ಯುಎಇಅ.25ರಂದು 'ದುಬೈ ಗಡಿನಾಡ ಉತ್ಸವ -2025 '; ಪೋಸ್ಟರ್...

ಅ.25ರಂದು ‘ದುಬೈ ಗಡಿನಾಡ ಉತ್ಸವ -2025 ‘; ಪೋಸ್ಟರ್ ಬಿಡುಗಡೆ

ದುಬೈ: ಯುಎಇಯಲ್ಲಿ ಇರುವ ಎಲ್ಲಾ ಗಡಿನಾಡಿನ ಹಾಗೂ ಕರುನಾಡಿನ ಕನ್ನಡಿಗರನ್ನು ಒಟ್ಟುಗೂಡಿಸಿ “ದುಬೈ ಗಡಿನಾಡ ಉತ್ಸವ -2025″ವನ್ನು ಅದ್ದೂರಿಯಾಗಿ ಆಚರಿಸುವ ಹಾಗೂ ಈ ಕಾರ್ಯಕ್ರಮ ಒಳ್ಳೆಯ ರೀತಿಯಲ್ಲಿ ಮೂಡಿಬರಲಿ ಎಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಗಲ್ಫ್ ನ ಅಧ್ಯಕ್ಷರಾದ ಅಶ್ರಫ್ ಶಾ ಮಾಂತುರು ಹೇಳಿದ್ದಾರೆ.

ಇತ್ತೀಚಿಗೆ ದುಬೈ ಗಡಿನಾಡ ಉತ್ಸವ -2025ರ ಪೋಸ್ಟರ್ ಬಿಡುಗಡೆ ಮಾಡಿ ಅವರು ಶುಭವನ್ನು ಹಾರೈಸಿದರು.

ಅಕ್ಟೋಬರ್ 25 ರಂದು ಸಂಜೆ 4ರಿಂದ ರಾತ್ರಿ ಹನ್ನೊಂದರ ವರೆಗೆ ಔದ್ ಮೇಥದ ಗ್ಲೆಂಡೇಲ್ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ನಡೆಯುವ ನಾಲ್ಕನೇ ವರ್ಷದ “ದುಬೈ ಗಡಿನಾಡ ಉತ್ಸವ -2025″ರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದುಬೈ ಘಟಕದ ಅಮರ್ ದೀಪ್ ಕಲ್ಲುರಾಯ ಮಾತನಾಡಿ, ಕಳೆದ ಮೂರು ವರ್ಷಗಳಿಂದ ದುಬೈನಲ್ಲಿ ಗಡಿನಾಡ ಉತ್ಸವ ಆಚರಿಸುವ ಮೂಲಕ ನಮ್ಮ ಗಡಿನಾಡಿನ ಕಲೆ,ಸಾಹಿತ್ಯ, ಸಂಸ್ಕೃತಿಯನ್ನು ಅನಾವರಣಗೊಳಿಸುತ್ತಿದ್ದೇವೆ. ಈ ವರ್ಷ ನಮ್ಮ ನಾಲ್ಕನೇ ವರ್ಷದ ಕಾರ್ಯಕ್ರಮ ಯುಎಇಯಲ್ಲಿ ಇರುವ ಎಲ್ಲಾ ಕನ್ನಡಿಗರೂ ಈ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಿ ಮಂಜುನಾಥ ರಾಜನ್, ದುಬೈಯ ಕನ್ನಡ ನಿರೂಪಕಿ ಆರತಿ ಅಡಿಗ, ಶಾರ್ಜಾ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ನೋಯೆಲ್ಅ ಲ್ಮೇಡಾರವರು ಅಕ್ಟೋಬರ್ 25 ರಂದು ನಡೆಯುವ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಘಟಕದ ಪದಾಧಿಕಾರಿಗಳಾದ ಸುಗಂದರಾಜ್ ಬೇಕಲ್, ಮಂಜುನಾಥ ಕಾಸರಗೋಡು, ವಿಜಯಕುಮಾರ್ ಶೆಟ್ಟಿ ಗಾಣದಮೂಲೆ, ಯೂಸುಫ್ ಶೇಣಿ, ಅಶ್ರಫ್ ಪಿ.ಪಿ. ಬಾಯರ್, ಬಾಬ ಬಾಜೂರಿ, ಅನೀಶ್ ಅಡಪ ಮಡಂದೂರು, ರಾಮಚಂದ್ರ ಬೆದ್ರಡ್ಕ, ಆಶೀಕ್ ಮಿಯಾ, ಮನ್ಸೂರ್ ಮರ್ಥ್ಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಬಾಬ ಬಾಜೂರಿ ಸ್ವಾಗತಿಸಿ, ಅಶ್ರಫ್ ಪಿ.ಪಿ.ಬಾಯರ್ ಧನ್ಯವಾದವಿತ್ತರು.

Hot this week

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್​​ರನ್ನು ಗೌರವಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗುವಂತೆ, ಮಂಗಳೂರಿನ ಸಾಹಸಿ ಸೋಲೋ ವಿಶ್ವ...

ಕನ್ನಡ ಸಂಘ ಬಹರೈನ್‌ಗೆ ಪ್ರತಿಷ್ಠಿತ “ನವ ಕರ್ನಾಟಕ ರತ್ನ” ಪ್ರಶಸ್ತಿ

ಬೆಂಗಳೂರು: ಕನ್ನಡ ಭಾಷೆ, ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರ...

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ...

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

Related Articles

Popular Categories