ಬಹರೈನ್ಕನ್ನಡ ಸಂಘ ಬಹರೈನ್‌ನ ‘ಯಕ್ಷ ವೈಭವ 2026’ ಮುಹೂರ್ತ...

ಕನ್ನಡ ಸಂಘ ಬಹರೈನ್‌ನ ‘ಯಕ್ಷ ವೈಭವ 2026’ ಮುಹೂರ್ತ ಪೂಜೆ ಸಂಪನ್ನ

ಬಹರೈನ್‌: ಕನ್ನಡ ಸಂಘ ಬಹರೈನ್ ಅರ್ಪಿಸುವ ‘ಯಕ್ಷ ವೈಭವ 2026’ ರ ಅಂಗವಾಗಿ ಪ್ರದರ್ಶನಗೊಳ್ಳಲಿರುವ ‘ಲಕ್ಷ್ಮೀ ಸ್ವಯಂವರ – ವಾಲಿ ಮೋಕ್ಷ’ ಯಕ್ಷಗಾನ ಪ್ರಸಂಗದ ಪೂರ್ವಾಭ್ಯಾಸಕ್ಕೆ ಮುಹೂರ್ತ ಪೂಜೆ ಶುಕ್ರವಾರ ಜುಲೈ 3 ರಂದು ಕನ್ನಡಭವನದ ಯೋಗ ಕೇಂದ್ರದಲ್ಲಿ ಭಕ್ತಿಭಾವದಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಹಾಗೂ ಗಣ್ಯ ಅತಿಥಿಗಳು ಯಕ್ಷ ವೈಭವ 2026ರ ಭಿತ್ತಿಪತ್ರ ಮತ್ತು ಆಹ್ವಾನ ಪತ್ರಿಕೆಯನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅಜಿತ್ ಬಂಗೇರ ಅವರು, ಯಕ್ಷಗಾನವನ್ನು ಬಹರೈನ್‌ನಲ್ಲಿ ಮತ್ತಷ್ಟು ಉತ್ತುಂಗಕ್ಕೇರಿಸುವ ನಿಟ್ಟಿನಲ್ಲಿ ಎಲ್ಲ ಕಲಾಭಿಮಾನಿಗಳ ಸಹಕಾರ ಅಗತ್ಯವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಮತ್ತು ಅಮರನಾಥ್ ರೈ, ಯಕ್ಷಧ್ರುವ ಪಟ್ಲ ಫೌಂಡೇಶನ್ ಬಹರೈನ್–ಸೌದಿ ಘಟಕದ ಗೌರವಾಧ್ಯಕ್ಷ ಸುಭಾಷ್ ಚಂದ್ರ, ದಮ್ಮಾಮ್ ಬಿಲ್ಲವಾಸ್ ಅಧ್ಯಕ್ಷ ಸತೀಶ್ ಬಜಾಲ್, ಸೌದಿಯ ಕಲಾಪೋಷಕರಾದ ನರೇಂದ್ರ ಶೆಟ್ಟಿ ಮತ್ತು ನವೀನ್ ಭಂಡಾರಿ, ಅಂಕಣಕಾರ ಕಿರಣ್ ಉಪಾಧ್ಯಾಯ, ವಿಶ್ವಕರ್ಮ ಸೇವಾ ಬಳಗದ ಅಧ್ಯಕ್ಷ ಸತೀಶ್ ಉಳ್ಳಾಲ್, ಪತ್ರಿಕಾ ಪ್ರತಿನಿಧಿ ಕಮಲಾಕ್ಷ ಅಮೀನ್, ಬಹರೈನ್ ಬಿಲ್ಲವಾಸ್ ಉಪಾಧ್ಯಕ್ಷ ಸೀತಾರಾಮ್ ಪೂಜಾರಿ, ಮೊಗವೀರ್ಸ್ ಬಹರೈನ್ ಮಾಜಿ ಅಧ್ಯಕ್ಷ ಸಿ.ಎಲ್. ಮೆಂಡನ್, ಹಿರಿಯ ಕಲಾವಿದ ಮೋಹನ್ ಎಡನೀರು, ಯಕ್ಷಶಿಕ್ಷಣದ ಶಿಕ್ಷಕ ಜೀವಿತ್ ಪೂಂಜ, ಉಪಾಧ್ಯಕ್ಷ ನಿತಿನ್ ಶೆಟ್ಟಿ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಹರಿಣಿ ಉತ್ಕರ್ಷ್ ಶೆಟ್ಟಿ ಸೇರಿದಂತೆ ಹಲವರು ಶುಭ ಹಾರೈಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಯಕ್ಷಗಾನ ಸಂಚಾಲಕ ರಾಮಪ್ರಸಾದ್ ಅಮ್ಮೆನಡ್ಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ,ಕಾರ್ಯಕ್ರಮ ನಿರೂಪಿಸಿದರು.

ಬರುವ ಸೆಪ್ಟೆಂಬರ್ 25ರಂದು ಕನ್ನಡಭವನ ಸಭಾಂಗಣದಲ್ಲಿ ನಡೆಯಲಿರುವ ಯಕ್ಷ ವೈಭವ 2026ರಲ್ಲಿ ತಾಯ್ನಾಡಿನ ಖ್ಯಾತ ಮಹಿಳಾ ಭಾಗವತರಾದ ಕಾವ್ಯಶ್ರೀ ನಾಯಕ್ ಆಜೇರು, ಹಿಮ್ಮೇಳ ಕಲಾವಿದರಾದ ಸತ್ಯಜಿತ್ ರಾವ್ ಹಾಗೂ ಸವಿನಯ ನೆಲ್ಲಿತೀರ್ಥ (ಯುಎಇ), ಮುಮ್ಮೇಳ ಕಲಾವಿದರಾಗಿ ಯಕ್ಷಗುರು ಶೇಖರ್ ಶೆಟ್ಟಿಗಾರ್ (ಯುಎಇ) ಅವರೊಂದಿಗೆ ಸಂಘದ ಸದಸ್ಯ ಕಲಾವಿದರು ಹಾಗೂ ಯಕ್ಷಶಿಕ್ಷಣದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಮುಹೂರ್ತ ಪೂಜೆಯಲ್ಲಿ ನೂರಾರು ಸದಸ್ಯರು ಹಾಗೂ ಕಲಾಭಿಮಾನಿಗಳು ಪಾಲ್ಗೊಂಡಿದ್ದರು. ನಾರಾಯಣ ಪಂಜತೊಟ್ಟಿ ಅವರ ಭಾಗವತಿಕೆಯಲ್ಲಿ ಮೋಹನ್ ಎಡನೀರು, ಭಾಸ್ಕರ ಆಚಾರ್ಯ, ಸಚಿನ್ ಪಾಟಾಳಿ ಹಾಗೂ ರಾಜೇಶ್ ಮಾವಿನಕಟ್ಟೆ ಅವರು ಹಿಮ್ಮೇಳ ಸಹಕಾರ ನೀಡಿದರು. ಛಾಯಾಗ್ರಹಣದ ಸಹಕಾರವನ್ನು ಕೌಶಿಕ್ ಸುವರ್ಣ ಒದಗಿಸಿದರು. ಕಾರ್ಯಕ್ರಮದ ಬಳಿಕ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

Hot this week

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

ಕರ್ನಾಟಕ ಸಂಘ ಖತರ್‌ನಿಂದ 71ನೇ ಕರ್ನಾಟಕ ರಾಜ್ಯೋತ್ಸವ ‘ಕರುನಾಡ ವೈಭವ 2026’ ಪೋಸ್ಟರ್ ಅನಾವರಣ

ದೋಹಾ: ಭಾರತೀಯ ರಾಯಭಾರ ಕಚೇರಿ, ದೋಹಾ ಇದರ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಭಾರತೀಯ...

ಮಸ್ಕತ್‌ನಲ್ಲಿ ಸತ್ಯನಾರಾಯಣ ಪೂಜೆ-ನಾರಾಯಣ ಗುರು ಜಯಂತಿ ಆಚರಣೆ

ಮಸ್ಕತ್: ಒಮಾನ್ ಬಿಲ್ಲವಾಸ್ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಬ್ರಹ್ಮಶ್ರೀ...

ದುಬೈ; ಗಂಧರ್ವ ಗಮಕ ಶಾಲೆಯಲ್ಲಿ ವಿಶೇಷ ಗುರುಪೂರ್ಣಿಮಾ ಕಾರ್ಯಕ್ರಮ

ದುಬೈ: ಗಮಕ ಕಲೆಯ ಪ್ರಸಿದ್ಧ ಕಲಾವಿದ ಹಾಗೂ ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ...

Related Articles

Popular Categories