ಕುವೈತ್: ಡಿಕೆಎಸ್‌ಸಿ ಇದರ ಕುವೈತ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಾಲ್ಮಿಯ ಸುನ್ನಿ ಸೆಂಟರ್ ನಲ್ಲಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಯೂಸುಫ್ ಅಬ್ಬಾಸ್ ಬಾರೂದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗೌರವಾಧ್ಯಕ್ಷ ಶಫೀಕ್ ಅಹ್ಸನಿ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಡಿಕೆಎಸ್‌ಸಿ ಕೇಂದ್ರ ಸಮಿತಿ ವೀಕ್ಷಕರಾಗಿ ಆಗಮಿಸಿದ್ದ, ಡಿಕೆಎಸ್‌ಸಿ ವಿಷನ್-30 ಇದರ ಚೇರ್ಮನ್ ಹಾತಿಂ ಹಾಜಿ ಕೂಳೂರು ಉದ್ಘಾಟಿಸಿದರು. ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡನೆ ಬಳಿಕ ಸಭೆಯ ಅಂಗೀಕಾರ ಪಡೆಯಲಾಯಿತು.







ಡಿಕೆಎಸ್‌ಸಿ ಕುವೈತ್ ಇದರ ರಾಯಭಾರಿಯಾಗಿ ಆಗಮಿಸಿದ್ದ ಅಝೀಝ್ ಮೂಳೂರು ನೇತೃತ್ವದಲ್ಲಿ ಸಮಿತಿ ಬರ್ಕಾಸ್ತು ಗೊಳಿಸಿ ಹೊಸ ಸಮಿತಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಸಭೆಯ ಒಮ್ಮತದ ಅಭಿಪ್ರಾಯದಂತೆ 5ನೇ ಬಾರಿಗೆ ಯೂಸುಫ್ ಅಬ್ಬಾಸ್ ಬಾರುದ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಲಿಯಾಕತ್ ಗಂಗಾವಳಿ ಹಾಗೂ ಕೋಶಾಧಿಕಾರಿಯಾಗಿ ಇಮ್ತಿಯಾಝ್ ಸೂರಿಂಜೆ ಅವರನ್ನು ಆರಿಸಲಾಯಿತು.
15 ಮಂದಿ ಕಾರ್ಯಕಾರಿ ಸಮಿತಿಯನ್ನು ಒಳಗೊಂಡ ನೂತನ ಸಮಿತಿಯನ್ನು ಈ ವೇಳೆ ರಚಿಸಲಾಯಿತು. ಡಿಕೆಎಸ್‌ಸಿ ಸಂಸ್ಥೆಯ ಪರಿಚಯ ಮಾಡುವ ವಿಡಿಯೋವನ್ನು ಪ್ರದರ್ಶನ ಮಾಡಲಾಯಿತು.
ಅತಿಥಿಗಳನ್ನು ಸನ್ಮಾನಿಸಿ, ಕೇಂದ್ರ ಸಮಿತಿಯ ಕಳೆದ ವರ್ಷದ ಪ್ರಮುಖ ಯೋಜನೆಗಳನ್ನು ಸಭೆಗೆ ತಿಳಿಸಲಾಯಿತು. ಕುವೈತ್ ನಲ್ಲಿರುವ ಪ್ರಮುಖ ಸಂಘಟನೆಯ ನೇತಾರರ ಅಭಿನಂದನಾ ಭಾಷಣ ಮುಗಿದ ಬಳಿಕ ಗೌರವಾಧ್ಯಕ್ಷ ಅಬ್ದುರೆಹಮಾನ್ ಸಖಾಫಿ ದುಆ ನೆರವೇರಿಸಿದರು. ಶಫೀಕ್ ಅಹ್ಸನಿ ಸ್ವಾಗತಿಸಿ ಲಿಯಾಕತ್ ಗಂಗಾವಳಿ ವಂದಿಸಿದರು. ಕಾರ್ಯಕ್ರಮವನ್ನು ಹೈದರ್ ಉಚ್ಚಿಲ ನಿರೂಪಿಸಿದರು.