ಯುಎಇಜನವರಿ 25ರಂದು ಶಾರ್ಜಾದಲ್ಲಿ 'ಕೆಸಿಎಫ್'ನಿಂದ 'ಮಹಬ್ಬಾ ಫ್ಯಾಮಿಲಿ ಫೆಸ್ಟ್-2026'

ಜನವರಿ 25ರಂದು ಶಾರ್ಜಾದಲ್ಲಿ ‘ಕೆಸಿಎಫ್’ನಿಂದ ‘ಮಹಬ್ಬಾ ಫ್ಯಾಮಿಲಿ ಫೆಸ್ಟ್-2026’

ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಯುಎಇಯ ಆಶ್ರಯದಲ್ಲಿ ‘ಮಹಬ್ಬಾ ಫ್ಯಾಮಿಲಿ ಫೆಸ್ಟ್ 2026’ ಜನವರಿ 25ರ ರವಿವಾರದಂದು ಶಾರ್ಜಾದ ಅಲ್ ಬತಾಯೆ ಗಾರ್ಡೆನ್ ನಲ್ಲಿ ನಡೆಯಲಿದೆ.

ಬೆಳಗ್ಗೆ 8ರಿಂದ ಸಂಜೆ 8ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಯುಎಇಯ ವಿವಿಧ ಎಮಿರೇಟುಗಳಿಂದ ಕನ್ನಡಿಗ ಕುಟುಂಬಗಳು ಭಾಗವಹಿಸಲಿವೆ ಎಂದು ಕೆಸಿಎಫ್ ಯುಎಇ ಅಧ್ಯಕ್ಷ ಕೇದುಂಬಾಡಿ ಇಬ್ರಾಹಿಂ ಸಖಾಫಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ಕುಟುಂಬಗಳನ್ನು ಒಗ್ಗೂಡಿಸಿ ಸಾಮಾಜಿಕ ಬಾಂಧವ್ಯವನ್ನು ಬಲಪಡಿಸುವುದೇ ಈ ಫೆಸ್ಟ್‌ನ ಮುಖ್ಯ ಉದ್ದೇಶವೆಂದರು. ಮಕ್ಕಳ ಗೀತಗಾನ, ಮಕ್ಕಳ ಆಟೋಪಾಟಗಳು, ಮಹಿಳೆಯರ ಅಡುಗೆ ಸ್ಪರ್ಧೆ, ವಿವಿಧ ವಯೋವರ್ಗಗಳಿಗೆ ಮನರಂಜನಾ ಹಾಗೂ ಕ್ರೀಡಾ ಕಾರ್ಯಕ್ರಮಗಳು ಫೆಸ್ಟ್‌ನ ಪ್ರಮುಖ ಆಕರ್ಷಣೆಯಾಗಿರಲಿವೆ ಎಂದರು.

ಸುಮಾರು 500ಕ್ಕೂ ಅಧಿಕ ಕುಟುಂಬಗಳು ಹಾಗೂ 3,000ಕ್ಕೂ ಹೆಚ್ಚು ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅನೇಕ ಸಮಾಜಮುಖಿ ನಾಯಕರು ಮತ್ತು ಗಣ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಎಲ್ಲಾ ಎಮಿರೇಟುಗಳಿಂದ ಕುಟುಂಬಗಳು ಸುಲಭವಾಗಿ ಭಾಗವಹಿಸಲು ಝೋನಲ್ ತಂಡಗಳ ಮೂಲಕ ಬಸ್ ಸೌಲಭ್ಯ ಕಲ್ಪಿಸಲಾಗಿದ್ದು, ಕಾರ್ಯಕ್ರಮ ಸ್ಥಳದ ಸಮೀಪ ಸಾಕಷ್ಟು ಪಾರ್ಕಿಂಗ್ ಸೌಲಭ್ಯವೂ ಲಭ್ಯವಿದೆ ಎಂದು ಮಾಹಿತಿ ನೀಡಿದರು.

ಕೆಸಿಎಫ್ ಯುಎಇ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ (ಬ್ರೈಟ್ ಮಾರ್ಬಲ್) ಮಾತನಾಡಿ, ಯುಎಇ ಸರ್ಕಾರವು 2026ನ್ನು ‘ಕುಟುಂಬ ವರ್ಷ’ವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ, ಕುಟುಂಬದ ಏಕತೆ ಹಾಗೂ ಬೆಳವಣಿಗೆಯನ್ನು ಉದ್ದೇಶಿಸಿದ ಈ ಕಾರ್ಯಕ್ರಮಕ್ಕೆ ವಿಶೇಷ ಮಹತ್ವವಿದೆ ಎಂದು ಹೇಳಿದರು. ಎಲ್ಲ ಕರ್ನಾಟಕ ಕುಟುಂಬಗಳು ಈ ಫೆಸ್ಟ್‌ನಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.

ಮಹಬ್ಬಾ ಫ್ಯಾಮಿಲಿ ಫೆಸ್ಟ್ ಸ್ವಾಗತ ಸಮಿತಿ ಅಧ್ಯಕ್ಷ ಸಿದ್ದೀಖ್ ಪಾಣೆಮಂಗಳೂರು, ಸಂಚಾಲಕ ನವಾಝ್ ಕೊಟ್ಟೇಕಾರ್ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Hot this week

ಗಲ್ಫ್ ಸಂಘರ್ಷದ ನಡುವೆಯೂ ಪ್ರಯಾಣಿಕರಿಗೆ ‘ಓಯಸಿಸ್’ ಆಗಿರುವ ಒಮಾನ್!

ಮಸ್ಕತ್: ಇರಾನ್–ಅಮೇರಿಕ ಸಂಘರ್ಷದ ಪರಿಣಾಮವಾಗಿ ಮಧ್ಯಪ್ರಾಚ್ಯದ ವಾಯುಪ್ರದೇಶದಲ್ಲಿ ಅನಿಶ್ಚಿತತೆ ಉಂಟಾದ ಹಿನ್ನೆಲೆಯಲ್ಲಿ...

ಜರ್ಮನಿ; ರೈನ್ ಮೈನ್ ಕನ್ನಡ ಸಂಘದ ನೂತನ ಅಧ್ಯಕ್ಷರಾಗಿ ಲೋಕನಾಥ ರಾವ್ ಚೌಹಾಣ್ ಆಯ್ಕೆ

ಜರ್ಮನಿ: ರೈನ್ ಮೈನ್ ಕನ್ನಡ ಸಂಘದ ವಾರ್ಷಿಕ ಸಭೆಯು ಇತ್ತೀಚೆಗೆ ಜರ್ಮನಿಯ...

ಕೊಲ್ಲಿ ಯುದ್ಧ; ಗಲ್ಫ್ ರಾಷ್ಟ್ರಗಳಲ್ಲಿ ಅಗತ್ಯವಸ್ತುಗಳ ಮೇಲೆ ಬೀರುತ್ತಿದೆ ಪರಿಣಾಮ!

ಸೌದಿ ಅರೇಬಿಯಾ: ಅಮೇರಿಕ-ಇಸ್ರೇಲ್ ಹಾಗೂ ಇರಾನ್ ಮಧ್ಯೆ ನಡುಯುತ್ತಿರುವ ಸಂಘರ್ಷವು ಮುಂದುವರಿಯುತ್ತಿರುವುದರಿಂದ...

ಸೌದಿ: ಅಲ್ ಖಮರ್ ವೆಲ್ಫೇರ್ ಅಸೋಸಿಯೇಷನ್‌ನಿಂದ ಇಫ್ತಾರ್ ಕೂಟ

ಸೌದಿ ಅರೇಬಿಯಾ: ರಮಝಾನ್ ಪವಿತ್ರ ತಿಂಗಳ ಅಂಗವಾಗಿ ಅಲ್ ಖಮರ್ ವೆಲ್ಫೇರ್...

Related Articles

Popular Categories