ಯುಎಇ'ಅನಿವಾಸಿಗಳ ಕಾರ್ಯಕ್ರಮಕ್ಕೆ, ಸಾಧನಶೀಲರ ಪರಿಚಯಕ್ಕೆ, ಕಾರ್ಮಿಕರ ಸುಖ ದುಃಖಗಳಿಗೆ...

‘ಅನಿವಾಸಿಗಳ ಕಾರ್ಯಕ್ರಮಕ್ಕೆ, ಸಾಧನಶೀಲರ ಪರಿಚಯಕ್ಕೆ, ಕಾರ್ಮಿಕರ ಸುಖ ದುಃಖಗಳಿಗೆ ವೇದಿಕೆಯಾಗಲಿ’

globalkannadiga.comಗೆ ಇರ್ಷಾದ್ ಮೂಡಬಿದ್ರೆ ಶುಭ ಹಾರೈಕೆ

ಹೊಸ ಪ್ರಯೋಗ…
ಇಂದು ಸಮಸ್ತ ಗಲ್ಫ್ ವಾಸಿಗಳ ಹೆಚ್ಚಿನ ಮೊಬೈಲ್’ಗಳನ್ನು ಅವಲೋಕಿಸಿದರೆ ಅದರಲ್ಲಿ ಕಾಣಸಿಗುವ ಪತ್ರಿಕೆ ಎಂದರೆ ವಾರ್ತಾ ಭಾರತಿ. ಮುಂಜಾನೆ ನಾವು ಎದ್ದೇಳುವ ಮುನ್ನವೇ ಬಿಸಿಬಿಸಿ ಚಹಾದಂತೆ ಸಿದ್ಧವಾಗಿರುವ ಈ ಪತ್ರಿಕೆಯು ಎಲ್ಲರಿಗೂ ಅಚ್ಚುಮೆಚ್ಚು. ಊರಿನ, ರಾಜ್ಯದ, ದೇಶ-ವಿದೇಶಗಳ ಸುದ್ದಿಯನ್ನು ಇಡೀ ದಿನ ಬಿತ್ತರಿಸುವ ಅದು ಎಲ್ಲರ ಆಪ್ತ ಸಂಗಾತಿ. ಆಗಾಗ ‘ವಿಬಿ'(ವಾರ್ತಾ ಭಾರತಿ) ಮೇಲೆ ಕಣ್ಣಾಡಿಸದಿದ್ದರೆ ಸಮಾಧಾನವೇ ಇಲ್ಲ. ಈಗ ಒಂದು ಹೆಜ್ಜೆ ಮುಂದಿಟ್ಟಿರುವ ಅದು ಕನ್ನಡಿಗರಿಗಾಗಿ globalkannadiga.com ಎಂಬ ಹೊಸ ವೆಬ್ ಸೈಟನ್ನು ಆರಂಭಿಸುವ ಸಿಹಿ ಸುದ್ದಿಯನ್ನು ನೀಡಿದೆ. ಆರಂಭದ ದಿನಗಳಿಂದಲೇ ಅದು ವಿದೇಶ ಭಾಗದಲ್ಲಿ ಗಲ್ಫ್ ರಾಷ್ಟ್ರಗಳ ಮುಖ್ಯ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡುತ್ತಾ ಇತ್ತು. ಅಂದಿನ ದಿನಗಳಲ್ಲಿ ಅದು ಯಾವ ಪತ್ರಿಕೆಯು ಮಾಡದ ಹೊಸ ಹಾಗು ಉಪಯುಕ್ತ ಪ್ರಯೋಗವಾಗಿತ್ತು. ಇದರಿಂದ ನಾಡಿನ ಜನತೆಗೆ ಹಲವು ವಿಚಾರಗಳು ತಿಳಿಯುವ ಅವಕಾಶ ದೊರೆಯಿತು. ಮುಂದೆ ಗಲ್ಫ್ ನಾಡಿನ ಅನಿವಾಸಿಗಳ ಆಗುಹೋಗುಗಳ ಕುರಿತಾಗಿ ದುಬೈಯಿಂದ ನಾನು ಅದರಲ್ಲಿ ‘ಮರಳ ಹೆಜ್ಜೆಗಳು’ ಎನ್ನುವ ಅಂಕಣವನ್ನೂ ಬರೆಯುತ್ತಿದ್ದೆ. ಈಗ ಜಗತ್ತಿನಾದ್ಯಂತ ಇರುವ ಸಮಸ್ತ ಅನಿವಾಸಿ ಕನ್ನಡಿಗರಿಗೆ ಹೊಸ ವೇದಿಕೆ ನೀಡುವ globalkannadiga.com ವೆಬ್ ಸೈಟ್ ಬರಲಿದೆ ಎಂದು ಕೇಳಿದೆ. ತುಂಬಾ ಸಂತೋಷಕರ ಸುದ್ದಿ. ಇದು ಅನಿವಾಸಿಗಳ ಕಾರ್ಯಕ್ರಮಗಳಿಗೆ, ಸಾಧನಶೀಲರ ಪರಿಚಯಕ್ಕೆ, ಕಾರ್ಮಿಕರ ಸುಖ ದುಃಖಗಳಿಗೆ, ಸಭೆ-ಸಮಾರಂಭಗಳ ಮುನ್ನೋಟಕ್ಕೆ ವೇದಿಕೆಯಾಗಲಿ. ವಿಬಿ ಇದರಲ್ಲೂ ಜಾಗತಿಕ ಯಶಸ್ಸು ಕಾಣಲಿ, ಎಲ್ಲರ ಮನಸ್ಸು ಗೆಲ್ಲಲಿ, ನನ್ನ ಶುಭ ಹಾರೈಕೆಗಳು.

ಇರ್ಷಾದ್ ಮೂಡಬಿದ್ರೆ ದುಬೈ,(ಬರಹಗಾರ)

Hot this week

ದುಬೈ; ಅ.11ರಂದು ‘ಗಮ್ಮತ್ ಕಲಾವಿದೆರ್ ದುಬೈ’ ತಂಡದಿಂದ ‘ಪೋನಗ ಕೊನೊಪರಾ..?’ ನಾಟಕ

ದುಬೈ: ಯುಎಇಯಲ್ಲಿರುವ ನಾಟಕ ಅಭಿಮಾನಿಗಳಿಗೆ ಕಳೆದ ಹಲವಾರು ವರ್ಷಗಳಿಂದ ಮನರಂಜನೆ ನೀಡುತ್ತಾ...

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

Related Articles

Popular Categories