ಯುಎಸ್‌ಎನ್ಯೂಯಾರ್ಕ್; ಆಲ್ಬನಿ ಕನ್ನಡಿಗರಿಂದ ಮಸಾಲ ದೋಸೆ ಬ್ರಂಚ್: ಹಿಂದೂ...

ನ್ಯೂಯಾರ್ಕ್; ಆಲ್ಬನಿ ಕನ್ನಡಿಗರಿಂದ ಮಸಾಲ ದೋಸೆ ಬ್ರಂಚ್: ಹಿಂದೂ ದೇವಾಲಯಕ್ಕೆ ಧನ ಸಹಾಯ

ನ್ಯೂಯಾರ್ಕ್ ರಾಜ್ಯದ ರಾಜಧಾನಿ ಅಲ್ಬನಿಯಲ್ಲಿರುವ ಕನ್ನಡಿಗರು, ಇತ್ತೀಚೆಗೆ ಇಲ್ಲಿರುವ ಹಿಂದೂ ದೇವಸ್ಥಾನದಲ್ಲಿ ವಿಶೇಷ ಮಸಾಲ ದೋಸೆಯ ಅಡಿಗೆಯನ್ನು ಮಾಡಿ ಅದರಿಂದ ಬಂದ ಲಾಭವನ್ನೆಲ್ಲ ದೇವಸ್ಥಾನಕ್ಕೆ ದಾನ ಮಾಡಿದರು.

ಬಿಸಿ ಬಿಸಿ ಮಸಾಲ ದೋಸೆ, ಚಟ್ನಿ, ಆಲೂಗಡ್ಡೆ ಪಲ್ಯ, ಕೇಸರಿ ಬಾತು, ಮೊಸರನ್ನ, ಕೋಸಂಬರಿ, ಮಸಾಲ ಚಹಾ ಹೀಗೆ ಹಲವಾರು ರುಚಿ ರುಚಿಯಾದ ಖಾದ್ಯಗಳನ್ನು ತಯಾರಿಸಿದ್ದರು. ಇದರ ನೇತೃತ್ವವನ್ನು ಆಲ್ಬನಿಯಲ್ಲಿ ಅನೇಕ ದಶಕಗಳಿಂದ ನೆಲೆಸಿರುವ ಹಿರಿಯರಾದ ಮೈತಿಲಿ ದಿವಾಕರ್ ವಹಿಸಿದ್ದರು.

ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಜನರು ರುಚಿಯಾದ ಬಿಸಿ-ದೋಸೆಯನ್ನು ಸವಿದರು. ತಮಿಳು, ತೆಲುಗು, ಗುಜರಾತಿ ಹೀಗೆ ಅನೇಕ ಸಂಘಗಳು ಹಿಂದೂ ದೇವಸ್ಥಾನದಲ್ಲಿ ಅಡುಗೆಯನ್ನು ಮಾಡುತ್ತವೆ. ಆದರೆ ಕನ್ನಡ ಸಂಘದ ಸ್ಪೆಷಲ್ ಮಸಾಲಾ ದೋಸೆ ತುಂಬಾ ಜನಪ್ರಿಯವಾಗಿದೆ. ಬೆಳಗ್ಗೆ 6 ಗಂಟೆಗೆ ಎದ್ದು ಬಂದು ನೂರಾರು ಜನರಿಗೆ ಅಡುಗೆ ಮಾಡಿದ ಸ್ವಯಂಸೇವಕರಿಗೆ ಮತ್ತು ಕನ್ನಡ ಯೂಥ್ ಕ್ಲಬ್ ನ ಮಕ್ಕಳಿಗೆ ಆಲ್ಬನಿ ಕನ್ನಡ ಸಂಘದ ಅಧ್ಯಕ್ಷೆ ಜ್ಯೋತಿ ಮುರುಂಡಿಯವರು ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್

Hot this week

ಬೆಂಗಳೂರು; ಕನ್ನಡಿಗರ ಕೂಟ, ದುಬೈಯಿಂದ ಪದ್ಮಶ್ರೀ ಭೀಮವ್ವ ದೊಡ್ಡಬಾಳಪ್ಪರಿಗೆ ಪ್ರತಿಷ್ಠಿತ ‘ಹುಟ್ಟೂರ ಸನ್ಮಾನ‌’ ಪ್ರದಾನ

ಬೆಂಗಳೂರು: ಕನ್ನಡಿಗರ ಕೂಟ, ದುಬೈ ವತಿಯಿಂದ ಬೆಂಗಳೂರಿನಲ್ಲಿ ನಡೆದ “ಹುಟ್ಟುೂರ ಸನ್ಮಾನ”...

ದುಬೈ; ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ ನಲ್ಲಿ ಓಣಂ ಹಬ್ಬ ಆಚರಣೆ

ದುಬೈ : ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಫಾರ್ಚೂನ್ ಗ್ರೂಪ್...

ಕನ್ನಡಿಗರ ಕೂಟ ದುಬೈ ವತಿಯಿಂದ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್‌ಗೆ ಸನ್ಮಾನ

ಬೆಂಗಳೂರು: ಕನ್ನಡಿಗರ ಕೂಟ, ದುಬೈ ತಂಡವು ಮಾಜಿ ಭಾರತೀಯ ಕ್ರಿಕೆಟಿಗ ಹಾಗೂ...

ಫ್ಲೋರಿಡಾ ತುಳು ಕೂಟದ 2ನೇ ವಾರ್ಷಿಕ ಪೊಟ್ಲಕ್ ಪಿಕ್ನಿಕ್ ಸಂಭ್ರಮ

ಅಮೇರಿಕದ ಫ್ಲೋರಿಡಾ ತುಳು ಕೂಟವು ಇತ್ತೀಚೆಗೆ ಕ್ಯಾಸೆಲ್‌ಬೆರ್ರಿ ಒರ್ಲಾಂಡೊದಲ್ಲಿ ತನ್ನ ಎರಡನೇ...

Related Articles

Popular Categories