ಯುಎಇದುಬೈ: ಎಸ್‌.ಕೆ.ಎಸ್.ಎಸ್.ಎಫ್ ವಿಖಾಯ ವತಿಯಿಂದ ಅ.12ರಂದು ಬೃಹತ್ ರಕ್ತದಾನ...

ದುಬೈ: ಎಸ್‌.ಕೆ.ಎಸ್.ಎಸ್.ಎಫ್ ವಿಖಾಯ ವತಿಯಿಂದ ಅ.12ರಂದು ಬೃಹತ್ ರಕ್ತದಾನ ಶಿಬಿರ

ದುಬೈ: ಸಾಮಾಜಿಕ ಧಾರ್ಮಿಕ ರಂಗದಲ್ಲಿ ಪ್ರಚಲಿತದಲ್ಲಿರುವ ಎಸ್‌.ಕೆ.ಎಸ್.ಎಸ್.ಎಫ್ ವಿಖಾಯ ಯುಎಇ ಸಮಿತಿ ವತಿಯಿಂದ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಬೃಹತ್ ರಕ್ತದಾನ ಶಿಬಿರವು ಅ.12 ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2.30 ರವರೆಗೆ ಒದ್ ಮೆಹ್ತಾ ಹತ್ತಿರವಿರುವ ರಕ್ತದಾನ ಕೇಂದ್ರದಲ್ಲಿ ನಡೆಯಲಿದೆ.

ಪ್ರಸಕ್ತ ಕಾರ್ಯಕ್ರಮದ ಕುರಿತು ವಿಖಾಯ ಚೆಯರ್‌ಮ್ಯಾನ್ ಅನ್ವರ್ ಮಾಣಿಲ ಹಾಗು ಕನ್ವೀನಿಯರ್ ನಿಝಾಮ್ ತೋಡಾರ್ ಪತ್ರಿಕಾ ಪ್ರಕಟಣೆ ನೀಡಿದ್ದು, ವಿಖಾಯ ಸಮಿತಿಯು ಸಾಮಾಜಿಕವಾಗಿ ಅನಿವಾಸಿಗಳೆಡೆಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಸಂಘಟನೆಯಾಗಿದ್ದು, ಪ್ರತಿ ವರ್ಷ ವಿಖಾಯ ದಿನದ ಪ್ರಯುಕ್ತ ಅಕ್ಟೊಬರ್ ತಿಂಗಳಿನಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸುತ್ತಾ ಬಂದಿದ್ದು ಸುಮಾರು 150ಕ್ಕಿಂತಲೂ ಹೆಚ್ಚು ಯುನಿಟ್ ರಕ್ತವನ್ನು ಸಂಗ್ರಹಿಸುತ್ತಾ ಬಂದಿದೆ.

ಅದರಂತೆ ಸಮಸ್ತ ನೂರನೇ ವರ್ಷಾಚರಣೆ ಹಾಗು ಮರ್ಹೂಂ ಅಬ್ದುಲ್ ರಹ್ಮಾನ್ ಸ್ಮರಣಾರ್ಥ ಅ.12ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಅನಿವಾಸಿ ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನಿಗಳಾಗಬೇಕೆಂದು ವಿನಂತಿಸಿದರು.

Hot this week

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ...

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ "ಸ್ಪೋರ್ಟ್ಸ್ ಡೇ-2026" ಫೆಬ್ರವರಿ 22ರಂದು...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

Related Articles

Popular Categories