ಖತರ್ಖತರ್ ಪ್ರಧಾನಿ ಭೇಟಿಯಾದ ವಿದೇಶಾಂಗ ಸಚಿವ ಜೈಶಂಕರ್

ಖತರ್ ಪ್ರಧಾನಿ ಭೇಟಿಯಾದ ವಿದೇಶಾಂಗ ಸಚಿವ ಜೈಶಂಕರ್

ದೋಹ : ವಿದೇಶಾಂಗ ಸಚಿವ ಎಸ್. ಜೈಶಂಕರ್ ರವಿವಾರ ಖತರ್ ಪ್ರಧಾನಿ ಮುಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಾಸಿಮ್ ಅಲ್‍ಥಾನಿಯನ್ನು ಭೇಟಿ ಮಾಡಿದ್ದು ಉಭಯ ನಾಯಕರು ರಾಜಕೀಯ, ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ಸಂಸ್ಕøತಿ ಮತ್ತು ಜನರ ನಡುವಿನ ಸಂಬಂಧಗಳನ್ನು ಕೇಂದ್ರೀಕರಿಸಿ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದರು.

ಖತರ್ ಗೆ ಒಂದು ದಿನದ ಭೇಟಿಗಾಗಿ ಆಗಮಿಸಿದ್ದ ಜೈಶಂಕರ್ ವಿದೇಶಾಂಗ ಖಾತೆಯನ್ನು ಹೊಂದಿರುವ ಮುಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅವರೊಂದಿಗೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಭಾರತ-ಖತರ್ ಸಂಬಂಧಗಳ ಮತ್ತಷ್ಟು ವರ್ಧನೆ, ಮತ್ತು ಪರಸ್ಪರ ಹಿತಾಸಕ್ತಿಯ ವಿಷಯಗಳ ಕುರಿತು ನಿರಂತರ ಮಾತುಕತೆ ಮುಂದುವರಿಸಲು ಎರಡೂ ದೇಶಗಳು ಸಮ್ಮತಿಸಿವೆ ಎಂದು ಭಾರತದ ವಿದೇಶಾಂಗ ಇಲಾಖೆ `ಎಕ್ಸ್’ ಮಾಡಿದೆ.

Hot this week

ಕನ್ನಡ ಸಂಘ ಬಹರೈನ್; ಸೆಪ್ಟೆಂಬರ್ 5ರಂದು ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ

ಬಹರೈನ್: ಬಹರೈನ್‌ನಲ್ಲಿರುವ ಕನ್ನಡ ಸಮುದಾಯವನ್ನು ಕನ್ನಡ ಸಂಘ ಬಹರೈನ್‌ನ ನೂತನ ಕಾರ್ಯಕಾರಿ...

ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಗ್ಗೆ 8:30ಕ್ಕೆ...

ಬಹರೈನ್ ರೇಡಿಯೋ ಆರ್ ಜೆ ಕಮಲಾಕ್ಷ ಅಮೀನ್​ಗೆ ‘ಗೋಲ್ಡನ್ ಐಕಾನಿಕ್ ಅವಾರ್ಡ್’ ಗೌರವ ಪ್ರಶಸ್ತಿ

ಮಂಗಳೂರು: ಬಹರೈನ್ ನ ಕಸ್ತೂರಿ ಕನ್ನಡ ಎಫ್ಎಂ ರೇಡಿಯೋ ಆರ್ ಜೆ...

Related Articles

Popular Categories