ಯುಎಇಶಾರ್ಜಾ ರೋಲ್ಲಾದಲ್ಲಿ 'ಮ್ಯಾಕ್ಸ್‌ಕೇರ್ ಕ್ಲಿನಿಕ್ಸ್'ನ ಹೊಸ ಶಾಖೆ ಆರಂಭ;...

ಶಾರ್ಜಾ ರೋಲ್ಲಾದಲ್ಲಿ ‘ಮ್ಯಾಕ್ಸ್‌ಕೇರ್ ಕ್ಲಿನಿಕ್ಸ್’ನ ಹೊಸ ಶಾಖೆ ಆರಂಭ; ಕಡಿಮೆ ವೆಚ್ಚದ ಆರೋಗ್ಯ ಸೇವೆಗೆ ಹೆಚ್ಚಿನ ಪ್ರವೇಶ

ಶಾರ್ಜಾ: ಯುಎಇಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಾಥಮಿಕ ಆರೋಗ್ಯ ಸೇವಾ ಸಂಸ್ಥೆಗಳಲ್ಲೊಂದಾದ ಮ್ಯಾಕ್ಸ್‌ಕೇರ್ ಕ್ಲಿನಿಕ್ಸ್‌ನ ಹೊಸ ಶಾಖೆ ಶಾರ್ಜಾದ ರೊಲ್ಲಾದಲ್ಲಿ ರವಿವಾರ ಶುಭಾರಂಭಗೊಂಡಿದೆ.

ನಾಲ್ಕು ವರ್ಷಗಳ ಹಿಂದೆ ಸ್ಟಾರ್ಟ್‌ಅಪ್ ಆಗಿ ಆರಂಭವಾದ ಮ್ಯಾಕ್ಸ್‌ಕೇರ್, ಇಂದು ಯುಎಇಯಾದ್ಯಂತ ವಿವಿಧ ಸಮುದಾಯಗಳಿಗೆ ಪ್ರಾಥಮಿಕ ಆರೋಗ್ಯ ಸೇವೆ ನೀಡುತ್ತಿರುವ ಸಂಸ್ಥೆಯಾಗಿ ಬೆಳೆಯುತ್ತಿದೆ. ಕಡಿಮೆ ವೆಚ್ಚದ ಚಿಕಿತ್ಸಾ ಮಾದರಿಯಿಂದ “ಬಜೆಟ್ ಕ್ಲಿನಿಕ್” ಎಂಬ ಹೆಸರಿನಿಂದ ಜನಪ್ರಿಯವಾಗಿದೆ.

ಹೊಸ ಶಾಖೆಯಲ್ಲಿ ಜನರಲ್ ಮೆಡಿಸಿನ್, ಗೈನಕಾಲಜಿ, ದಂತ ಚಿಕಿತ್ಸಾ ಸೇವೆಗಳು ಹಾಗೂ ಲ್ಯಾಬೊರೇಟರಿ ಸೌಲಭ್ಯಗಳು ಲಭ್ಯವಿವೆ. ಜೊತೆಗೆ ‘ಮ್ಯಾಕ್ಸ್‌ಕೇರ್ ಪಾಯಿಂಟ್’ ಫಾರ್ಮಸಿಯನ್ನೂ ಆರಂಭಿಸಲಾಗಿದ್ದು, ರೋಗಿಗಳಿಗೆ ಔಷಧಿ ಮತ್ತು ಆರೋಗ್ಯ ಉತ್ಪನ್ನಗಳು ಒಂದೇ ಸ್ಥಳದಲ್ಲಿ ದೊರೆಯಲಿವೆ. ಅನುಭವ ಹೊಂದಿದ ವೈದ್ಯರು ಹಾಗೂ ಸಿಬ್ಬಂದಿ ಸೇವೆ ನೀಡಲಿದ್ದಾರೆ. ಎಲ್ಲ ವರ್ಗದ ಜನರಿಗೆ ಗುಣಮಟ್ಟದ ಹಾಗೂ ಕೈಗೆಟುಕುವ ಆರೋಗ್ಯ ಸೇವೆ ಒದಗಿಸುವುದು ಸಂಸ್ಥೆಯ ಧ್ಯೇಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಉದ್ಘಾಟನಾ ಸಮಾರಂಭದಲ್ಲಿ HE ಶೇಖ್ ಅಹ್ಮದ್ ಸಾಕರ್ ಅಲ್ ಕಾಸಿಮಿ, ಸಯ್ಯದ್ ನಿಸಾರ್ (ದುಬೈ ವಾರ್ತೆ), ಹಿದಾಯತ್ ಅಡ್ಡೂರು (ಅಧ್ಯಕ್ಷರು, BCCI-UAE), ಸಯ್ಯದ್ ಹೈದ್ರೋಸ್ ತಂಙಳ್ (ನಿರ್ದೇಶಕ,ನಿಶ್ಕಾ ಜ್ಯುವೆಲರಿ), ನಿಜಾರ್ ಹಮ್ಝಾ ( ವ್ಯವಸ್ಥಾಪಕ ನಿರ್ದೇಶಕ, ಯಾಸ್‌ಮೆಡ್), ಜಮಾಲ್ ಬೈತಾನ್ (MD,ಬೈತಾನ್ ಗ್ರೂಪ್), ಡಾ. ಹುಸೈನ್ (ವ್ಯವಸ್ಥಾಪಕ ನಿರ್ದೇಶಕ, ಇಲಾಜ್ ಮೆಡಿಕಲ್ ಸೆಂಟರ್), ಡಾ. ಸಲ್ಮಾನ್ (ವ್ಯವಸ್ಥಾಪಕ ನಿರ್ದೇಶಕ, ಬರಾಕಾ ಕ್ಲಿನಿಕ್), ಮೊಹಮ್ಮದ್ ಶಫೀಕ್ (MD, ಮಿರಾಕ್ಯೂರ್ ಕ್ಲಿನಿಕ್), ಬದ್ರುನಿಸಾ ಮೊಹಮ್ಮದ್ (ನಿರ್ದೇಶಕಿ, ಮ್ಯಾಕ್ಸ್‌ಕೇರ್), ಫಝಲ್ ವಿ.ಕೆ (ಮ್ಯಾನೇಜರ್, ಮ್ಯಾಕ್ಸ್‌ಕೇರ್) ಸೇರಿದಂತೆ ಇತರ ಆಹ್ವಾನಿತ ಅತಿಥಿಗಳು ಮತ್ತು ಸಮುದಾಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಬಶೀರ್ ಕಿನ್ನಿಂಗರ್, ಶಾರ್ಜಾ ಶಾಖೆಯನ್ನು ಸ್ಥಳೀಯ ಸಮುದಾಯದ ಹೆಚ್ಚುತ್ತಿರುವ ಬೇಡಿಕೆಯ ಆಧಾರದ ಮೇಲೆ ಆರಂಭಿಸಲಾಗಿದೆ. ಸಾರ್ವಜನಿಕರ ಬಲವಾದ ಬೇಡಿಕೆಯಿಂದಲೇ ನಾವು ಶಾರ್ಜಾದಲ್ಲಿ ಈ ಕ್ಲಿನಿಕ್ ಆರಂಭಿಸಿದ್ದೇವೆ. ಎಲ್ಲಾ ವರ್ಗದ ಜನರಿಗೆ ವಿಶ್ವಾಸಾರ್ಹ ಮತ್ತು ಕೈಗೆಟುಕುವ ಆರೋಗ್ಯ ಸೇವೆ ನೀಡುವುದು ಮ್ಯಾಕ್ಸ್‌ಕೇರ್‌ನ ಬದ್ಧತೆ. ಇಲ್ಲಿ ವೈದ್ಯರ ಕನ್ಸಲ್ಟೇಶನ್ ಶುಲ್ಕ AED 25ರಿಂದ ಆರಂಭವಾಗುತ್ತದೆ.” ಎಂದರು.

ಉದ್ಘಾಟನೆಯ ಅಂಗವಾಗಿ, ವಿಸಿಟ್ ವೀಸಾದ ಮೇಲೆ ಯುಎಇಗೆ ಬರುವವರಿಗೆ ಯಾವುದೇ ವೈದ್ಯರನ್ನು AED 1ಕ್ಕೆ ಭೇಟಿ ಮಾಡುವ ವಿಶೇಷ ಯೋಜನೆಯನ್ನು ಘೋಷಿಸಲಾಗಿದೆ.

ಹೊಸ ಕ್ಲಿನಿಕ್ ಹಾಗೂ ಪರಿಚಯಾತ್ಮಕ ವಿಶೇಷ ಆಫರ್‌ಗಳ ಪ್ರಯೋಜನವನ್ನು ಪಡೆಯಲು ಸಾರ್ವಜನಿಕರನ್ನು ಮ್ಯಾಕ್ಸ್‌ಕೇರ್ ಕ್ಲಿನಿಕ್ಸ್ ಆಹ್ವಾನಿಸಿದೆ. ಕಡಿಮೆ ವೆಚ್ಚ, ಸುಲಭ ಪ್ರವೇಶ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡುವುದು ಮ್ಯಾಕ್ಸ್‌ಕೇರ್‌ನ ಬದ್ಧತೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

Hot this week

ದುಬೈ; ಫೆಬ್ರವರಿ 28ರಂದು ‘ಬ್ಯಾರೀಸ್ ಕಲ್ಚರಲ್ ಫೋರಮ್( BCF)’ನಿಂದ ‘ಇಫ್ತಾರ್ ಮೀಟ್ 2026’

ದುಬೈ: ಕಳೆದ 28 ವರ್ಷಗಳಿಂದ ಸಾಮುದಾಯಿಕ ಸೇವಾ ಕಾರ್ಯದಲ್ಲಿ ತೊಡಗಿ ಕೊಂಡಿರುವ...

ಯುಎಇ ಕುಲಾಲ ಫ್ಯಾಮಿಲಿಯಿಂದ ಶ್ರೀಸತ್ಯನಾರಾಯಣ ಪೂಜೆ

ದುಬೈ: ಇಲ್ಲಿನ ಗ್ಲೆಂಡೆಲ್ ಅಂತಾರಾಷ್ಟ್ರೀಯ ಶಾಲಾ ಸಭಾಂಗಣದಲ್ಲಿ ರವಿವಾರ ಸುಬ್ರಹ್ಮಣ್ಯ ಭಟ್...

ಮಸ್ಕತ್ ನಲ್ಲಿ ತುಳು ಚಿತ್ರರಸಿಕರ ಮನಗೆದ್ದ ‘ಬೆಲ್ಲದ ಗಟ್ಟಿ’ ತುಳು ಸಿನೆಮಾ!

ಒಮಾನ್: ಕೌಟುಂಬಿಕ, ಸಾಮಾಜಿಕ, ಕುತೂಹಲ ಮೂಡಿಸುವ ಥ್ರಿಲ್ಲರ್ ಅಂಶಗಳನ್ನೊಳಗೊಂಡ ತುಳು ಚಲನಚಿತ್ರ...

ಅಟ್ಲಾಂಟ ಕನ್ನಡಿಗರಿಂದ ಸಂಕ್ರಾಂತಿ ಹಬ್ಬದ ಸಂಭ್ರಮಾಚರಣೆ

ಕೆ.ಆರ್. ಶ್ರೀನಾಥ್, ಅಟ್ಲಾಂಟ ಅಟ್ಲಾಂಟ: ಶನಿವಾರ ಅಟ್ಲಾಂಟದ ನೃಪತುಂಗ ಕನ್ನಡ ಕೂಟದ ಸದಸ್ಯರು...

KCWA celebrates Konkani Diwas 2026, Vodle Fest in grandeur

Kuwait: The Konkani-speaking community in Kuwait came together in...

Related Articles

Popular Categories