡವು ಮಾಜಿ ಭಾರತೀಯ ಕ್ರಿಕೆಟಿಗ ಹಾಗೂ...

Related Articles

Popular Categories