ಅಮೇರಿಕ: ಫ್ಲೋರಿಡಾದ ಶ್ರೀಗಂಧ ಕನ್ನಡ ಕೂಟವು ಸಂಕ್ರಾಂತಿ ಹಿನ್ನೆಲೆಯಲ್ಲಿ ಇಂದು(ಜನವರಿ 17) ಟ್ಯಾಂಪಾ ನಗರದ ಇಂಡಿಯನ್ ಕಲ್ಚರಲ್ ಸೆಂಟರ್ ನಲ್ಲಿ ‘ಹೊಸಬೆಳಕು’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ.

ಮಧ್ಯಾಹ್ನ 12 ಗಂಟೆಯಿಂದ ಆರಂಭವಾಗಲಿರುವ ಕಾರ್ಯಕ್ರಮವು ರಾತ್ರಿ 11ರ ವರಗೆ ನಡೆಯಲಿದೆ. ಪ್ರಸಿದ್ಧ ಗಾಯಕ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಅವರಿಂದ ರಾತ್ರಿ 7.30ರಿಂದ 11ರ ವರಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಯುನಿವರ್ಸಿಟಿ ಆಫ್ ಸೌತ್ ಫ್ಲೋರಿಡಾ(USF)ದ ಪ್ರಾಧ್ಯಾಪಕ ಡಾ.ಗಿಲ್ ಬೆನ್-ಹೆರೂಟ್, ಲೂಯಿಸ್ ವಿಯೇರಾ (ಟ್ಯಾಂಪಾ ಸಿಟಿ ಕೌನ್ಸಿಲ್) ಅವರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 12ಗಂಟೆಗೆ ಮುಖ್ಯ ಅರ್ಚಕರಾದ ಗುರುದತ್ ಅವರಿಂದ ವೇದಘೋಷ ನೆರವೇರಲಿದೆ. ಅನಂತರ ಕರ್ನಾಟಕ ಶೈಲಿ ಬಾಳೆ ಎಲೆ ಊಟ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 2ಗಂಟೆಯಿಂದ ಸಂಜೆ 6ರ ವರಗೆ ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮ, ಬಳಿಕ ಸಂಕ್ರಾಂತಿ ವಿಶೇಷ – ಲಘು ಭೋಜನ ಅನಂತರ ರಾಜೇಶ್ ಕೃಷ್ಣನ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಫ್ಲೋರಿಡಾದ ಶ್ರೀಗಂಧ ಕನ್ನಡ ಕೂಟದ ಅಧ್ಯಕ್ಷ ಹರ್ಷಿತ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

