ವಾರ್ತಾಭಾರತಿ ಮಾಧ್ಯಮ ಸಂಸ್ಥೆಯು ಅನಿವಾಸಿ ಕನ್ನಡಿಗರಿಗಾಗಿಯೇ ರೂಪಿಸಿರುವ globalkannadiga.com ಎಂಬ ವೆಬ್ ಸೈಟ್ ಈವತ್ತು ಮಾನ್ಯ ಮುಖ್ಯ ಮಂತ್ರಿಗಳಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿದು ಅತ್ಯಂತ ಹರ್ಷಿತನಾಗಿರುವೆ. ಅನಿವಾಸಿ ಅದರಲ್ಲೂ ಗಲ್ಫ್ ಕನ್ನಡಿಗರ ಮುಖವಾಣಿಯಾಗಿ ನಮ್ಮೆಲ್ಲಾ ಕಷ್ಟ, ಸುಖದಲ್ಲಿ ಪಾಲ್ಗೊಳ್ಳುತ್ತಿರುವ ವಾರ್ತಾಭಾರತಿಯು ಜಾಗತಿಕ ಕನ್ನಡಿಗರಿಗೆ ಒಂದು ವೇದಿಕೆ ಒದಗಿಸುವ ವಿನೂತನ ಪ್ರಯತ್ನ ಅಭಿನಂದನೀಯ. ಈ ವೆಬ್ ಸೈಟ್ ಅನಿವಾಸಿ ಕನ್ನಡಿಗರ ಹೆಮ್ಮೆಯಾಗಿ ಬೆಳೆದು, ತಾನಿಟ್ಟ ಹೆಜ್ಜೆಯಲ್ಲಿ ಅತ್ಯಂತ ಯಶಸ್ವಿಯಾಗಲಿ ಎಂದು ಮನದಾಳದಿಂದ ಹಾರೈಸುತ್ತೇನೆ.
ಮಹಮ್ಮದ್ ಅಲಿ ಉಚ್ಚಿಲ್
ಅಧ್ಯಕ್ಷರು, ಬ್ಯಾರೀಸ್ ವೆಲ್ಫೇರ್ ಫೋರಂ
ಅಬುಧಾಬಿ, ಯುಎಇ