ದುಬೈ: ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ವಿಖಾಯ ವತಿಯಿಂದ, ದಕ್ಷಿಣ ಕನ್ನಡ ಜಿಲ್ಲಾ ಖಾಝಿಯಾಗಿದ್ದ ಮರ್ಹೂಂ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ಸ್ಮರಣಾರ್ಥ ಹಾಗೂ ವಿಖಾಯ ಡೇ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು ಅಕ್ಟೋಬರ್ 4ರ ರವಿವಾರ ಆಯೋಜಿಸಲಾಗಿದೆ.
ದುಬೈ ಜದಾಫ್‌ನಲ್ಲಿರುವ ದುಬೈ ಹೆಲ್ತ್ ಅಥಾರಿಟಿ ರಕ್ತದಾನ ಕೇಂದ್ರದಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಶಿಬಿರ ನಡೆಯಲಿದೆ. ವಿವಿಧ ಕ್ಷೇತ್ರಗಳ ಗಣ್ಯರು, ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರು ಹಾಗೂ ಎಸ್‌ಕೆಎಸ್‌ಎಸ್‌ಎಫ್ ಹಿತೈಷಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಅನಿವಾಸಿ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜೀವ ಉಳಿಸುವ ಈ ಕಾರ್ಯವನ್ನು ಯಶಸ್ವಿಗೊಳಿಸಬೇಕೆಂದು ವಿಖಾಯ ಚೇರ್ಮೆನ್ ಅನ್ವರ್ ಮಾಣಿಲ ಹಾಗೂ ಕನ್ವೀನರ್ ನಿಝಾಮ್ ತೋಡಾರ್ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 055 808 6595, 056 488 9400, 055 130 7402 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

