ಯುಎಇಜ.12ರಂದು ಯುಎಇ ಡಿ.ಕೆ.ಎಸ್.ಸಿ.ಯ ಸಿಲ್ವರ್ ಜುಬಿಲಿ ಸಮಾರೋಪ; ಕರಾವಳಿ...

ಜ.12ರಂದು ಯುಎಇ ಡಿ.ಕೆ.ಎಸ್.ಸಿ.ಯ ಸಿಲ್ವರ್ ಜುಬಿಲಿ ಸಮಾರೋಪ; ಕರಾವಳಿ ಗ್ರ್ಯಾಂಡ್ ಫ್ಯಾಮಿಲಿ ಮುಲಾಖತ್ ಕಾರ್ಯಕ್ರಮ; ಮುಖ್ಯ ಅತಿಥಿಯಾಗಿ ಯು.ಟಿ.ಖಾದರ್

ದುಬೈ: ಮಂಗಳೂರಿನ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಇದರ ಯುಎಇ ರಾಷ್ಟೀಯ ಸಮಿತಿಯ ಸಿಲ್ವರ್ ಜುಬಿಲಿ ಸಮಾರೋಪ ಸಮಾರಂಭ ಹಾಗು ಯುಎಇ ಡಿ.ಕೆ.ಎಸ್.ಸಿ.ಯ ಕರಾವಳಿ ಗ್ರ್ಯಾಂಡ್ ಫ್ಯಾಮಿಲಿ ಮುಲಾಖತ್ ಕಾರ್ಯಕ್ರಮವು ಜನವರಿ 12ರ ರವಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 7.30ರ ವರಿಗೆ ಅಜ್ಮಾನಿನ ವುಡ್ ಲೆಮ್ ಪಾರ್ಕ್ ಸ್ಕೂಲ್’ನಲ್ಲಿ ಧಾರ್ಮಿಕ ಚೌಕಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ವಿಶೇಷವಾಗಿ ಮಕ್ಕಳಿಗೆ ಇಸ್ಲಾಮಿಕ್ ಕ್ವಿಝ್, ಭಾಷಣ, ಹಾಡು, ಕಲರಿಂಗ್ ಸ್ಪರ್ಧೆಗಳು ಹಾಗು ಮಹಿಳೆಯರಿಗಾಗಿ ಮದರಂಗಿ ಸ್ಪರ್ಧೆ, ಅಡುಗೆ ಸ್ಪರ್ಧೆ (Dessert or Sweets), ಕ್ವಿಝ್ ಇನ್ನಿತರ ಸ್ಪರ್ಧೆಗಳು ಹಾಗು ಪುರುಷರಿಗಾಗಿ ಹಗ್ಗ ಜಗ್ಗಾಟ ಇನ್ನಿತರ ಸ್ಪರ್ಧೆಗಳು, ವಿಶೇಷವಾಗಿ ಆಕರ್ಷಕ ವಿವಿಧ ತಂಡಗಳ ಪಥ ಸಂಚಲನ ನಡೆಯಲಿದೆ.

ಕಾರ್ಯಕ್ರಮವು ಸಯ್ಯದ್ ತ್ವಾಹ ಬಾಫಖಿ ತಂಙಳ್ ಅವರ ದುಃವಾದೊಂದಿಗೆ ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಡಾ.ತುಂಬೆ ಮೊಯ್ದಿನ್, ಡಾ.ಬಿ.ಎಂ.ಉಮ್ಮರ್ ಹಾಜಿ, ಝಕಾರಿಯಾ ಜೋಕಟ್ಟೆ, ಅಕ್ರಮ್ ಶೇಖ್, ಎಡ್ವಕೇಟ್ ಖಲೀಲ್, ಇಬ್ರಾಹಿಂ ಗಡಿಯಾರ್, ಡಾ.ಬಿ.ಕೆ.ಯೂಸುಫ್, ಅಶ್ರಫ್ ಮಾಂತೂರ್, ಜಾಫರ್ ಬಿ.ಎಂ.ಇನ್ನಿತರ ಯುಎಇ ಉದ್ಯಮಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿ ಮತ್ತು ವಿವಿಧ ರಾಷ್ಟ್ರೀಯ ನೇತಾರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Hot this week

ಬಹರೈನ್: ಯಕ್ಷಗುರು ದೀಪಕ್ ರಾವ್ ಪೇಜಾವರರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬಹರೈನ್: ಕಳೆದ ಒಂದು ದಶಕದಿಂದ ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿರುವ ಖ್ಯಾತ ಯಕ್ಷಗಾನ...

ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆ ಸಂಭವ; ಗೆದ್ದರೆ, ಹಲವು ಇತಿಹಾಸ ಸೃಷ್ಟಿ!

ಜೂನ್ 24 ರಂದು ನಡೆದ ನ್ಯೂಯಾರ್ಕ್ ಮೇಯರ್ ಹುದ್ದೆಗೆ ಪಕ್ಷಗಳ ಅಭ್ಯರ್ಥಿಯ...

ಗಲ್ಫ್‌ನಲ್ಲಿ ಮತ್ತೆ ಕವಿದ ಯುದ್ಧದ ಕಾರ್ಮೋಡ; ವಲಸಿಗರನ್ನು ಕಾಡುತ್ತಿವೆ 1991ರ ಕೊಲ್ಲಿ ಯುದ್ಧದ ಕಹಿ ನೆನಪುಗಳು…!

ಇರಾನ್-ಇಸ್ರೇಲ್ ದಾಳಿಯಲ್ಲಿ ಅಮೇರಿಕ ನೇರವಾಗಿ ಭಾಗವಹಿಸುತ್ತಿರುವುದರಿಂದ , ಅಮೇರಿಕದ ಮಿತ್ರ ರಾಷ್ಟ್ರಗಳಾದ...

ಜೂನ್ 29ರಂದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ: 7 ಮಂದಿ ಸಾಧಕರಿಗೆ-ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ 29ರಂದು...

Related Articles

Popular Categories