ಯುಎಇಅಟ್ಲಾಂಟ ಒಕ್ಕಲಿಗರ ಕೂಟದಿಂದ ಪ್ರಥಮ ಸಮಾವೇಶ

ಅಟ್ಲಾಂಟ ಒಕ್ಕಲಿಗರ ಕೂಟದಿಂದ ಪ್ರಥಮ ಸಮಾವೇಶ

ಕೆ. ಆರ್. ಶ್ರೀನಾಥ್, ಅಟ್ಲಾಂಟ

ಅಟ್ಲಾಂಟ: ಫೆಬ್ರವರಿ 22ರ ರವಿವಾರದಂದು ಅಟ್ಲಾಂಟದಲ್ಲಿ ನೆಲಸಿರುವ ಒಕ್ಕಲಿಗ ಸಮಾಜದ ಅನಿವಾಸಿಗಳು “ಫೌಲರ್ ಪಾರ್ಕ್” ಪೆವಿಲಿಯನ್ ನಲ್ಲಿ ತಮ್ಮ ಮೊದಲ ಮಿಲನ ಸಮಾವೇಶವನ್ನು ಆಯೋಜಿಸಿದ್ದರು.

ಕನ್ನಡ ನಾಡಿನ ರೈತಾಪಿ ಸಮಾಜದ ಹಿನ್ನೆಲೆಯುಳ್ಳ ಅಟ್ಲಾಂಟದ ಅನಿವಾಸಿ ಒಕ್ಕಲಿಗ ಸಮಾಜವನ್ನು ಒಂದುಗೂಡಿಸಿ ತಮ್ಮ ಸಾಂಸ್ಕೃತಿಕ ಮೂಲವನ್ನು ಸಂಭ್ರಮಿಸಲು ಹಾಗೂ ಮುಂದಿನ ಪೀಳಿಗೆಗೂ ಪರಿಚಯಿಸುವ ಉದ್ದೇಶದಿಂದ ವಿ.ಟಿ.ದಯಾನಂದ ಅವರ ನೇತೃತ್ವದಲ್ಲಿ ಈ ಸಮಾವೇಶವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.
ಹವಾಮಾನ ವೈಪರೀತ್ಯದ ಕಾರಣ ಅತಿಯಾದ ಚಳಿಗಾಳಿ ಇದ್ದರೂ ಸಹ ಸುಮಾರು 150ಕ್ಕೂ ಹೆಚ್ಚು ಒಕ್ಕಲಿಗ ಸಮಾಜದ ಅನಿವಾಸಿಗಳು ಸಂತೋಷ, ಸಂಭ್ರಮದಿಂದ ಭಾಗವಹಿಸಿದ್ದರು.

ಆಯೋಜಕರಾದ ವಿ.ಟಿ.ದಯಾನಂದ್ ಮತ್ತು ಅವರ ಸ್ನೇಹಿತರು ಒಗ್ಗೂಡಿ, ಶ್ರಮವಹಿಸಿ ಕರ್ನಾಟಕದ ಗ್ರಾಮೀಣ ಶೈಲಿಯ ಮಾಂಸಾಹಾರಿ ಮತ್ತು ಸಸ್ಯಾಹಾರಿ ಭರ್ಜರಿ ಭೋಜನವನ್ನು ತಯಾರಿಸಿ ಉಣಬಡಿಸಿ ಎಲ್ಲರ ಮನಗೆದ್ದರು.

ಅಟ್ಲಾಂಟ ನಗರದಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದರೂ ಸಹ ತಮ್ಮ ಸಮಾಜದ ಇಷ್ಟೊಂದು ಅನಿವಾಸಿಗಳಿದ್ದರೂ ಪರಸ್ಪರ ಪರಿಚಯವಿಲ್ಲದೆ ಒಕ್ಕಲಿಗರು ಈ ಭೇಟಿ ಮತ್ತು ಮಿಲನದ ಮೂಲಕ ಒಂದಾಗುವ ಸದಾವಕಾಶ ದೊರೆಯಿತು. ಸಂಗೀತ ಅವರಿಂದ ನೆರೆದಿದ್ದ ಸಮಾಜದ ಬಂಧುಗಳಿಗೆ ವಿವಿಧ ಮನರಂಜನಾ ಕಾರ್ಯಕ್ರಮ ಹಾಗೂ ಕೆ. ಆರ್. ಶ್ರೀನಾಥ್ ಅವರಿಂದ ಕನ್ನಡ ರಸಪ್ರಶ್ನೆಯನ್ನು ಆಯೋಜಿಸಲಾಗಿತ್ತು. ಮಕ್ಕಳಿಗೂ ಸಹ ಆಟಗಳನ್ನು ಏರ್ಪಡಿಸಲಾಗಿತ್ತು.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಟ್ಲಾಂಟದ ಒಕ್ಕಲಿಗರನ್ನು ಸೇರಿಸಿ ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಕಾರ್ಯಕ್ರಮಗಳನ್ನು ಮುನ್ನಡೆಸಬೇಕೆಂಬ ರೂಪುರೇಷೆಗಳನ್ನು ಚರ್ಚಿಸಿ ಅನುಷ್ಟಾನಗೊಳಿಸಲು ತೀರ್ಮಾನಿಸಲಾಯಿತು. ಅಟ್ಲಾಂಟ ಕನ್ನಡಿಗರ ಮಾತೃ ಸಂಸ್ಥೆಯಾದ ನೃಪತುಂಗ ಕನ್ನಡ ಕೂಟದ ಸದಸ್ಯತ್ವವನ್ನು ಪಡೆದು, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಕನ್ನಡ ಭಾಷಾ ಪ್ರೇಮವನ್ನು ಮೆರೆಯಬೇಕೆಂದು ನೆರೆದಿದ್ದ ಒಕ್ಕಲಿಗರನ್ನು ಮನವಿ ಮಾಡಿಕೊಳ್ಳಲಾಯಿತು.

ಈ ಮೊದಲ ಭೇಟಿಯು ಅಟ್ಲಾಂಟ ಒಕ್ಕಲಿಗರಿಗೆ ಹರ್ಷಮಯವಾಗಿತ್ತು. ಕಾರ್ಯಕ್ರಮವನ್ನು ಆಯೋಜಿಸಿದ ವಿ.ಟಿ. ದಯಾನಂದ್ ಮತ್ತು ಅವರ ಸಹ ಆಯೋಜಕರಿಗೆ ಅಟ್ಲಾಂಟ ಒಕ್ಕಲಿಗರೆಲ್ಲರಿಂದ ಹೃತ್ಪೂರ್ವಕವಾಗಿ ಮೆಚ್ಚುಗೆ ಹಾಗೂ ಅಭಿನಂದನೆ ಅರ್ಪಿಸಲಾಯಿತು.

Hot this week

ಬಹರೈನ್‌; ‘ಕೆಸಿಎಫ್’ನಿಂದ ಈದ್ ಮಿಲಾದ್ ಸಮ್ಮೇಳನಕ್ಕೆ ಸ್ವಾಗತ ಸಮಿತಿ ರಚನೆ

ಮನಾಮ: ಕರ್ನಾಟಕ ಕಲ್ಬರಲ್ ಫೌಂಡೇಶನ್ (ಕೆಸಿಎಫ್) ಬಹರೈನ್‌ ವತಿಯಿಂದ ಪ್ರವಾದಿ ಮುಹಮ್ಮದ್‌ರವರ...

ಅಮೇರಿಕ; ಭಕ್ತಿ, ಬಸವತತ್ವ, ನಾಟಕ-ನೃತ್ಯ ವೈಭವದಿಂದ ಕಂಗೊಳಿಸಿದ VSNA ಮಹಾಸಮ್ಮೇಳನದ ಎರಡನೇ ದಿನ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಸ್ಯಾನ್‌ಫೋರ್ಡ್ (ಉತ್ತರ ಕೆರೊಲಿನಾ: 48ನೇ ವೀರಶೈವ ಸೊಸೈಟಿ...

ಕನ್ನಡ ಸಂಘ ಬಹರೈನ್‌ನ ‘ಯಕ್ಷ ವೈಭವ 2026’ ಮುಹೂರ್ತ ಪೂಜೆ ಸಂಪನ್ನ

ಬಹರೈನ್‌: ಕನ್ನಡ ಸಂಘ ಬಹರೈನ್ ಅರ್ಪಿಸುವ ‘ಯಕ್ಷ ವೈಭವ 2026’ ರ...

ಅಮೇರಿಕ; ಉತ್ತರ ಕೆರೊಲಿನಾದಲ್ಲಿ 48ನೇ ವಿಎಸ್‌ಎನ್‌ಎ ಮಹಾಸಮ್ಮೇಳನಕ್ಕೆ ಅದ್ದೂರಿ ಚಾಲನೆ

-ಬೆಂಕಿ ಬಸಣ್ಣ, ಉತ್ತರ ಕೆರೊಲಿನಾ ಉತ್ತರ ಅಮೇರಿಕದ ವೀರಶೈವ-ಲಿಂಗಾಯತ ಸಮುದಾಯದ ಅತ್ಯಂತ ಹಿರಿಯ...

ಕರ್ನಾಟಕ ಸಂಘ ಶಾರ್ಜಾ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ ಪ್ರಮಾಣ ವಚನ ಸ್ವೀಕಾರ

ದುಬೈ: ಯುಎಇಯಲ್ಲಿ ಕಳೆದ 23 ವರ್ಷಗಳಿಂದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ...

Related Articles

Popular Categories