ಕುವೈತ್ಡಿಕೆಎಸ್‌ಸಿ ಕುವೈತ್; 5ನೇ ಬಾರಿಗೆ ಯೂಸುಫ್ ಅಬ್ಬಾಸ್ ಬಾರುದ್...

ಡಿಕೆಎಸ್‌ಸಿ ಕುವೈತ್; 5ನೇ ಬಾರಿಗೆ ಯೂಸುಫ್ ಅಬ್ಬಾಸ್ ಬಾರುದ್ ಅಧ್ಯಕ್ಷರಾಗಿ ಪುನರಾಯ್ಕೆ: ಪ್ರ.ಕಾರ್ಯದರ್ಶಿಯಾಗಿ ಲಿಯಾಕತ್, ಕೋಶಾಧಿಕಾರಿಯಾಗಿ ಇಮ್ತಿಯಾಝ್

ಕುವೈತ್: ಡಿಕೆಎಸ್‌ಸಿ ಇದರ ಕುವೈತ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಾಲ್ಮಿಯ ಸುನ್ನಿ ಸೆಂಟರ್ ನಲ್ಲಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಯೂಸುಫ್ ಅಬ್ಬಾಸ್ ಬಾರೂದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗೌರವಾಧ್ಯಕ್ಷ ಶಫೀಕ್ ಅಹ್ಸನಿ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಡಿಕೆಎಸ್‌ಸಿ ಕೇಂದ್ರ ಸಮಿತಿ ವೀಕ್ಷಕರಾಗಿ ಆಗಮಿಸಿದ್ದ, ಡಿಕೆಎಸ್‌ಸಿ ವಿಷನ್-30 ಇದರ ಚೇರ್ಮನ್ ಹಾತಿಂ ಹಾಜಿ ಕೂಳೂರು ಉದ್ಘಾಟಿಸಿದರು. ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡನೆ ಬಳಿಕ ಸಭೆಯ ಅಂಗೀಕಾರ ಪಡೆಯಲಾಯಿತು.

ಡಿಕೆಎಸ್‌ಸಿ ಕುವೈತ್ ಇದರ ರಾಯಭಾರಿಯಾಗಿ ಆಗಮಿಸಿದ್ದ ಅಝೀಝ್ ಮೂಳೂರು ನೇತೃತ್ವದಲ್ಲಿ ಸಮಿತಿ ಬರ್ಕಾಸ್ತು ಗೊಳಿಸಿ ಹೊಸ ಸಮಿತಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಸಭೆಯ ಒಮ್ಮತದ ಅಭಿಪ್ರಾಯದಂತೆ 5ನೇ ಬಾರಿಗೆ ಯೂಸುಫ್ ಅಬ್ಬಾಸ್ ಬಾರುದ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಲಿಯಾಕತ್ ಗಂಗಾವಳಿ ಹಾಗೂ ಕೋಶಾಧಿಕಾರಿಯಾಗಿ ಇಮ್ತಿಯಾಝ್ ಸೂರಿಂಜೆ ಅವರನ್ನು ಆರಿಸಲಾಯಿತು.

15 ಮಂದಿ ಕಾರ್ಯಕಾರಿ ಸಮಿತಿಯನ್ನು ಒಳಗೊಂಡ ನೂತನ ಸಮಿತಿಯನ್ನು ಈ ವೇಳೆ ರಚಿಸಲಾಯಿತು. ಡಿಕೆಎಸ್‌ಸಿ ಸಂಸ್ಥೆಯ ಪರಿಚಯ ಮಾಡುವ ವಿಡಿಯೋವನ್ನು ಪ್ರದರ್ಶನ ಮಾಡಲಾಯಿತು.

ಅತಿಥಿಗಳನ್ನು ಸನ್ಮಾನಿಸಿ, ಕೇಂದ್ರ ಸಮಿತಿಯ ಕಳೆದ ವರ್ಷದ ಪ್ರಮುಖ ಯೋಜನೆಗಳನ್ನು ಸಭೆಗೆ ತಿಳಿಸಲಾಯಿತು. ಕುವೈತ್ ನಲ್ಲಿರುವ ಪ್ರಮುಖ ಸಂಘಟನೆಯ ನೇತಾರರ ಅಭಿನಂದನಾ ಭಾಷಣ ಮುಗಿದ ಬಳಿಕ ಗೌರವಾಧ್ಯಕ್ಷ ಅಬ್ದುರೆಹಮಾನ್ ಸಖಾಫಿ ದುಆ ನೆರವೇರಿಸಿದರು. ಶಫೀಕ್ ಅಹ್ಸನಿ ಸ್ವಾಗತಿಸಿ ಲಿಯಾಕತ್ ಗಂಗಾವಳಿ ವಂದಿಸಿದರು. ಕಾರ್ಯಕ್ರಮವನ್ನು ಹೈದರ್ ಉಚ್ಚಿಲ ನಿರೂಪಿಸಿದರು.

Hot this week

ಸೋಲೋ ವಿಶ್ವ ಮೋಟಾರ್‌ಸೈಕಲ್ ಯಾತ್ರಿಕ ಗೇಬ್ರಿಯಲ್ ಶರತ್​​ರನ್ನು ಗೌರವಿಸಿದ ಕರ್ನಾಟಕ ಸಂಘ ಖತರ್

ದೋಹಾ: ಭಾರತೀಯ ಸಮುದಾಯಕ್ಕೆ ಹೆಮ್ಮೆಯ ಕ್ಷಣವಾಗುವಂತೆ, ಮಂಗಳೂರಿನ ಸಾಹಸಿ ಸೋಲೋ ವಿಶ್ವ...

ಕನ್ನಡ ಸಂಘ ಬಹರೈನ್‌ಗೆ ಪ್ರತಿಷ್ಠಿತ “ನವ ಕರ್ನಾಟಕ ರತ್ನ” ಪ್ರಶಸ್ತಿ

ಬೆಂಗಳೂರು: ಕನ್ನಡ ಭಾಷೆ, ನಾಡು-ನುಡಿ, ಕಲೆ, ಸಂಸ್ಕೃತಿ ಹಾಗೂ ಹೊರನಾಡಿನಲ್ಲಿ ಕನ್ನಡಿಗರ...

ದುಬೈಯಲ್ಲಿ ದಾಸವಾಣಿಯ ಸೊಬಗನ್ನು ಸಾರಿದ 27ನೇ ಹರಿನಾಮ ಸಂಕೀರ್ತನೆ

ದುಬೈ: ಕಳೆದ ನಾಲ್ಕು ದಶಕಗಳಿಂದ ದುಬೈಯಲ್ಲಿ ನೆಲೆಸಿದ್ದು, ಆಸಕ್ತರಿಗೆ ಕರ್ನಾಟಕ ಶಾಸ್ತ್ರೀಯ...

ಬಹರೈನ್‌; ಅ.9ರಂದು ಶ್ರೀ ನಾರಾಯಣ ಗುರು ಜಯಂತಿ ಅಂಗವಾಗಿ ‘Tribute to Bahrain’ ವಿಶೇಷ ಕಾರ್ಯಕ್ರಮ

ಮನಾಮಾ: ಬದುಕನ್ನು ಕಟ್ಟಿಕೊಳ್ಳಲು, ಕನಸುಗಳನ್ನು ನನಸಾಗಿಸಿಕೊಳ್ಳಲು ಹಾಗೂ ಭವಿಷ್ಯಕ್ಕೆ ಹೊಸ ದಿಕ್ಕು...

‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ 2026’: ಅದ್ಧೂರಿ ಯಕ್ಷಗಾನ ಪ್ರದರ್ಶನ

ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಆಯೋಜಿಸಲಾದ “ಯಕ್ಷ ವೈಭವ 2026...

Related Articles

Popular Categories