ಚೋಕಂಡಳ್ಳಿ ಅನಿವಾಸಿ ಒಕ್ಕೂಟ ಯುಎಇ ಸಮಿತಿಯ ವತಿಯಿಂದ ಗ್ರ್ಯಾಂಡ್ ಇಫ್ತಾರ್ ಕುಟುಂಬ ಸಂಗಮ – 2025 ಶನಿವಾರ ದುಬೈಯ ಮಿಲ್ಲೇನಿಯಮ್ ಹೋಟೆಲ್’ನಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಮಹತ್ವದ ಸಂದರ್ಭದಲ್ಲಿ ಸಮಿತಿಯ 2025-2027 ಅವಧಿಗೆ ಹೊಸ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 35 ಸದಸ್ಯರು ಭಾಗವಹಿಸಿದ್ದರು.


ಹೊಸ ಸಮಿತಿಯ ಪದಾಧಿಕಾರಿಗಳು (2025-2027)
• ಅಧ್ಯಕ್ಷರು: ಜುಬೇರ್
• ಪ್ರಧಾನ ಕಾರ್ಯದರ್ಶಿ: ಅಶ್ಫಾಕ್ ಅಲಿ
• ಕೋಶಾಧಿಕಾರಿಗಳು: ಬಶೀರ್ ಮತ್ತು ನಿಸಾರ್
• ಉಪಾಧ್ಯಕ್ಷರು: ಝಿಯಾ ಡಿ ಮತ್ತು ಫಿರೋಜ್ ಕೆ
• ಸಹ ಕಾರ್ಯದರ್ಶಿಗಳು: ನಿಯಾಜ್ ಮತ್ತು ಇಮ್ರಾನ್
• ಕ್ರೀಡಾ ಸಂಯೋಜಕರು: ಮಿದ್ಲಾಜ್ ಮತ್ತು ಮುನವ್ವರ್
• ಮಾಧ್ಯಮ ಸಂಯೋಜಕರು: ಶಾಹಜಹಾನ್ ಮತ್ತು ಇಶಾಕ್
ಆಡಳಿತ ಮಂಡಳಿ ಸಲಹೆಗಾರರು:
• ಅಲ್ತಾಫ್
• ಶುಹೈಬ್
• ಸಿರಾಜ್
• ಉಮ್ಮರ್
• ಇರ್ಶಾದ್