ಬಹರೈನ್ಬಹರೈನ್‌ನಲ್ಲಿ 10ನೇ ವಿಶ್ವ ದಾಖಲೆ ಬರೆಯಲು ಮುಂದಾಗಿರುವ ಉಡುಪಿ...

ಬಹರೈನ್‌ನಲ್ಲಿ 10ನೇ ವಿಶ್ವ ದಾಖಲೆ ಬರೆಯಲು ಮುಂದಾಗಿರುವ ಉಡುಪಿ ಪಿತ್ರೋಡಿಯ ಯೋಗಪಟು ತನುಶ್ರೀ!

ಅಕ್ಟೋಬರ್ 24ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಸಿದ್ಧಗೊಂಡ ಬಹರೈನ್ ಕನ್ನಡ ಭವನ ವೇದಿಕೆ

ಬಹರೈನ್: ಯೋಗದ 300 ಆಸನಗಳನ್ನು ತೋರಿಸುವ ಮೂಲಕ ‘ಗೋಲ್ಡನ್ ಬುಕ್ ಓಫ್ ವರ್ಲ್ಡ್ ರೆಕಾರ್ಡ್’ನಲ್ಲಿ ತನ್ನ ಹೆಸರನ್ನು ದಾಖಲಿಸಲು ಉಡುಪಿಯ ತನುಶ್ರೀ ಪಿತ್ರೋಡಿ ಬಹರೈನ್ ದ್ವೀಪ ರಾಷ್ಟ್ರಕ್ಕೆ ಆಗಮಿಸಲಿದ್ದಾರೆ. ಕನ್ನಡ ಸಂಘ ಬಹರೈನ್ ಹಾಗು ಬಹರೈನ್ ಯೋಗ ಕಮ್ಯೂನಿಟಿಯ ಸಹಯೋಗದಲ್ಲಿ ಈ ಕಾರ್ಯಕ್ರಮವು ಇದೇ ಅಕ್ಟೋಬರ್ ತಿಂಗಳ 24ನೇ ತಾರೀಖಿನ ಶುಕ್ರವಾರದಂದು ಬೆಳಗ್ಗೆ 10 ಗಂಟೆಗೆ ಕನ್ನಡ ಭವನದ ಸಭಾಂಗಣದ್ಲಲಿ ಜರುಗಲಿದೆ.

2 ಗಿನ್ನೆಸ್ ದಾಖಲೆ ಹಾಗು 7 ಗೋಲ್ಡನ್ ಬುಕ್ ಓಫ್ ವರ್ಲ್ಡ್ ದಾಖಲೆಯೂ ಸೇರಿದಂತೆ 9 ವಿಶ್ವ ದಾಖಲೆಗಳನ್ನು ತನ್ನ ಹೆಸರಿನಲ್ಲಿ ದಾಖಲಿಸಿರುವ ತನುಶ್ರೀ ಇದೀಗ 10ನೇ ದಾಖಲೆಯನ್ನು ಬಹರೈನ್ ನಲ್ಲಿ ದಾಖಲಿಸಲು ತುಗಳಲ್ಲಿ ನಿಂತಿದ್ದಾಳೆ.

ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಅವರ ಅಧ್ಯಕ್ಷತೆಯಲ್ಲಿ ಜರುಗಲಿರುವ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಹರೈನ್ ಯೋಗ ಕಮ್ಯೂನಿಟಿಯ ಅಧ್ಯಕ್ಷ ಫಾತಿಮಾ ಅಲ್ ಮನ್ಸೂರಿ ಪಾಲ್ಗೊಳ್ಳುತ್ತಿದ್ದು, ಯುನೀಕೋ ಸಮೂಹ ಸಂಸ್ಥೆಗಳ ಮುಖ್ಯಸ್ಥ ಜಯಶಂಕರ್ ವಿಶ್ವನಾಥನ್, ಇಂಡಿಯನ್ ಕ್ಲಬ್ಬಿನ ಅಧ್ಯಕ್ಷ ಜೋಸೆಫ್ ಜೋಯ್, ಬಹರೈನ್ ಕೇರಳೀಯ ಸಮಾಜಂ ನ ಅಧ್ಯಕ್ಷ ಪಿ.ವಿ.ರಾಧಾಕೃಷ್ಣ ಪಿಳ್ಳೈ, ಇಂಡಿಯನ್ ಸ್ಕೂಲ್ ಬಹರೈನ್ ನ ಚೇರ್ಮ್ಯಾನ್ ಬಿನು ಮಣ್ಣಿಲ್ ವರ್ಗೀಸ್ ಅವರು ಭಾಗವಹಿಸಲಿದ್ದಾರೆ.

ವಿಶ್ವ ದಾಖಲೆಗಾಗಿ ನಡೆಯಲಿರುವ ಈ ಕಾರ್ಯಕ್ರಮದ ತೀರ್ಪುಗಾರರಾಗಿ ಗೋಲ್ಡನ್ ಬುಕ್ ಒಫ್ ವರ್ಲ್ಡ್ ರೆಕಾರ್ಡ್ ನ ಏಷ್ಯಾದ ಮುಖ್ಯಸ್ಥ ಡಾಕ್ಟರ್ ಮನೀಶ್ ವೈಶ್ನೋಯಿ ಕಾರ್ಯನಿರ್ವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ವೀಕ್ಷಿಸಲು ಬಹರೈನ್’ನ ಎಲ್ಲಾ ಕನ್ನಡಿಗರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಂದು ಅಧ್ಯಕ್ಷರಾದ ಅಜಿತ್ ಬಂಗೇರ ಮನವಿ ಮಾಡಿದ್ದಾರೆ. ಈ ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗೆ ಸಂಘದ ಅಧ್ಯಕ್ಷರನ್ನು ದೂರವಾಣಿ ಸಂಖ್ಯೆ 00973-36721660 ಮೂಲಕ ಸಂಪರ್ಕಿಸಬಹುದು.

ವರದಿ-ಕಮಲಾಕ್ಷ ಅಮೀನ್

Hot this week

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್​​ರನ್ನು ಗೌರವಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗುವಂತೆ, ಮಂಗಳೂರಿನ ಸಾಹಸಿ ಸೋಲೋ ವಿಶ್ವ...

ಕನ್ನಡ ಸಂಘ ಬಹರೈನ್‌ಗೆ ಪ್ರತಿಷ್ಠಿತ “ನವ ಕರ್ನಾಟಕ ರತ್ನ” ಪ್ರಶಸ್ತಿ

ಬೆಂಗಳೂರು: ಕನ್ನಡ ಭಾಷೆ, ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರ...

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ...

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

Related Articles

Popular Categories