ಅಬುಧಾಬಿ: ತಾಯ್ನಾಡಿಗೆ ವಾಸ್ತ್ಯವ್ಯ ಬದಲಿಸುತ್ತಿರುವ ಅಬ್ದುಲ್ಲಾ ಮಾದುಮೂಲೆ ಅವರಿಗೆ ಬ್ಯಾರೀಸ್ ವೆಲ್ಫೇರ್ ಫೋರಮ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು.
ನಗರದ ಗ್ರಾಂಡ್ ಕಾಂಟಿನೆಂಟಲ್ ಹೋಟೆಲ್‌ನಲ್ಲಿ ನಡೆದ ಸಮಾರಂಭವು ಬಿ.ಡಬ್ಲ್ಯೂ.ಫ್ ಅಧ್ಯಕ್ಷ ಮೊಹಮ್ಮದ್ ಅಲಿ ಉಚ್ಚಿಲ್ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಅಬ್ದುಲ್ಲಾ ಮಾದುಮೂಲೆ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಅಬ್ದುಲ್ಲ ಮಾದುಮೂಲೆ ತಾವು ನಡೆದು ಬಂದ ದಾರಿ, ಬಿ ಡಬ್ಲ್ಯೂ ಫ್ ನೊಂದಿಗಿನ 22 ವರ್ಷದ ನಂಟನ್ನು ನೆನಪಿಸಿ ಭಾವುಕರಾದರು. ಮೊಹಮ್ಮದ್ ಅಲಿ ಉಚ್ಚಿಲ್ ತಮ್ಮ ಮತ್ತು ಮಾದುಮೂಲೆಯವರ ದೀರ್ಘಕಾಲದ ಸ್ನೇಹ, ಸಮುದಾಯ ಸೇವೆಯಲ್ಲಿ ಒಟ್ಟಿನ ಪಯಣ ಕುರಿತು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.