ಯುಎಇಅಬುಧಾಬಿ: SKSSF ಅಬುಧಾಬಿ ಕರ್ನಾಟಕ ಮತ್ತು ಬ್ಲಡ್ ಹೆಲ್ಪ್‌ಲೈನ್...

ಅಬುಧಾಬಿ: SKSSF ಅಬುಧಾಬಿ ಕರ್ನಾಟಕ ಮತ್ತು ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ (ರಿ) ಆಶ್ರಯದಲ್ಲಿ ರಕ್ತದಾನ ಶಿಬಿರ

ಅಬುಧಾಬಿ: SKSSF ಕರ್ನಾಟಕ ಅಬುಧಾಬಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಬೃಹತ್ ಮೀಲಾದ್ ಕಾನ್ಫೆರೆನ್ಸ್ ಪ್ರಚಾರಾರ್ಥ ಸಾರ್ವಜನಿಕ ರಕ್ತದಾನ ಶಿಬಿರವು ಶುಕ್ರವಾರ ಯುನೈಟೆಡ್ ಅರಬ್ ಎಮಿರೇಟ್ಸ್‌‌ನ ಅಬುಧಾಬಿ ಬ್ಲಡ್ ಬ್ಯಾಂಕ್‌ನಲ್ಲಿ ಯಶಸ್ವಿಯಾಗಿ ನಡೆಯಿತು.

ರಕ್ತದಾನ ಶಿಬಿರದಲ್ಲಿ ಒಟ್ಟು 74 ಮಂದಿ ರಕ್ತದಾನ ಮಾಡಿದರು. ಇದರಲ್ಲಿ 7 ಮಂದಿ ಸಿಂಗಲ್ ಡೋನರ್ ಪ್ಲೇಟ್ಲೆಟ್ಸ್ ದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಅಬುಧಾಬಿ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉಸ್ತಾದ್ ಶಹೀರ್ ಹುದವಿ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕದ ಸೇವೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬ್ಯಾರೀಸ್ ವೆಲ್ಫೇರ್ ಅಸೋಷಿಯೇಶನ್ ಅಬುಧಾಬಿ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ, ಕರ್ಮ ಭೂಮಿಯಲ್ಲಿ ಸೇವೆಗೈಯ್ಯಲು ಅವಕಾಶ ನೀಡಿದ ಆಡಳಿತಾಧಿಕಾರಿ ಶೇಕ್ ಮುಹಮ್ಮದ್ ಬಿನ್ ಝಾಯೆದ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ರಕ್ತದಾನ ಮಾಡುವುದು ಮತ್ತು ಅದಕ್ಕಾಗಿ ಪರಿಶ್ರಮಿಸುವ ಸಂಸ್ಥೆಯ ಕಾರ್ಯಕರ್ತರ ಸೇವೆಯನ್ನು ಅಭಿನಂದಿಸಿದರು.

ಅಬುಧಾಬಿ ಸುನ್ನಿ ಸೆಂಟರ್ ಅಧ್ಯಕ್ಷ ಅಸ್ಸಯ್ಯದ್ ಅಬ್ದಲ್ ರಹ್ಮಾನ್ ತಂಙಳ್ ಪ್ರಾಸ್ತವಿಕ ಮಾತುಗಳನ್ನಾಡಿ,”ತನ್ನ ಸ್ವ ಶರೀರದಿಂದ ನೀಡುವ ದಾನವಾದ ರಕ್ತದಾನವನ್ನು ಮಾಡುತ್ತಿರುವ ನಿಮ್ಮ ಈ ಉತ್ತಮವಾದ ಸೇವೆಯನ್ನು ಸೃಷ್ಟಿಕರ್ತನು ಸ್ವೀಕರಿಸಲಿ” ಎಂದು ಹೇಳಿ ಸಾಮಾಜಿಕ ಸೇವೆಗಳಿಗಾಗಿ ಕಾರ್ಯಕರ್ತರನ್ನು ಅಭಿನಂದಿಸಿದರು.

ಬ್ಲಡ್ ಹೆಲ್ಪ್‌‌ಲೈನ್ ಕರ್ನಾಟಕದ ವ್ಯವಸ್ಥಾಪಕರಾದ ಸಿರಾಜುದ್ದೀನ್ ಪರ್ಲಡ್ಕ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಅಬುಧಾಬಿ ಕರ್ನಾಟಕದ ಗೌರವಾಧ್ಯಕ್ಷರಾದ ಹನೀಫ್ ಅರಿಯಮೂಲೆ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಒಮೇಗಾ ಗ್ರೂಪ್ ಆಫ್ ಕಂಪನೀಸ್ ಮಾಲಕ ಮುಹಮ್ಮದ್ ಹಾಜಿ , ಅಯಾನ್ ರಿಯಲ್ ಎಸ್ಟೇಟ್ MD ಅನ್ಸಾರ್ ಬೆಳ್ಳಾರೆ ಭಾಗವಹಿಸಿ ಶುಭಹಾರೈಸಿದರು.

ಶಿಬಿರದಲ್ಲಿ ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕದ ಕಾರ್ಯ ನಿರ್ವಾಹಕರಾದ ಮೆಹತಾಬ್ ಕೈಕಂಬ, ಯಾಕೂಬ್ ಫೈರೋಝ್, ಎಸ್.ಕೆ.ಎಸ್.ಎಸ್.ಎಫ್ ಅಬುಧಾಬಿ ಕರ್ನಾಟಕದ ಪ್ರಮುಖರಾದ ಶಾಫಿ ಹಾಜಿ ಪೆರುವಾಯಿ, ಅಬೂಬಕ್ಕರ್ ಸಕಲೇಶಪುರ ಮತ್ತು ದಾರುಲ್ ಹಸನಿಯ್ಯ ಅಬುಧಾಬಿ ಸಮಿತಿ ಅಧ್ಯಕ್ಷ ಶಾಕಿರ್ ಕೂರ್ನಡ್ಕ,‌ ರಕ್ತದಾನ ಶಿಬಿರದ ಉಸ್ತುವಾರಿಗಳಾದ ಹಮೀದ್ ಸವಣೂರು, ಹಂಝ ನಾಳ, ತಸ್ಲೀಮ್ , SKSSF ಕಾರ್ಯಕರ್ತರಾದ ಹಿದಾಯತ್ ರಹ್ಮಾನ್ ಮರ್ವೆಲ್, ತ್ವಾಹ ಉಪ್ಪಿನಂಗಡಿ, ಜೌಹರ್ ಕನ್ನಡಿಕಟ್ಟೆ, ಹಫೀಝ್, ಶಾಫಿ ಕಿನ್ಯಾ, ಸಫ್ವಾನ್ ಮತ್ತು ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು. ಯಹ್ಯಾ ಕೊಡ್ಲಿಪೇಟೆ ಸ್ವಾಗತಿಸಿದರು. SKSSF ಅಬುಧಾಬಿ ಕರ್ನಾಟಕ ಸಮಿತಿಯ ಉಪಾಧ್ಯಕ್ಷರಾದ ಹಾಫಿಳ್ ಝೈನ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು. ಹಸನ್ ದಾರಿಮಿ ಉಸ್ತಾದ್ ಧನ್ಯವಾದ ಅರ್ಪಿಸಿದರು.

Hot this week

ಬಹರೈನ್: ಯಕ್ಷಗುರು ದೀಪಕ್ ರಾವ್ ಪೇಜಾವರರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬಹರೈನ್: ಕಳೆದ ಒಂದು ದಶಕದಿಂದ ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿರುವ ಖ್ಯಾತ ಯಕ್ಷಗಾನ...

ನ್ಯೂಯಾರ್ಕ್ ಮೇಯರ್ ಆಗಿ ಭಾರತೀಯ ಮೂಲದ ಝೊಹ್ರಾನ್ ಮಮ್ದಾನಿ ಆಯ್ಕೆ ಸಂಭವ; ಗೆದ್ದರೆ, ಹಲವು ಇತಿಹಾಸ ಸೃಷ್ಟಿ!

ಜೂನ್ 24 ರಂದು ನಡೆದ ನ್ಯೂಯಾರ್ಕ್ ಮೇಯರ್ ಹುದ್ದೆಗೆ ಪಕ್ಷಗಳ ಅಭ್ಯರ್ಥಿಯ...

ಗಲ್ಫ್‌ನಲ್ಲಿ ಮತ್ತೆ ಕವಿದ ಯುದ್ಧದ ಕಾರ್ಮೋಡ; ವಲಸಿಗರನ್ನು ಕಾಡುತ್ತಿವೆ 1991ರ ಕೊಲ್ಲಿ ಯುದ್ಧದ ಕಹಿ ನೆನಪುಗಳು…!

ಇರಾನ್-ಇಸ್ರೇಲ್ ದಾಳಿಯಲ್ಲಿ ಅಮೇರಿಕ ನೇರವಾಗಿ ಭಾಗವಹಿಸುತ್ತಿರುವುದರಿಂದ , ಅಮೇರಿಕದ ಮಿತ್ರ ರಾಷ್ಟ್ರಗಳಾದ...

ಜೂನ್ 29ರಂದು ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ: 7 ಮಂದಿ ಸಾಧಕರಿಗೆ-ಮೂರು ಸಾಧಕ ಸಂಸ್ಥೆಗಳಿಗೆ ಸನ್ಮಾನ

ದುಬೈ:ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ 29ರಂದು...

Related Articles

Popular Categories