ಯುಎಇಅರಬ್ ಜಗತ್ತಿನ ಅತ್ಯಂತ ಪ್ರಭಾವಿ ನಾಯಕನಾಗಿ ಸೌದಿ ಯುವರಾಜ...

ಅರಬ್ ಜಗತ್ತಿನ ಅತ್ಯಂತ ಪ್ರಭಾವಿ ನಾಯಕನಾಗಿ ಸೌದಿ ಯುವರಾಜ ಸಲ್ಮಾನ್ ಆಯ್ಕೆ; ಸಮೀಕ್ಷೆ

ಜಿದ್ದಾ: 2024ನೇ ವರ್ಷದಲ್ಲಿ ಅರಬ್ ಜಗತ್ತಿನ ಅತ್ಯಂತ ಪ್ರಭಾವಿ ನಾಯಕನಾಗಿ ಸೌದಿಯ ಯುವರಾಜ ಹಾಗೂ ಪ್ರಧಾನಿ ಮುಹಮ್ಮದ್ ಬಿನ್ ಸಲ್ಮಾನ್ ಆಯ್ಕೆಯಾಗಿದ್ದಾರೆ. ಸಲ್ಮಾನ್ ಅವರು 2021ನೇ ಇಸವಿಯಿಂದೀಚೆಗೆ ನಡೆದ ಜನಮತ ಸಮೀಕ್ಷೆಯಲ್ಲಿ ಈ ಮನ್ನಣೆಯನ್ನು ಪಡೆದಿರುವುದು ಇದು ನಾಲ್ಕನೇ ಬಾರಿಯಾಗಿದೆ. 2024ರ ಡಿಸೆಂಬರ್ 23ರಿಂದ 2025ರ ಜನವರಿ 8ರವರೆಗೆ ರಶ್ಯ ಟುಡೇ ಮಾಧ್ಯಮ ಸಂಸ್ಥೆಯ ಅರೇಬಿಕ್ ಸುದ್ದಿಜಾಲ ಈ ಸಮೀಕ್ಷೆಯನ್ನು ನಡೆಸಿತ್ತು.

ಸಮೀಕ್ಷೆಯಲ್ಲಿ ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು 31,666 (ಶೇ. 54.54) ಮತಗಳನ್ನು ಪಡೆದಿದ್ದಾರೆ. ಗಾಝಾ ಯುದ್ಧದಲ್ಲಿ ಇಸ್ರೇಲಿ ಪಡೆಗಳ ಗುಂಡಿಗೆ ಬಲಿಯಾದ ಹಮಾಸ್ ನಾಯಕ ಯಾಹ್ಯಾ ಸಿನ್ವರ್ ಅವರು 3146 (ಶೇ. 10.96) ಮತಗಳನ್ನು ಪಡೆದು ದ್ವಿತೀಯ ಸ್ಥಾನಿಯಾಗಿದ್ದಾರೆ. ಅಲ್ಜೀರಿಯದ ಅಧ್ಯಕ್ಷ ಅಬ್ದುಲ್‌ಮಜೀದ್ ಟೆಬ್ಬೌನ್ ಅವರು 1785 (ಶೇ.5.73) ಮತಗಳೊಂದಿಗೆ ತೃತೀಯ ಸ್ಥಾನದಲ್ಲಿದ್ದಾರೆ. ಸಮೀಕ್ಷೆಯಲ್ಲಿ ಒಟ್ಟು 31,166 ಮಂದಿ ಭಾಗವಹಿಸಿದ್ದರು.

Hot this week

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

ಅದ್ದೂರಿಯಾಗಿ ನಡೆದ ಕರ್ನಾಟಕ ಸಂಘ ಖತರ್‌ನ ‘ಎಂಜಿನಿಯರ್ಸ್ ಡೇ’

ದೋಹಾ(ಖತರ್): ಜಗಮೆಚ್ಚಿದ ಎಂಜಿನಿಯರ್ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ...

Related Articles

Popular Categories