ಯುಎಸ್‌ಎಅಮೇರಿಕದ ಪಿಜ್ಜಾ ಅಂಗಡಿಯಲ್ಲಿ ಇಲಿ ಪ್ರತ್ಯಕ್ಷ!

ಅಮೇರಿಕದ ಪಿಜ್ಜಾ ಅಂಗಡಿಯಲ್ಲಿ ಇಲಿ ಪ್ರತ್ಯಕ್ಷ!

ಆಲ್ಬನಿ, ನ್ಯೂಯಾರ್ಕ್: ಭಾರತದ ಹೋಟೆಲ್ ಅಥವಾ ಆಹಾರ ಮಳಿಗೆಯಲ್ಲಿ ಇಲಿ ಕಾಣಿಸಿಕೊಂಡರೆ, “ಇದೆಲ್ಲ ಭಾರತದಲ್ಲಿ ಮಾತ್ರ ಸಾಧ್ಯ!” ಎಂದು ಮೂಗು ಮುರಿಯುವವರು ಸಾಕಷ್ಟು ಜನ. ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯದ ವಿಷಯ ಬಂದಾಗ ಅಮೇರಿಕದಂತಹ ಅಭಿವೃದ್ಧಿ ಹೊಂದಿದ ದೇಶಗಳನ್ನು ಉದಾಹರಣೆಯಾಗಿ ನೀಡುವುದೂ ಸಾಮಾನ್ಯ.

ಆದರೆ ಈಗ ಅಮೇರಿಕದ ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿ ಸಮೀಪದ ಪ್ರಸಿದ್ಧ Crossgates Mallನಲ್ಲಿರುವ Sbarro Pizza ಮಳಿಗೆಯಲ್ಲಿ ಇಲಿ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಅಂದಹಾಗೆ, ಗಣೇಶ ಹಬ್ಬ ಭಾರತ ಸೇರಿದಂತೆ ವಿಶ್ವದ ಹಲವಾರು ದೇಶಗಳಲ್ಲಿ ಸಂಭ್ರಮದಿಂದ ನಡೆಯುತ್ತಿದೆ. ಗಣೇಶನ ವಾಹನವಾದ ಇಲಿ, ಗಣೇಶ ಹಬ್ಬದ ಪ್ರಯುಕ್ತ ಅಮೇರಿಕದ ಪಿಜ್ಜಾ ಅಂಗಡಿಗೂ ಒಂದು ಸುತ್ತು ಹಾಕಲು ಬಂದಿರಬಹುದೇನೋ! 😄

ಅಮೇರಿಕದಲ್ಲಿ ಆಹಾರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಕಟ್ಟುನಿಟ್ಟಿನ ನಿಯಮಗಳಿದ್ದರೂ ಇಂತಹ ಘಟನೆಗಳು ಅಲ್ಲಿಯೂ ಸಂಭವಿಸುತ್ತವೆ. ಒಂದು ಘಟನೆಯ ಆಧಾರದಲ್ಲಿ ಇಡೀ ದೇಶದ ಸ್ವಚ್ಛತೆಯನ್ನು ಅಳೆಯಲು ಸಾಧ್ಯವಿಲ್ಲ. ಅದು ಭಾರತವಾಗಲಿ, ಅಮೇರಿಕವಾಗಲಿ — ಸಮಸ್ಯೆಗಳು ಎಲ್ಲೆಡೆಯೂ ಇರಬಹುದು.

ಹೀಗಾಗಿ ಭಾರತದ ಯಾವುದಾದರೂ ಹೋಟೆಲ್‌ನಲ್ಲಿ ಇಲಿ ಕಂಡಾಗ, “ಇದು ಭಾರತದಲ್ಲಿ ಮಾತ್ರ!” ಎಂದು ಟೀಕಿಸುವ ಮುನ್ನ ಆಲ್ಬನಿಯ ಈ ಪಿಜ್ಜಾ ಅಂಗಡಿಯ ಇಲಿಯನ್ನೂ ಒಮ್ಮೆ ನೆನಪಿಸಿಕೊಳ್ಳಿ!

ಇಲಿಗೆ ಭಾರತವೂ ಒಂದೇ, ಅಮೇರಿಕವೂ ಒಂದೇ!

— ಬೆಂಕಿ ಬಸಣ್ಣ, ನ್ಯೂಯಾರ್ಕ್

Hot this week

KCWA holds Extra Ordinary General Body Meeting in Kuwait

Kuwait: The Kuwait Canara Welfare Association (KCWA) held its...

ನವೆಂಬರ್ 6ರಂದು ಕರ್ನಾಟಕ ಸಂಘ ಖತರ್‌ನ 71ನೇ ರಾಜ್ಯೋತ್ಸವ ‘ಕರುನಾಡ ವೈಭವ-2026’ 

ದೋಹಾ: ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ...

ದುಬೈ; ಯುಎಇ ಬಂಟ್ಸ್‌ನ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ ಸಂಪನ್ನ

ದುಬೈ : ಅರಬ್ ಸಂಯುಕ್ತ ಸಂಸ್ಥಾನದ ಜಾತಿ ಸಂಘಟನೆಗಳಲ್ಲಿ ಹಿರಿಯ ಸಂಘಟನೆಯಾದ...

ಜುಬೈಲ್; ‘AQWA 40-ಯಾರ್ಡ್ ಕ್ರಿಕೆಟ್ ಟೂರ್ನಮೆಂಟ್’: ದಿಲ್‌ಪಸಂದ್ ಮೂಳೂರು ಚಾಂಪಿಯನ್, HMC ಅದಮಾರ್ ರನ್ನರ್‌ಅಪ್

ಜುಬೈಲ್ (ಸೌದಿ ಅರೇಬಿಯಾ): ಮೂಳೂರಿನ ಅಲ್-ಖಮರ್ ವೆಲ್ಫೇರ್ ಅಸೋಸಿಯೇಷನ್ (AQWA KSA)...

ಅಮರ ಮಧುರ ಗೀತೆ: ನೆನಪಿನಂಗಳದಲ್ಲಿ ಮತ್ತೆ ಅರಳಲಿವೆ ಹಳೆಯ ಕನ್ನಡ ಹಾಡುಗಳು; ಅ.29ರಂದು ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ

ಮನಾಮ(ಬಹರೈನ್): ಕೆಲವು ಹಾಡುಗಳು ಕೇವಲ ಸಂಗೀತವಲ್ಲ; ಅವು ಬದುಕಿನ ಅಮೂಲ್ಯ ನೆನಪುಗಳು....

Related Articles

Popular Categories