ಯುಎಇಯುಎಇ: ಫುಜೈರಾದ ತುಂಬೆ ಹಾಸ್ಪಿಟಲ್ ನಿಂದ ಮಧುಮೇಹ ...

ಯುಎಇ: ಫುಜೈರಾದ ತುಂಬೆ ಹಾಸ್ಪಿಟಲ್ ನಿಂದ ಮಧುಮೇಹ ಜಾಗೃತಿ ವಾಕಥಾನ್: 500ಕ್ಕೂ ಅಧಿಕ ಮಂದಿ ಭಾಗಿ

ಯುಎಇ: ವಿಶ್ವ ಮಧುಮೇಹ ದಿನದ ಪ್ರಯುಕ್ತ ಯುಎಇಯ ಫುಜೈರಾದಲ್ಲಿನ ತುಂಬೆ ಹಾಸ್ಪಿಟಲ್ ವಾಕಥಾನ್(Walkathon) ನ್ನು ನ.17ರಂದು ಯಶಸ್ವಿಯಾಗಿ ಆಯೋಜಿಸಿದೆ.

ಮಧುಮೇಹ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹೆಚ್ಚು ಮಹತ್ವದ್ದಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ವಲಯಗಳ 500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. 

ವಾಕಥಾನ್ ಫುಜೈರಾದ ತುಂಬೆ ಹಾಸ್ಪಿಟಲ್ ನಿಂದ ಪ್ರಾರಂಭವಾಗಿ ಮತ್ತು ಫುಜೈರಾ ಫುಟ್ಬಾಲ್ ಸ್ಟೇಡಿಯಂವರೆಗೆ ನಡೆದಿದೆ. ಸಂಜೆ 4ರಿಂದ 5ರವರೆಗೆ ವಾಕಥಾನ್ ಸಾಗಿದೆ. ಮಧುಮೇಹದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಸಂದೇಶಗಳಿರುವ ಬ್ಯಾನರ್ ಗಳನ್ನು ಮತ್ತು ಫಲಕಗಳನ್ನು ವಾಕಥಾನ್ ನಲ್ಲಿ ಭಾಗವಹಿಸಿದ್ದವರು ಪ್ರದರ್ಶಿಸಿದ್ದರು. ವಾಕಥಾನ್ ಜೊತೆಗೆ ತುಂಬೆ ಆಸ್ಪತ್ರೆಯು ಉಚಿತ ಬಿಪಿ ಮತ್ತು ಶುಗರ್ ಪರೀಕ್ಷೆಯನ್ನು ನಡೆಸಿದೆ.

ಫುಜೈರಾ ತುಂಬೆ ಹಾಸ್ಪಿಟಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಮನೀಶ್ ಸಿಂಘಾಲ್ ಈ ವೇಳೆ ಮಾತನಾಡಿದ್ದು, ವಾಕಥಾನ್ ಮಧುಮೇಹ ತಡೆಗಟ್ಟುವಲ್ಲಿ ಆರೋಗ್ಯಕರ ಜೀವನಶೈಲಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದಲ್ಲದೆ, ದಿನನಿತ್ಯದ ಆರೋಗ್ಯ ತಪಾಸಣೆಯ ಮೌಲ್ಯವನ್ನು ಹೇಳುತ್ತದೆ ಎಂದು ಹೇಳಿದ್ದಾರೆ.

ಈ ವೇಳೆ  ಮಾತನಾಡಿದ ತುಂಬೆ ಹೆಲ್ತ್ ಕೇರ್ ನ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ, ಮಧುಮೇಹ ನಮ್ಮಲ್ಲಿನ ಅತಿ ದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಅಭಿಯಾನ ಆರೋಗ್ಯಕರ ಜೀವನಶೈಲಿ ಅನುಸರಿಸಲು ಜನರನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಆರೋಗ್ಯದ ಬಗ್ಗೆ ಸರಿಯಾಗಿ ನಿಗಾ ವಹಿಸುವುದರಿಂದ ಮಧುಮೇಹ ಹೊಂದಿರುವ ವ್ಯಕ್ತಿಗಳು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಬಹುದು ಎಂದು ಹೇಳಿದ್ದಾರೆ.

ಫುಜೈರಾನಲ್ಲಿನ ತುಂಬೆ ಹಾಸ್ಪಿಟಲ್ ನ ಆಂತರಿಕ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಸಿ.ಆರ್. ಸತ್ಯನಾರಾಯಣನ್ ಮಾತನಾಡಿ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮುದಾಯವನ್ನು ಬೆಂಬಲಿಸುವ ತುಂಬೆ ಆಸ್ಪತ್ರೆಯ ಬದ್ಧತೆಯನ್ನು ಈ ಕಾರ್ಯಕ್ರಮವು ಪ್ರತಿಬಿಂಬಿಸುತ್ತದೆ. ಈ ಕಾರ್ಯಕ್ರಮಗಳ ಮೂಲಕ ಜನರು ಸಕಾರಾತ್ಮಕ ಜೀವನಶೈಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಫುಜೈರಾದ ತುಂಬೆ ಆಸ್ಪತ್ರೆ 60 ಹಾಸಿಗೆಗಳ ಪೂರ್ಣ ಪ್ರಮಾಣದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುತ್ತದೆ. ಆಸ್ಪತ್ರೆಯಲ್ಲಿ ವಿವಿಧ ವಿಶೇಷ ಘಟಕಗಳು, ಅನುಭವಿ ವೈದ್ಯರು ಸೇರಿದಂತೆ ಉತ್ತಮ ಸೌಲಭ್ಯಗಳಿವೆ.

Hot this week

ನಾಳೆ ಒಮಾನಿನಲ್ಲಿ ‘ಮಸ್ಕತ್ ಗಡಿನಾಡ ಉತ್ಸವ-2025’ ಸಾಂಸ್ಕೃತಿಕ ಕಾರ್ಯಕ್ರಮ; ಆಮಂತ್ರಣ ಪತ್ರಿಕೆ ಅನಾವರಣ

ಮಸ್ಕತ್: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಒಮಾನ್ ಘಟಕ ಮಸ್ಕತ್...

ತವರು ಪ್ರೇಮ ಮೆರೆದ ಹುಬ್ಬಳ್ಳಿ ಮೂಲದ ಕನ್ನಡಿಗ; ಲಂಡನಿನಲ್ಲಿ ತನ್ನ ಹೊಸ ‘ಟೆಸ್ಲಾ’ ಕಾರಿಗೆ ಧಾರವಾಡ ರಿಜಿಸ್ಟ್ರೇಷನ್ ಸಂಖ್ಯೆ!

ಲಂಡನ್: ವಿದೇಶದಲ್ಲಿದ್ದುಕೊಂಡು ತಮ್ಮ ತವರು ನಗರದೊಂದಿಗಿನ ಭಾವನಾತ್ಮಕ ಸಂಪರ್ಕವನ್ನು ಜೀವಂತವಾಗಿಡಲು ಇಲ್ಲೊಬ್ಬ...

Veteran expat Abdulaziz Kushalnagar passes away in Riyadh

Riyadh: Abdulaziz Kushalnagar, a long-time Indian expatriate from Kushalnagar...

Related Articles

Popular Categories