ದುಬೈ/ಯುಎಇ: ಯುಎಇಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸಂಖ್ಯೆ ಸಾರ್ವಕಾಲಿಕ ದಾಖಲೆಯತ್ತ ಸಾಗಿದೆ. ದುಬೈ ಕಾನ್ಸುಲೇಟ್‌ನ ಇತ್ತೀಚೆಗಿನ ಹೊಸ ಲೆಕ್ಕಾಚಾರಗಳ ಪ್ರಕಾರ 39 ಲಕ್ಷ ಅನಿವಾಸಿ ಭಾರತೀಯರು ಯುಎಇಯಲ್ಲಿ ನೆಲೆಸಿರುವುದಾಗಿ ತಿಳಿದು ಬಂದಿದೆ.
ಯುಎಇಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸಂಖ್ಯೆ 40 ಲಕ್ಷದ ಸನಿಹ ತಲುಪುತ್ತಿದೆ ಎಂದು ದುಬೈಯ ಭಾರತೀಯ ಕಾನ್ಸುಲ್ ಜನರಲ್ ಸತೀಶ್ ಸಿವನ್ ತಿಳಿಸಿದ್ದಾರೆ. ಕಳೆದ ವರ್ಷದ ಲೆಕ್ಕಾಚಾರಗಳ ಪ್ರಕಾರ 39 ಲಕ್ಷ ಜನರು ಭಾರತದಿಂದ ಯುಎಇಗೆ ಆಗಮಿಸಿದ್ದಾರೆಂದು ಅವರು ತಿಳಿಸಿದ್ದಾರೆ.
ಇನ್‌ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ದುಬೈ ಚಾಪ್ಟರ್ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಸತೀಶ್ ಸಿವನ್, 2012ರಲ್ಲಿ ಈ ಸಂಖ್ಯೆ 22 ಲಕ್ಷವಿತ್ತು. ಆದರೆ ಕೇವಲ 12 ವರ್ಷಗಳಲ್ಲಿ 17 ಲಕ್ಷ ಜನರು ಭಾರತದಿಂದ ಯುಎಇಗೆ ಬಂದಿದ್ದಾರೆ. 2023ರಲ್ಲಿ ಮಾತ್ರ 1 ಲಕ್ಷದ 30 ಸಾವಿರ ಜನ ಭಾರತದಿಂದ ಯುಎಇಗೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಯುಎಇಯಲ್ಲಿನ ಭಾರತೀಯರ ಹೆಚ್ಚಳದಿಂದಾಗಿ ಈ ಎರಡೂ ರಾಷ್ಟ್ರಗಳ ಸಂಬಂಧವನ್ನು ಗಟ್ಟಿಗೊಳಿಸಿದೆ. ಯುಎಇಯ ಆರೋಗ್ಯ, ರಿಯಲ್ ಎಸ್ಟೇಟ್, ರಿಟೈಲ್ ಕ್ಷೇತ್ರಗಳಲ್ಲಿ ಭಾರತೀಯ ಹೆಚ್ಚಿನ ಹೂಡಿಕೆಯನ್ನು ಮಾಡುತ್ತಿದ್ದು, ಇದು ಯುಎಇಯ ಬೆಳವಣಿಗೆಗೆ ಕೊಡುಗೆಯನ್ನು ನೀಡುತ್ತಿದೆ ಎಂದು ಸತೀಶ್ ಸಿವನ್ ತಿಳಿಸಿದ್ದಾರೆ.