ಯುಎಇಶಾರ್ಜಾದಲ್ಲಿ ಜನವರಿ 26ರಂದು ನಡೆಯಲಿದೆ 'ಬಂಟ್ಸ್ ಪ್ರೀಮಿಯರ್‌ ಲೀಗ್‌‌...

ಶಾರ್ಜಾದಲ್ಲಿ ಜನವರಿ 26ರಂದು ನಡೆಯಲಿದೆ ‘ಬಂಟ್ಸ್ ಪ್ರೀಮಿಯರ್‌ ಲೀಗ್‌‌ ಸೀಸನ್‌-4’; ಆಟಗಾರರ ಹರಾಜು ಪ್ರಕ್ರಿಯೆ: ಟಿ-ಶರ್ಟ್ ಬಿಡುಗಡೆ

ದುಬೈ: ಬಂಟ್ಸ್ ಪ್ರೀಮಿಯರ್‌ ಲೀಗ್‌‌ ಸೀಸನ್‌ – 4 ಹಾಗೂ ದಿವಂಗತ ದಿವೇಶ್ ಆಳ್ವ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟವು ಜನವರಿ 26 ರಂದು ಶಾರ್ಜಾದ ಮೈದಾನದಲ್ಲಿ ಜರಗಲಿರುವುದು. ಈ ಪಂದ್ಯಾಟದ ಆಟಗಾರರ ಹರಾಜು ಪ್ರಕ್ರಿಯೆ ಕಾರ್ಯಕ್ರಮವು ಇತ್ತೀಚಿಗೆ ನಗರದ ಫಾರ್ಚೂನ್ ಆಟ್ರೀಯುಂನ ರೂಫ್ ಟಾಪ್ ನಲ್ಲಿ ಜರುಗಿತು.

ಯುಎಇ ಬಂಟ್ಸ್’ನ ನೂತನ ಮಂಡಳಿಯ ಮಹಾ ಪೋಷಕರಾದ ಸರ್ವೋತ್ತಮ ಶೆಟ್ಟಿ, ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಹತ್ತು ತಂಡಗಳ ಟಿ ಶರ್ಟ್ ಬಿಡುಗಡೆ ಮಾಡಲಾಯಿತು. ಉಪಾಧ್ಯಕ್ಷರಾದ ಪ್ರೇಂನಾಥ್ ಶೆಟ್ಟಿ, ಬಂಟ್ಸ್ ಪ್ರೀಮಿಯರ್‌ ಲೀಗ್‌‌ ಪಂದ್ಯಾಟದ ಹತ್ತು ತಂಡಗಳ ಮಾಲಿಕರು, ನಾಯಕರು, ಐಕಾನ್ ಆಟಗಾರರು ಉಪಸ್ಥಿತರಿದ್ದರು.


ಬಂಟ್ಸ್ ಪ್ರೀಮಿಯರ್ ಲೀಗ್’ನ ಸಂಘಟನಾ ಸಮಿತಿಯ ಸದಸ್ಯರಾದ ಕಿಶೋರ್ ಶೆಟ್ಟಿ, ಜೀವನ್ ಶೆಟ್ಟಿ, ಅರುಣ್ ಶೆಟ್ಟಿ, ಗುರುಶ ಶೆಟ್ಟಿ, ದಿನೇಶ್ ಶೆಟ್ಟಿ, ರಿಷಿ ಶೆಟ್ಟಿ, ಪ್ರಕಾಶ್ ಪಕಳ, ನಶೀತ್ ಆಳ್ವ, ಉದಯ ಶೆಟ್ಟಿ, ಅಶ್ವಥ್ ಶೆಟ್ಟಿ, ರೇಷ್ಮ ದಿನೇಶ್ ಆಳ್ವ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಹರಾಜು ಕಾರ್ಯಕ್ರಮವನ್ನು ಕ್ಲೆವೀನ್ ನಡೆಸಿಕೊಟ್ಟರು. ವೈಷ್ಣವಿ ಅರುಣ್ ಶೆಟ್ಟಿ ಪ್ರಾರ್ಥನೆಗೈದರು. ಮ್ಯಾಕ್ಸ್ ಟ್ಯಾಲೆಂಟ್ ಕ್ರಿಕೆಟ್ ಅಕಾಡೆಮಿಯ ಕೋಚ್ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅಶ್ವೀತ್ ಶೆಟ್ಟಿ ಸ್ವಾಗತಿಸಿ, ರೇಷ್ಮ ದಿನೇಶ್ ಆಳ್ವ ಧನ್ಯವಾದವಿತ್ತರು.

ಹತ್ತು ತಂಡಗಳಿಗೆ ಆಯ್ಕೆಯಾದ ಆಟಗಾರರ ವಿವರ ಇಂತಿದೆ….
ಗುಣಶೀಲ್ ಶೆಟ್ಟಿ ಮಾಲಿಕತ್ವದ “ACE ಎವೇಂಜರ್ಸ್” ತಂಡದಲ್ಲಿ ರಾಕೇಶ್ ಹೆಗ್ಡೆ ಮ್ಯಾನೇಜರ್, ಮಿಥುನ್ ಶೆಟ್ಟಿ ಐಕಾನ್ ಆಟಗಾರ, ಸಂತೋಷ್ ಶೆಟ್ಟಿ, ಶರತ್ ಭಂಡಾರಿ, ಶೋರಿ ಚರಣ್ ರೈ, ರಂಜಿತ್ ಶೆಟ್ಟಿ, ಪ್ರಥಮ್ ರೈ, ಮಿಥುನ್ ಶೆಟ್ಟಿ, ಜೀವನ್ ಶೆಟ್ಟಿ, ರಾಜೇಶ್ ಬಂಟರ ಸೋಮಪ್ಪ, ಸುಕೇಶ್ ಶೆಟ್ಟಿ, ಪ್ರದೀಪ್ ಶೆಟ್ಟಿ, ವಿರಾಜ್ ಹೆಗ್ಡೆ, ಚರಣ್ ಪ್ರಸಾದ್ ಶೆಟ್ಟಿ, ಲೋಹಿತ್ ಹೆಗ್ಡೆ, ಪ್ರಸಾದ್ ರೈ, ಸುರೇಂದ್ರ ಶೆಟ್ಟಿ.

ರವಿ ಶೆಟ್ಟಿ ಮೂಡಂಬೈಲ್ ಕತ್ತಾರ್ ಮಾಲಿಕತ್ವದ “ಎ.ಟಿ.ಎಸ್ ಗ್ರೂಪ್” ತಂಡದಲ್ಲಿ ಸತೀಶ್ ಶೆಟ್ಟಿ ಮ್ಯಾನೇಜರ್, ಗುರುರಾಜ್ ಶೆಟ್ಟಿ ಐಕಾನ್ ಆಟಗಾರ, ಉತ್ತೇಶ್ ಸುಧಾಕರ ಹೆಗ್ಡೆ, ಕೀರ್ತನ್ ಕುಮಾರ್, ನಿಶಾನ್ ಶೆಟ್ಟಿ, ತೇಜಸ್ ರೈ, ದ್ರುವ ಆರ್ ಶೆಟ್ಟಿ, ಕಾರ್ತಿಕ್ ಶೆಟ್ಟಿ, ಗೌತಮ್ ಹೆಗ್ಡೆ, ದಿನೇಶ್ ಶೆಟ್ಟಿ, ಶರತ್ ರೈ, ಸಚಿನ್ ಶೆಟ್ಟಿ, ವಿವೇಕ್ ಶೆಟ್ಟಿ, ಅತಿಥಿ ಶೆಟ್ಟಿ, ಪ್ರವೀಣ್ ಶೆಟ್ಟಿ, ಅರುಣ್ ಮಾಡ, ಸಂದೇಶ್ ಶೆಟ್ಟಿ.

ಪ್ರದೀಪ್ ಶೆಟ್ಟಿ ಮಾಲೀಕತ್ವದ “ಕಾನ್ಸೆಪ್ಟ್ ವಾರಿಯರ್ಸ್‌” ತಂಡದಲ್ಲಿ ಸುಪ್ರಜ್ ಶೆಟ್ಟಿ ಮ್ಯಾನೇಜರ್, ಕೀರ್ತನ್ ಶೆಟ್ಟಿ ಐಕಾನ್ ಆಟಗಾರ, ನಿಕೆತನ್ ಶೆಟ್ಟಿ, ಜನರಾಜ್ ಶೆಟ್ಟಿ, ಶಿವಾನಂದ ಶೆಟ್ಟಿ, ತುಷಾರ್ ಶೆಟ್ಟಿ, ಮಿಥುನ್ ಶೆಟ್ಟಿ, ತಿರ್ಥೇಶ್ ರೈ, ಧನರಾಜ್, ಪ್ರಥಪ್ ರೈ, ಸಂದೇಶ್ ಶೆಟ್ಟಿ, ಪವನ್ ಶೆಟ್ಟಿ, ಅಕ್ಷಯ ಕುಮಾರ್ ಶೆಟ್ಟಿ, ಶರಣ್ ಶೆಟ್ಟಿ, ರೋಹಿತ್ ಶೆಟ್ಟಿ, ಚರಣ್ ರೈ, ಸಮರ್ಥ್ ಶೆಟ್ಟಿ.

ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಮಾಲಿಕತ್ವದ “ಫಾರ್ಚೂನ್ ಗ್ಲಾಡಿಯೇಟರ್ಸ್” ತಂಡದಲ್ಲಿ ಪ್ರದೀಪ್ ಹೆಗ್ಡೆ ಮ್ಯಾನೇಜರ್, ಕಿಶನ್ ಶೆಟ್ಟಿ ಐಕಾನ್ ಆಟಗಾರ, ಭರತ್ ಶೆಟ್ಟಿ, ತಾರನಾಥ ಶೆಟ್ಟಿ, ಸ್ವಸ್ತಿಕ್ ಶೆಟ್ಟಿ, ಸಂದೀಪ್ ಶೆಟ್ಟಿ, ಅರ್ಜುನ್ ಅಶೋಕ್ ಶೆಟ್ಟಿ, ಸಂದೀಪ್ ಶೆಟ್ಟಿ, ನಿಕೇಶ್ ಉದಯ ಶೆಟ್ಟಿ, ನಮ್ರತ್ ರಾಜ್, ಸಂಪತ್ ಶೆಟ್ಟಿ, ನವೀನ್ ಶೆಟ್ಟಿ, ನೂತನ್ ಶೆಟ್ಟಿ, ದೀಪಕ್ ರೈ, ಯತೀಶ್ ರೈ, ಸುಬಾಶ್ ಶೆಟ್ಟಿ.

ದಿನೇಶ್ ಶೆಟ್ಟಿ ಕೊಟ್ಟಿಂಜ ಮಾಲಿಕತ್ವದ “ನವಚೇತನ ಫ್ರೆಂಡ್ಸ್” ತಂಡದಲ್ಲಿ ಬಾಲು ಶೆಟ್ಟಿ ಮ್ಯಾನೇಜರ್, ಗಗನ್ ಶೆಟ್ಟಿ ಐಕಾನ್ ಆಟಗಾರ, ಪ್ರಕಾಶ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ವೈಶಾಕ್ ಶೆಟ್ಟಿ, ಸುಜೀತ್ ಶೆಟ್ಟಿ, ಅಭಿ‌ ಶೆಟ್ಟಿ, ಆಶೀಷ್ ಹೆಗ್ಡೆ, ಸುಶಾಂತ್ ಶೆಟ್ಟಿ, ಜೀವನ್ ಶೆಟ್ಟಿ, ಸುಶಾಂತ್ ಶೆಟ್ಟಿ, ಕೀರ್ತಿರಾಜ್ ಶೆಟ್ಟಿ, ಆಕಾಶ್ ರೈ, ಸುಜೀತ್ ಶೆಟ್ಟಿ, ಸಂತೋಷ್ ಶೆಟ್ಟಿ, ಸಚಿನ್ ಸಂತೋಷ್ ಶೆಟ್ಟಿ, ಪ್ರಸಾದ್ ರೈ.

ರೇಷ್ಮ ದಿವೇಶ್ ಆಳ್ವ ಮಾಲಿಕತ್ವದ “ಪಿಯೋನರ್ ಮರೀನರ್ಸ್” ತಂಡದಲ್ಲಿ ಚೇತನ್ ರೈ ಮ್ಯಾನೇಜರ್, ಅರ್ಜುನ್ ಶೆಟ್ಟಿ ಐಕಾನ್ ಆಟಗಾರ, ಪ್ರಕಾಶ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಆಕಾಶ್ ಶೆಟ್ಟಿ, ಮಹೇಶ್ ಸುಧಾಕರ ಶೆಟ್ಟಿ, ರಾಕೇಶ್ ಶೆಟ್ಟಿ, ಸುನೀಲ್ ಶೆಟ್ಟಿ, ನಿಶೀತ್ ಶೆಟ್ಟಿ, ಮಂಜುಪ್ರಸಾದ್ ಶೆಟ್ಟಿ, ಮಿಥುನ್ ಶೆಟ್ಟಿ, ರಿತೇಶ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಅಂಜನ್ ಜೆ.ರೈ, ರಿತೇಶ್ ಶೆಟ್ಟಿ, ರಂಜು ಶೆಟ್ಟಿ, ಶಿವಕುಮಾರ್ ಶೆಟ್ಟಿ.

ಉದಯ ಶೆಟ್ಟಿ ಮಾಲಿಕತ್ವದ “ರೇಂಜರ್” ತಂಡದಲ್ಲಿ ಪ್ರಶಾಂತ್ ಶೆಟ್ಟಿ ಮ್ಯಾನೇಜರ್, ಶಿವಪ್ರಸಾದ್ ಶೆಟ್ಟಿ ಐಕಾನ್ ಆಟಗಾರ, ಅಕ್ಷಯ್ ಶೆಟ್ಟಿ, ಶರತ್ ಶೆಟ್ಟಿ, ಅಕ್ಷಯ್ ಶೆಟ್ಟಿ, ಅಶ್ವೀನ್ ಕುಮಾರ್ ಶೆಟ್ಟಿ, ಶಿವಾನಂದ ಶೆಟ್ಟಿ, ಭರತ್ ಶೆಟ್ಟಿ, ರಿತೇಶ್ ಶೆಟ್ಟಿ, ಅವಿನಾಶ್ ಶೆಟ್ಟಿ, ಶರತ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಅಂಕಿತ್ ಶೆಟ್ಟಿ, ಸನತ್ ಶೆಟ್ಟಿ, ನಿತಿನ್ ಶೆಟ್ಟಿ, ಕಿಶೋರ್ ಶೆಟ್ಟಿ, ಸುಜೀತ್ ಶೆಟ್ಟಿ.

ಶರತ್ ಶೆಟ್ಟಿ ಮಾಲಿಕತ್ವದ “ಸೋಮ ಅರಸ ವಾರಿಯರ್ಸ್‌” ತಂಡದಲ್ಲಿ ರಾಧಾಕೃಷ್ಣ ಶೆಟ್ಟಿ ಮ್ಯಾನೇಜರ್, ಗುರು ಪ್ರಸಾದ್ ಶೆಟ್ಟಿ ಐಕಾನ್ ಆಟಗಾರ, ಅನೂಪ್ ಪೂಂಜ, ಅವಿನಾಶ್ ಆಳ್ವ, ಕಿರಣ್ ಶೆಟ್ಟಿ, ಅಭಿಷೇಕ್ ಶೆಟ್ಟಿ, ರಿತೇಶ್ ಜಿ.ಶೆಟ್ಟಿ, ಪ್ರದೀಪ್ ಶೆಟ್ಟಿ, ಸುಪ್ರಿತ್ ಶೆಟ್ಟಿ, ದಯಾ ಶೆಟ್ಟಿ, ಗೋಪಾಲ್ ಶೆಟ್ಟಿ, ರಿಶೀತ್ ಶೆಟ್ಟಿ, ರವಿ ಪ್ರಸಾದ್ ಶೆಟ್ಟಿ, ಯಶು ಶೆಟ್ಟಿ, ಸುರೇಶ್ ಶೆಟ್ಟಿ, ಪ್ರೀಥಮ್ ರೈ, ಶೈಲೇಶ್ ಶೆಟ್ಟಿ.

ಪ್ರವೀಣ್ ಶೆಟ್ಟಿ ಮಾಲಿಕತ್ವದ “ವರಾಹ ರೂಪ ಮಂಗಳೂರು” ತಂಡದಲ್ಲಿ ಸುನೀಲ್ ಶೆಟ್ಟಿ ಮ್ಯಾನೇಜರ್,ಶರತ್ ಶೆಟ್ಟಿ ಐಕಾನ್ ಆಟಗಾರ, ಅಖಿಲ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ಸತೀಶ್ ಶೆಟ್ಟಿ, ಪ್ರಜ್ವಲ್ ಎನ್. ಶೆಟ್ಟಿ, ಆಶೀಷ್ ಶೆಟ್ಟಿ, ದರ್ಶನ್ ಶೆಟ್ಟಿ, ಸಚಿನ್ ಶೆಟ್ಟಿ, ಬಾಲರಾಜ್ ಶೆಟ್ಟಿ, ಸಚಿನ್ ಶೆಟ್ಟಿ, ಸನತ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ವಿನಯ್ ಶೆಟ್ಟಿ, ಅಕ್ಷಯ್ ಶೆಟ್ಟಿ, ಸಚಿನ್ ಶೆಟ್ಟಿ, ರಿತೇಶ್ ಶೆಟ್ಟಿ.

ವಿದ್ಯಾನಂದ ಶೆಟ್ಟಿ ಮಾಲಿಕತ್ವದ “ವಿಡ್ ಒನ್ ವಿಕ್ಟರ್ಸ್” ತಂಡದಲ್ಲಿ ಪವನ್ ಶೆಟ್ಟಿ ಮ್ಯಾನೇಜರ್, ಸ್ವರೂಪ್ ರೈ ಐಕಾನ್ ಆಟಗಾರ, ಅಭಿ ಶೆಟ್ಟಿ, ರತನ್ ಶೆಟ್ಟಿ, ಸೋನಿತ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಬಿನೊದ್ ವಿಶ್ವನಾಥ ಶೆಟ್ಟಿ, ನಿತಿನ್ ಶೇಖರ್ ಶೆಟ್ಟಿ, ಸುದರ್ಶನ್ ರೈ, ಧೀರಜ್ ಶೆಟ್ಟಿ, ಪ್ರನಮ್ ಶೆಟ್ಟಿ, ವಿಶ್ವಾಸ್ ಶೆಟ್ಟಿ, ಕಾರ್ತಿಕ್ ಯಸ್ ಆಳ್ವ, ಕೀರ್ತನ್ ಶೆಟ್ಟಿ, ವಿಘ್ನೇಶ್ ಶೆಟ್ಟಿ, ಅಶ್ವಿನ್ ಕುಮಾರ್ ಶೆಟ್ಟಿ, ಅನಿಲ್ ಹೆಗ್ಡೆ.

ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

Hot this week

ನಾಳೆ ಒಮಾನಿನಲ್ಲಿ ‘ಮಸ್ಕತ್ ಗಡಿನಾಡ ಉತ್ಸವ-2025’ ಸಾಂಸ್ಕೃತಿಕ ಕಾರ್ಯಕ್ರಮ; ಆಮಂತ್ರಣ ಪತ್ರಿಕೆ ಅನಾವರಣ

ಮಸ್ಕತ್: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಒಮಾನ್ ಘಟಕ ಮಸ್ಕತ್...

ತವರು ಪ್ರೇಮ ಮೆರೆದ ಹುಬ್ಬಳ್ಳಿ ಮೂಲದ ಕನ್ನಡಿಗ; ಲಂಡನಿನಲ್ಲಿ ತನ್ನ ಹೊಸ ‘ಟೆಸ್ಲಾ’ ಕಾರಿಗೆ ಧಾರವಾಡ ರಿಜಿಸ್ಟ್ರೇಷನ್ ಸಂಖ್ಯೆ!

ಲಂಡನ್: ವಿದೇಶದಲ್ಲಿದ್ದುಕೊಂಡು ತಮ್ಮ ತವರು ನಗರದೊಂದಿಗಿನ ಭಾವನಾತ್ಮಕ ಸಂಪರ್ಕವನ್ನು ಜೀವಂತವಾಗಿಡಲು ಇಲ್ಲೊಬ್ಬ...

Veteran expat Abdulaziz Kushalnagar passes away in Riyadh

Riyadh: Abdulaziz Kushalnagar, a long-time Indian expatriate from Kushalnagar...

ನಾಳೆ ದುಬೈನಲ್ಲಿ ‘ಗ್ಲೋಬಲ್ ಮೀಡಿಯಾ ಐಕನ್ ಪ್ರಶಸ್ತಿ 2025’ ಪ್ರದಾನ; ಭಾಗವಹಿಸಲಿರುವ ಸಚಿವರು-ಸ್ಯಾಂಡಲ್‌ವುಡ್ ತಾರೆಯರ ದಂಡು

ದುಬೈ: ಕರ್ನಾಟಕ ಮೀಡಿಯಾ ಜರ್ನಲಿಸ್ಟ್‌ ಯೂನಿಯನ್‌(KMJU) ಆಶ್ರಯದಲ್ಲಿ 'ಗ್ಲೋಬಲ್ ಮೀಡಿಯಾ ಐಕನ್...

Related Articles

Popular Categories