ಯುಎಇಶಾರ್ಜಾ: ಯುಎಇ ಸೋಶಿಯಲ್ ಮೀಡಿಯಾ ಕ್ರಿಕೆಟ್ ಪಂದ್ಯಾಟದಲ್ಲಿ ಟ್ರೋಫಿ...

ಶಾರ್ಜಾ: ಯುಎಇ ಸೋಶಿಯಲ್ ಮೀಡಿಯಾ ಕ್ರಿಕೆಟ್ ಪಂದ್ಯಾಟದಲ್ಲಿ ಟ್ರೋಫಿ ಗೆದ್ದುಕೊಂಡ ಜನೂಬ್ ಫಿಟ್ನೆಸ್ ತಂಡ

ಶಾರ್ಜಾ: ಇಲ್ಲಿನ ಸ್ಕೈಲೈನ್ ಯೂನಿವರ್ಸಿಟಿ ಮೈದಾನದಲ್ಲಿ ನಡೆದ ಯುಎಇ ಸೋಶಿಯಲ್ ಮೀಡಿಯಾ ಕ್ರಿಕೆಟ್ ಪಂದ್ಯಾಟದಲ್ಲಿ ಅಶರನ್ಸ್ ತಂಡವನ್ನು ಫೈನಲ್ ಪಂದ್ಯಾಟದಲ್ಲಿ ಸೋಲಿಸುವ ಮೂಲಕ ಜನೂಬ್ ಫಿಟ್ನೆಸ್ ತಂಡ ಟ್ರೋಫಿ ಗೆದ್ದುಕೊಂಡಿತು.

ಸೋಶಿಯಲ್ ಮೀಡಿಯಾ ವಿಡಿಯೋ ಬ್ಲಾಗರ್ ತಂಡವಾದ ಸೋಶಿಯಲ್ ಮೀಡಿಯಾ ಫ್ರೆಂಡ್ಸ್ ನ ವತಿಯಿಂದ ಈ ಟೂರ್ನಮೆಂಟ್ ‘ನ್ನು ಆಯೋಜಿಸಲಾಗಿತ್ತು.

ಜೆನೂಬ್, ಅಜರನ್ಸ್, ಎನ್ 7 ಮತ್ತು ಕ್ರಾಬ್ ಮೀಡಿಯಾ ತಂಡಗಳು ಈ ಪಂದ್ಯಾಕೂಟದಲ್ಲಿ ಸೆಣಸಾಟ ನಡೆಸಿತು. ಫೈನಲ್ ಪಂದ್ಯಾಟದಲ್ಲಿ ಜೆನೂಬ್ ತಂಡದ ಸೂರಜ್ ಮಾನ್ ಆಫ್ ದ ಮ್ಯಾಚ್ ಪಡೆದರು. ಮ್ಯಾನ್ ಆಫ್ ದ ಸಿರೀಸ್ ಟ್ರೋಫಿಯನ್ನು ಅಜರನ್ಸಿನ ಸಫ್ವಾನ್ ಹಾಗೂ ಶ್ರೇಷ್ಠ ಬೌಲರ್ ಟ್ರೋಫಿಯನ್ನು ಜೆನೂಬ್ ಫಿಟ್ನೆಸಿನ ಅಫ್ಶಾದ್ ಪಡೆದುಕೊಂಡರು.

ಶಫೀಲ್ ಕಣ್ಣೂರ್, ಸಹೀರ್ ವಿಳಯಿಲ್, ಜಲೀಲ್ ಹೆಂತಾರ್ ಮಂಗಳೂರು, ಮುನೀರ್ ಕಲ್ಪಕಂಜೇರಿ, ಹಾಶಿಂ, ಶಾಹಿದ್ ಮಾನಿಕ್ಕೋತ್, ಅಸ್ಹರ್, ರಿಯಾಸ್ ಪಪ್ಪನ್, ಸಾಯಿ ಕೋಟ್ಟಕ್ಕಲ್, ಯೂಸುಫ್ ಕಾರಕ್ಕಾಡ್, ನಿಯಾಸ್ ಎನ್ ಸೆವೆನ್, ಅಬ್ದುಲ್ ರಹಿಮಾನ್ ಮತ್ತು ಜುಬೇರ್ ಮುಂತಾದವರು ಪದ್ಯಾಟಕ್ಕೆ ಸಹಕಾರ ನೀಡಿದರು. ಪ್ರಶಸ್ತ ಸಿನಿಮಾ ನಟ ರಿಯಾಸ್ ಖಾನ್ ವಿಜೇತ ತಂಡಕ್ಕೆ ಟ್ರೋಫಿಯನ್ನು ನೀಡಿದರು.

Hot this week

ಕನ್ನಡ ಸಂಘ ಬಹರೈನ್; ಸೆಪ್ಟೆಂಬರ್ 5ರಂದು ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ

ಬಹರೈನ್: ಬಹರೈನ್‌ನಲ್ಲಿರುವ ಕನ್ನಡ ಸಮುದಾಯವನ್ನು ಕನ್ನಡ ಸಂಘ ಬಹರೈನ್‌ನ ನೂತನ ಕಾರ್ಯಕಾರಿ...

ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಗ್ಗೆ 8:30ಕ್ಕೆ...

ಬಹರೈನ್ ರೇಡಿಯೋ ಆರ್ ಜೆ ಕಮಲಾಕ್ಷ ಅಮೀನ್​ಗೆ ‘ಗೋಲ್ಡನ್ ಐಕಾನಿಕ್ ಅವಾರ್ಡ್’ ಗೌರವ ಪ್ರಶಸ್ತಿ

ಮಂಗಳೂರು: ಬಹರೈನ್ ನ ಕಸ್ತೂರಿ ಕನ್ನಡ ಎಫ್ಎಂ ರೇಡಿಯೋ ಆರ್ ಜೆ...

Related Articles

Popular Categories