ಸಂದೇಶ́ಗ್ಲೋಬಲ್‌ ಕನ್ನಡಿಗʼಗೆ ಶುಭ ಹಾರೈಸಿದ ʼಅಕ್ಕʼದ ಡಾ.ಅಮರನಾಥ ಗೌಡ

́ಗ್ಲೋಬಲ್‌ ಕನ್ನಡಿಗʼಗೆ ಶುಭ ಹಾರೈಸಿದ ʼಅಕ್ಕʼದ ಡಾ.ಅಮರನಾಥ ಗೌಡ

́ಗ್ಲೋಬಲ್‌ ಕನ್ನಡಿಗʼಗೆ ಶುಭ ಹಾರೈಸಿದ ʼಅಕ್ಕʼ

ವಾರ್ತಾಭಾರತಿ ಕನ್ನಡ ದೈನಿಕ ಸಮೂಹ ಅನಿವಾಸಿ ಕನ್ನಡಿಗರಿಗಾಗಿಯೇ ಮೀಸಲಾಗಿರುವ ಹೊಸ ವೆಬ್ ತಾಣ globalkannadiga.com ವನ್ನು ರೂಪಿಸಿರುವುದು ಅದ್ಬುತ ಕೆಲಸ. ಇದಕ್ಕಾಗಿ ನಾನು ವಾರ್ತಾಭಾರತಿ ಬಳಗವನ್ನು ಅಭಿನಂದಿಸುತ್ತೇನೆ.

ಈ ವೆಬ್ ತಾಣವನ್ನು ಕರ್ನಾಟಕದ ಜನತೆ ಹಾಗು ಜಗತ್ತಿನ ಎಲ್ಲ ದೇಶಗಳಲ್ಲಿರುವ ಕನ್ನಡಿಗರು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಅನಿವಾಸಿ ಕನ್ನಡಿಗರು ಹಾಗು ಕರ್ನಾಟಕ ಸರಕಾರದ ನಡುವೆ ಸೇತುವೆಯಾಗಿ ಈ ಹೊಸ ವೆಬ್ ಸೈಟ್ ರೂಪುಗೊಳ್ಳಲಿ. ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಹಾಗು ಕನ್ನಡಿಗರ ಬದುಕು ಬವಣೆಗಳ ಕುರಿತು ಇದರ ಮೂಲಕ ಚರ್ಚೆ, ಸಂವಾದ ನಡೆಯುವಂತಾಗಲಿ.

ವಿದೇಶದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರೆ ಕೇವಲ ಇಂಗ್ಲೀಷ್ ಮತ್ತು ಹಿಂದಿ ಭಾಷೆಯನ್ನೇ ಕೇಳುವ ಪರಿಸ್ಥಿತಿಯಿದೆ. ತಮಿಳುನಾಡಿನ ವಿಮಾನ ನಿಲ್ದಾಣಗಳಲ್ಲಿ ಉದ್ಯೋಗಿಗಳು ತಮಿಳು ಕಲಿತಿರಬೇಕು, ಮಾತಾಡಬೇಕು ಎಂಬ ನಿಯಮವಿದೆ. ಪ್ರಪಂಚದ ಎಲ್ಲ ದೇಶಗಳಿಂದ ಜನ ಕರ್ನಾಟಕಕ್ಕೆ ಬರುತ್ತಾರೆ. ಆಗ ಅವರಿಗೆ ಕನ್ನಡದ ಪರಿಚಯ ಆಗುವ ಹಾಗೆ ಸರಕಾರ ಕ್ರಮ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ವಾರ್ತಾಭಾರತಿ ಹಾಗು  globalkannadiga.com ಪ್ರಯತ್ನಿಸಲಿ.

ಹಿಂದಿ ಹೇರಿಕೆಯನ್ನು ತಡೆಯುವಲ್ಲಿ ವಾರ್ತಾಭಾರತಿಯಂತಹ ಮಾಧ್ಯಮಗಳ ಪಾತ್ರ ಮುಖ್ಯವಾಗಿದೆ.  ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳೆಸಲು ಹಾಗು ಜಾಗತಿಕ ಕನ್ನಡಿಗರ ಬದುಕು ಬೆಳಗಲು ಈ ಹೊಸ ವೆಬ್ ಸೈಟ್ ವೇದಿಕೆಯಾಗಲಿ ಎಂದು ಹಾರೈಸುತ್ತೇನೆ.

ಡಾ. ಅಮರನಾಥ ಗೌಡ , ಸ್ಥಾಪಕರು ಹಾಗು ಅಧ್ಯಕ್ಷರು,

ಅಮೇರಿಕದ ಕನ್ನಡ ಕೂಟಗಳ ಒಕ್ಕೂಟ (AKKA)

Hot this week

ಬಹರೈನ್ ಕನ್ನಡ ಸಂಘದಿಂದ 79ನೇ ಸ್ವಾತಂತ್ರ್ಯ ದಿನಾಚರಣೆ

ಬಹರೈನ್: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15ರಂದು ಬೆಳಗ್ಗೆ 8:30ಕ್ಕೆ...

ಬಹರೈನ್ ರೇಡಿಯೋ ಆರ್ ಜೆ ಕಮಲಾಕ್ಷ ಅಮೀನ್​ಗೆ ‘ಗೋಲ್ಡನ್ ಐಕಾನಿಕ್ ಅವಾರ್ಡ್’ ಗೌರವ ಪ್ರಶಸ್ತಿ

ಮಂಗಳೂರು: ಬಹರೈನ್ ನ ಕಸ್ತೂರಿ ಕನ್ನಡ ಎಫ್ಎಂ ರೇಡಿಯೋ ಆರ್ ಜೆ...

ಮಸ್ಕತ್‌ನಲ್ಲಿ ‘ಕನ್ನಡ ಭವನ’ ನಿರ್ಮಾಣಕ್ಕೆ ಕರ್ನಾಟಕ ಸರಕಾರದಿಂದ ಆರ್ಥಿಕ ನೆರವು ಬೇಕು: ‘ಮಸ್ಕತ್ ಕನ್ನಡ ಸಂಘ’ದ ಅಧ್ಯಕ್ಷ ಮಂಜುನಾಥ್ ಸಂಗಟಿ

ವಿಶೇಷ ಸಂದರ್ಶನ; ಎಂ.ಇಕ್ಬಾಲ್ ಉಚ್ಚಿಲ, ದುಬೈ ನಿಸರ್ಗ ನಿರ್ಮಿತ ರಮ್ಯ ಮನೋಹರ ತಾಣವಾಗಿರುವ...

Related Articles

Popular Categories