ಬಹರೈನ್ಮುತ್ತುಗಳ ದ್ವೀಪದಲ್ಲಿ ಮತ್ತೆ ವಿಜೃಂಭಿಸಲಿರುವ ಕರಾವಳಿಯ ಗಂಡು ಕಲೆ:...

ಮುತ್ತುಗಳ ದ್ವೀಪದಲ್ಲಿ ಮತ್ತೆ ವಿಜೃಂಭಿಸಲಿರುವ ಕರಾವಳಿಯ ಗಂಡು ಕಲೆ: ಸೆ.25ರಂದು ‘ಕನ್ನಡ ಸಂಘ ಬಹರೈನ್’ನಿಂದ ‘ಯಕ್ಷ ವೈಭವ -2026’

ಬಹರೈನ್: ಯಕ್ಷಗಾನಕ್ಕೂ ಹಾಗು ಬಹರೈನ್ ಕನ್ನಡ ಸಂಘಕ್ಕೂ ಸುಮಾರು ನಾಲ್ಕೂವರೆ ದಶಕಗಳ ಅವಿನಾಭಾವ ಸಂಭಂದವಿದೆ . ಪ್ರಪ್ರಥಮವಾಗಿ ಯಕ್ಷಗಾನವನ್ನು ಸೀಮೋಲಂಘನ ಮಾಡಿಸಿದ ಹೆಗ್ಗಳಿಕೆಯ ಜೊತೆಗೆ ಸಂಪೂರ್ಣ ಹಿಮ್ಮೇಳ ಮುಮ್ಮೇಳ ವನ್ನು ಹೊಂದಿರುವ ಕೀರ್ತಿ ಕೂಡ ಇಲ್ಲಿನ ಕನ್ನಡ ಸಂಘಕ್ಕೆ ಸಲ್ಲುತ್ತದೆ. ಹಾಗಾಗಿ ದ್ವೀಪ ರಾಷ್ಟ್ರದಲ್ಲಿ ಆಗಾಗ್ಗೆ ಅಲ್ಲಲ್ಲಿ ಲಯಬದ್ಧವಾದ ಚೆಂಡೆಯ ಸದ್ದು ಕೇಳಿಸುತ್ತಲೇ ಇರುತ್ತದೆ. ದ್ವೀಪ ರಾಷ್ಟ್ರ ಬಹರೈನ್ ನಲ್ಲಿ ಮತ್ತೆ ಕರಾಳಿಯ ಗಂಡು ಕಲೆ ಯಕ್ಷಗಾನ ವಿಜೃಂಭಿಸಲಿದ್ದು ಸೆಪ್ಟೆಂಬರ್ 25ರ ಶುಕ್ರವಾರದಂದು ಸಂಜೆ ಕನ್ನಡ ಸಂಘದ ಸಾಂಸ್ಕ್ರತಿಕ ಸಭಾಂಗಣದಲ್ಲಿ ವಾರ್ಷಿಕ ಯಕ್ಷಗಾನ ಕಾರ್ಯಕ್ರಮವಾದ “ಯಕ್ಷ ವೈಭವ- 2026″ಅನ್ನು ಆಯೋಜಿಸಿದ್ದು ,ಈ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಯಕ್ಷಕಲಾವಿದರುಗಳು ಹಾಗು ಸಂಘದ ಯಕ್ಷಕಲಾವಿದರುಗಳ ಸಮಾಗಮದೊಂದಿಗೆ “ಲಕ್ಷ್ಮೀ ಸ್ವಯಂವರ -ವಾಲೀ ಮೋಕ್ಷ” ಎನ್ನುವ ಪ್ರಸಂಗಗಳು ರಂಗದಲ್ಲಿ ಪ್ರದರ್ಶನವಾಗಲಿದೆ.

ಸೆಪ್ಟೆಂಬರ್ 25ರ ಶುಕ್ರವಾರದಂದು ಸಂಜೆ 4-30 ಘಂಟೆಗೆ ಸರಿಯಾಗಿ ದ್ವೀಪದ ಯಕ್ಷಗಾನದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಬಹರೈನ್ ಹಾಗು ನಾಡಿನ ಅತಿಥಿ ಕಲಾವಿದರುಗಳ ಕೂಡುವಿಕೆಯೊಂದಿಗೆ “ಲಕ್ಷ್ಮೀ ಸ್ವಯಂವರ -ವಾಲೀ ಮೋಕ್ಷ ” ಎನ್ನುವಂತಹ ಯಕ್ಷಗಾನ ಪ್ರಸಂಗವು ಪ್ರದರ್ಶನಗೊಳ್ಳಲಿದೆ.

ಸಮುದ್ರ ಮಂಥನದ ಸಂದರ್ಭದಲ್ಲಿ ಅವತರಿಸಿದ ಮಹಾಲಕ್ಷ್ಮಿಯ ಸ್ವಯಂವರದಿಂದ ಹಿಡಿದು, ರಾಮಾಯಣದ ಕಿಷ್ಕಿಂಧಾ ಕಾಂಡದ ವಾಲಿ ಮೋಕ್ಷದವರೆಗೆ ಪೌರಾಣಿಕ ಕಥಾನಕವನ್ನು ಮನಮೋಹಕ ಯಕ್ಷಗಾನ ಪ್ರದರ್ಶನ ಪ್ರಸ್ತುತಪಡಿಸಲಾಗುವುದು. ಭಾರತ ಹಾಗೂ ಯುಎಇಯಿಂದ ಆಗಮಿಸುವ ಖ್ಯಾತ ಯಕ್ಷಗಾನ ಕಲಾವಿದರೊಂದಿಗೆ ಕನ್ನಡ ಸಂಘ ಬಹರೈನ್‌ನ ಪ್ರತಿಭಾವಂತ ಕಲಾವಿದರು ಈ ಅದ್ಧೂರಿ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.

ಭಾಗವತಿಕೆಯಲ್ಲಿ ಸ್ವರ ವಾರಿಧಿ ಕಾವ್ಯಶ್ರೀ ನಾಯಕ್ ಅಜೇರು , ಹಿಮ್ಮೇಳದಲ್ಲಿ ಸವಿನಯ‌ ನೆಲ್ಲಿತೀರ್ಥ, ಸತ್ಯಜಿತ್ ರಾವ್ , ಮುಮ್ಮೇಳದಲ್ಲಿ ಖ್ಯಾತ ಕಲಾವಿದರಾದ ಶೇಖರ್ ಡಿ.ಶೆಟ್ಟಿಗಾರ್, ರವಿ ಕುಮಾರ್ ಮುಂಡಾಜೆ ಸೇರಿದಂತೆ ಸಂಘದ‌ ಕಲಾವಿದರ ತಂಡ ಯಕ್ಷಗಾನದ ರಸದೌತಣವನ್ನು ನೀಡಲಿದೆ.

ಸಾಂಪ್ರದಾಯಿಕ ವೇಷಭೂಷಣ, ಚಂಡೆ–ಮದ್ದಳೆಗಳ ಮೊಳಗು, ಭಾಗವತಿಕೆಯ ಗಾನ ಹಾಗೂ ಕಲಾವಿದರ ಅದ್ಭುತ ಅಭಿನಯದೊಂದಿಗೆ “ಲಕ್ಷ್ಮೀ ಸ್ವಯಂವರ – ವಾಲಿ ಮೋಕ್ಷ” ಪ್ರೇಕ್ಷಕರಿಗೆ ಅಪೂರ್ವ ಯಕ್ಷಗಾನ ಅನುಭವ ನೀಡಲು ಸಜ್ಜಾಗಿದೆ. ಕಲಾಭಿಮಾನಿಗಳೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಈ ಅಮೋಘ ಯಕ್ಷಗಾನ ವೈಭವವನ್ನು ಕಣ್ತುಂಬಿಕೊಳ್ಳುವಂತೆ ಕನ್ನಡ ಸಂಘ ಬಹರೈನ್ ಆಹ್ವಾನಿಸಿದೆ.

ಅತಿಥಿ ಕಲಾವಿದರುಗಳು ಇದಾಗಲೇ ದ್ವೀಪಕ್ಕೆ ಆಗಮಿಸಿದ್ದು, ಬಿರುಸಿನ ಅಭ್ಯಾಸ ನಡೆಯುತ್ತಿದ್ದು ಯಕ್ಷ ವೈಭವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ . ದ್ವೀಪದ ಎಲ್ಲಾ ಯಕ್ಷಪ್ರೇಮಿಗಳಿಗೂ ಈ ಯಕ್ಷಗಾನ ಪ್ರದರ್ಶನಕ್ಕೆ ಪ್ರವೇಶ ಮುಕ್ತವಾಗಿದ್ದು ,ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಡಿನ ಈ ಶ್ರೀಮಂತ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಸಂಘದ ಅಧ್ಯಕ್ಷರಾದ ಅಜಿತ್ ಬಂಗೇರ ಮನವಿ ಮಾಡಿದ್ದಾರೆ. ಈ ಯಕ್ಷಗಾನ ಪ್ರದರ್ಶನದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರಾಮ್ ಪ್ರಸಾದ್ ಅಮ್ಮೆನಡ್ಕ ರವರನ್ನು ದೂರವಾಣಿ ಸಂಖ್ಯೆ 33946655 ಮೂಲಕ ಸಂಪರ್ಕಿಸಬಹುದು.

ವರದಿ: ಕಮಲಾಕ್ಷ ಅಮೀನ್

Hot this week

ಅಮೇರಿಕದ ಪಿಜ್ಜಾ ಅಂಗಡಿಯಲ್ಲಿ ಇಲಿ ಪ್ರತ್ಯಕ್ಷ!

ಆಲ್ಬನಿ, ನ್ಯೂಯಾರ್ಕ್: ಭಾರತದ ಹೋಟೆಲ್ ಅಥವಾ ಆಹಾರ ಮಳಿಗೆಯಲ್ಲಿ ಇಲಿ ಕಾಣಿಸಿಕೊಂಡರೆ,...

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಸಂದ ಗೌರವ, ಅಮೇರಿಕದ ತುಳುವರಲ್ಲಿ ಸಂಭ್ರಮ!

ಅಮೇರಿಕ: ತುಳುನಾಡಿನ ಜನರ ಬಹುದಶಕಗಳ ಕನಸು ನನಸಾಗಿದೆ. ಸೆಪ್ಟೆಂಬರ್ 18, 2026ರಂದು...

ನ್ಯೂಯಾರ್ಕ್‌ನ ಆಲ್ಬನಿಯ ಸುಪ್ರಿಯಾ ಶೆಟ್ಟಿಗೆ ‘ಮಿಸ್ಸೆಸ್ ಅಕ್ಕ- 2026’ ಕಿರೀಟ

ಫಿಲಡೆಲ್ಫಿಯಾ: ಫಿಲಡೆಲ್ಫಿಯಾದಲ್ಲಿ ನಡೆದ ಅಕ್ಕ (AKKA) ರಜತ ಮಹೋತ್ಸವ ವಿಶ್ವ ಕನ್ನಡ...

ದುಬೈಯಲ್ಲಿ ಪದ್ಮಶಾಲಿ ಸಮುದಾಯದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ; ಭಕ್ತಿ,ಸಂಸ್ಕೃತಿ ಹಾಗೂ ಸಮುದಾಯದ ಒಗ್ಗಟ್ಟಿಗೆ ಸಾಕ್ಷಿಯಾದ ಕಾರ್ಯಕ್ರಮ

ದುಬೈ, : ದುಬೈ ಪದ್ಮಶಾಲಿ ಸಮುದಾಯದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಭಕ್ತಿ,...

ಬೆಂಗಳೂರು; ಕನ್ನಡಿಗರ ಕೂಟ, ದುಬೈಯಿಂದ ಪದ್ಮಶ್ರೀ ಭೀಮವ್ವ ದೊಡ್ಡಬಾಳಪ್ಪರಿಗೆ ಪ್ರತಿಷ್ಠಿತ ‘ಹುಟ್ಟೂರ ಸನ್ಮಾನ‌’ ಪ್ರದಾನ

ಬೆಂಗಳೂರು: ಕನ್ನಡಿಗರ ಕೂಟ, ದುಬೈ ವತಿಯಿಂದ ಬೆಂಗಳೂರಿನಲ್ಲಿ ನಡೆದ “ಹುಟ್ಟುೂರ ಸನ್ಮಾನ”...

Related Articles

Popular Categories