ಯುಎಇದುಬೈನಲ್ಲಿ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ವತಿಯಿಂದ ರಕ್ತದಾನ ಶಿಬಿರ; 194...

ದುಬೈನಲ್ಲಿ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ವತಿಯಿಂದ ರಕ್ತದಾನ ಶಿಬಿರ; 194 ಮಂದಿಯಿಂದ ರಕ್ತದಾನ

ದುಬೈ: ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸ್ಮರಣಾರ್ಥ ಹಾಗು ವಿಖಾಯ ಡೇ ಪ್ರಯುಕ್ತ ಎಸ್ಕೆಎಸ್ಎಸ್ಎಫ್ ಕರ್ನಾಟಕ ವಿಖಾಯ ವತಿಯಿಂದ ದುಬೈ ಹೆಲ್ತ್ ಅಥಾರಿಟಿಯ ಬ್ಲಡ್ ಡೊನೇಷನ್ ಸೆಂಟರ್ ನಲ್ಲಿ ಇತ್ತೀಚೆಗೆ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ 194 ಮಂದಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಕೈಜೋಡಿಸಿದರು. ಕಾರ್ಯಕ್ರಮದಲ್ಲಿ ಸುಮಾರು 350 ಮಂದಿ ಭಾಗವಹಿಸಿದ್ದು, 250 ಮಂದಿ ರಕ್ತದಾನಕ್ಕಾಗಿ ನೋಂದಣಿ ಮಾಡಿಕೊಂಡರು.

ಕಾರ್ಯಕ್ರಮವನ್ನು ಎಸ್ಕೆಎಸ್ಎಸ್ಎಫ್ ಯುಎಇ ಅಧ್ಯಕ್ಷರಾದ ಸಯ್ಯಿದ್ ಅಸ್ಕರ್ ಅಲಿ ತಂಙಳ್ ಕೊಲ್ಪೆ ಅವರು ಉದ್ಘಾಟಿಸಿ ಮಾತನಾಡಿ, ರಕ್ತದಾನವು ಮಾನವೀಯತೆಯ ಶ್ರೇಷ್ಠ ಸೇವೆಯಾಗಿದ್ದು, ಅಗತ್ಯವಿರುವ ರೋಗಿಗಳ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್ಕೆಎಸ್ಎಸ್ಎಫ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮೌಲಾನಾ ಅಲ್ ಹಾಜ್ ಅನೀಸ್ ಕೌಸರಿ ಉಸ್ತಾದ್, ಎಸ್ಕೆಎಸ್ಎಸ್ಎಫ್ ಸಂಘಟನೆಯ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಮಾನವೀಯ ಸೇವಾ ಚಟುವಟಿಕೆಗಳನ್ನು ವಿವರಿಸಿದರು.

ವಿಖಾಯ ಘಟಕವು ರಕ್ತದಾನ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳ ಮೂಲಕ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನು ಶ್ಲಾಘಿಸಿದರು. ರಕ್ತದಾನವು ಅಮೂಲ್ಯ ಜೀವಗಳನ್ನು ಉಳಿಸುವ ಮಹತ್ಕಾರ್ಯವಾಗಿದ್ದು, ಯುವಕರು ಇಂತಹ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಅಲಿ ಹಸನ್ ಫೈಝಿ ಅಲ್ ಮಅಬರಿ, ಅಶ್ರಫ್ ಶಾ ಮಂತೂರು, ಬದರುಲ್ ಮುನೀರ್ ಫೈಝಿ ಅಲ್ ಮಅಬರಿ, ಯುಎಇ ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರು, ಹಾಜಿ ಮೊಹಿಯುದ್ದೀನ್ ಕುಟ್ಟಿ ದಿಬ್ಬ, ಮುಸ್ತಾಕ್ ಕದ್ರಿ, ಹಾಜಿ ಅಲಿ ಹೈದರ್ ಈಶ್ವರಮಂಗಿಲ, ಹಾಜಿ ಸಂಶುದ್ದೀನ್ ಸೂರಲ್ಪಾಡಿ, ಲತೀಫ್ ಹಾಜಿ ಮದರ್ ಇಂಡಿಯಾ, ಅಬ್ದುಲ್ ರಝಾಕ್ ಹಾಜಿ ಮನಿಲಾ, ಶರೀಫ್ ಕಾವು, ಝೈನ್ ಸಖಾಫಿ ಅಬುದಾಬಿ, ನಸೀರ್ ಕಲ್ಲಡ್ಕ, ಷರೀಫ್ ಕೊಡಿನೀರ್ , ಶಾಫಿ ಹಾಜಿ ಅಬದಾಬಿ, ಸಮದ್ ಬಿರಾಲಿ, ಬದ್ರುದ್ಧೀನ್ ಹೆಂತಾರ್, ರಕ್ತದಾನದ ಮಹತ್ವವನ್ನು ಒತ್ತಿಹೇಳಿ, ಎಸ್ಕೆಎಸ್ಎಸ್ಎಫ್ ಕರ್ನಾಟಕ ವಿಖಾಯದ ಮಾನವೀಯ ಸೇವಾ ಕಾರ್ಯಗಳನ್ನು ಪ್ರಶಂಸಿಸಿದರು. ಸಮಾಜದಲ್ಲಿ ಸೇವಾ ಮನೋಭಾವ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು. ರಕ್ತದಾನದ ಮೂಲಕ ಸಂಕಷ್ಟದಲ್ಲಿರುವ ರೋಗಿಗಳ ಜೀವ ಉಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ, ನಿರಂತರವಾಗಿ ಆರು ಬಾರಿ ರಕ್ತದಾನ ಮಾಡಿದ ರಕ್ತ ದಾನಿಗಳಾದ ಸಯ್ಯದ್ ಅಸ್ಕರ್ ಅಲಿ ತಂಙಳ್ ಕೊಲ್ಪೆ, ರಫೀಕ್ ಕಂಬಳಬೆಟ್ಟು , ನಿಜಾಮ್ ತೊಡಾರ್ , ಶಂಸುದ್ದೀನ್ , ತಾಹಿರ್ ಹೆಂತಾರ್, ಆಸಿಫ್ ಮರೀಲ್, ಶಾಹುಲ್ ಹಮೀದ್ ಬಿಸಿರೋಡ್, ಮುಹಮ್ಮದ್ ಫರ್ವೇಝ್ ಅವರ ಅಮೂಲ್ಯ ಸೇವೆ, ನಿರಂತರ ಪ್ರಯತ್ನ ಹಾಗೂ ಮಾನವೀಯ ಬೆಂಬಲಕ್ಕಾಗಿ ಸನ್ಮಾನಿಸಿ ಗೌರವಿಸಲಾಯಿತು. ಅವರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದ ಸಂಘಟಕರು, ರಕ್ತದಾನದ ಮೂಲಕ ಜೀವಗಳನ್ನು ಉಳಿಸುವ ಕಾರ್ಯದಲ್ಲಿ ಇತರರಿಗೂ ಪ್ರೇರಣೆಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಕ್ತದಾನ ಮಾಡಿದ ಎಲ್ಲಾ ದಾನಿಗಳಿಗೆ ವಿಖಾಯ ವತಿಯಿಂದ ಉಡುಗೊರೆ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ರಕ್ತದಾನಿಗಳ ಅಮೂಲ್ಯ ಸೇವೆ ಮತ್ತು ಸಹಕಾರವನ್ನು ಅಭಿನಂದಿಸಿದ ಸಂಘಟಕರು, ಅವರ ಮಾನವೀಯ ಕೊಡುಗೆ ಇತರರಿಗೂ ಪ್ರೇರಣೆಯಾಗಲಿ ಎಂದು ಹಾರೈಸಿದರು.

ಸಮಾಜ ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ರಕ್ತದಾನ ಶಿಬಿರ ಒಟ್ಟು 250 ಮಂದಿ ನೋಂದಣಿ ಮಾಡಿಕೊಂಡಿದ್ದು, ಅವರಲ್ಲಿ 194 ಮಂದಿ ರಕ್ತದಾನ ಮಾಡಿದರು. ಸುಮಾರು 350 ಮಂದಿಯ ಭಾಗವಹಿಸುವಿಕೆಯೊಂದಿಗೆ ನಡೆದ ಈ ಶಿಬಿರವು ಸಂಘಟನೆಯ ಮಾನವೀಯ ಸೇವಾ ಬದ್ಧತೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ಸಾಕ್ಷಿಯಾಯಿತು. ರಕ್ತದಾನದ ಮೂಲಕ ಮಾನವ ಜೀವಗಳನ್ನು ಉಳಿಸುವ ಮಹತ್ವದ ಸಂದೇಶವನ್ನು ಸಾರಿದ ಈ ಕಾರ್ಯಕ್ರಮವು ಸಮಾಜದಲ್ಲಿ ಸೇವಾ ಮನೋಭಾವನೆ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಯಿತು.

ಈ ರಕ್ತದಾನ ಶಿಬಿರದ ಯಶಸ್ಸಿನಲ್ಲಿ ವಿಖಾಯ ಸ್ವಯಂಸೇವಕರ ಪರಿಶ್ರಮ, ಸಮರ್ಪಣೆ ಹಾಗೂ ಸಂಘಟಿತ ಕಾರ್ಯವೈಖರಿ ಪ್ರಮುಖ ಪಾತ್ರ ವಹಿಸಿತು. ದಾನಿಗಳ ನೋಂದಣಿ, ವ್ಯವಸ್ಥಿತ ನಿರ್ವಹಣೆ ಹಾಗೂ ಶಿಬಿರದ ವಿವಿಧ ಚಟುವಟಿಕೆಗಳಲ್ಲಿ ಸ್ವಯಂಸೇವಕರು ಉತ್ಸಾಹದಿಂದ ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಅವರ ನಿಸ್ವಾರ್ಥ ಸೇವೆ ಮತ್ತು ತಂಡದ ಕಾರ್ಯಕ್ಷಮತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ವಿಖಾಯ ಯುಎಇ ಚೇರ್ಮ್ಯಾನ್ ಅನ್ವರ್ ಮನಿಲಾ ಅವರು ಸ್ವಾಗತ ಭಾಷಣ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಅಝರ್ ಹಂಡೇಲ್ ನಿರ್ವಹಿಸಿದರು. ನಿಜಾಮ್ ತೊಡಾರ್ ವಂದನಾರ್ಪಣೆ ಸಲ್ಲಿಸಿದರು.

Hot this week

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್​​ರನ್ನು ಗೌರವಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗುವಂತೆ, ಮಂಗಳೂರಿನ ಸಾಹಸಿ ಸೋಲೋ ವಿಶ್ವ...

ಕನ್ನಡ ಸಂಘ ಬಹರೈನ್‌ಗೆ ಪ್ರತಿಷ್ಠಿತ “ನವ ಕರ್ನಾಟಕ ರತ್ನ” ಪ್ರಶಸ್ತಿ

ಬೆಂಗಳೂರು: ಕನ್ನಡ ಭಾಷೆ, ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರ...

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ...

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

Related Articles

Popular Categories