ಸೌದಿ ಅರೇಬಿಯಾಸೌದಿ: ಅಲ್ ಖಮರ್ ವೆಲ್ಫೇರ್ ಅಸೋಸಿಯೇಷನ್‌ನಿಂದ ಇಫ್ತಾರ್ ಕೂಟ

ಸೌದಿ: ಅಲ್ ಖಮರ್ ವೆಲ್ಫೇರ್ ಅಸೋಸಿಯೇಷನ್‌ನಿಂದ ಇಫ್ತಾರ್ ಕೂಟ

ಸೌದಿ ಅರೇಬಿಯಾ: ರಮಝಾನ್ ಪವಿತ್ರ ತಿಂಗಳ ಅಂಗವಾಗಿ ಅಲ್ ಖಮರ್ ವೆಲ್ಫೇರ್ ಅಸೋಸಿಯೇಷನ್(AQWA) ಜುಬೈಲ್‌ನ ಹಿಲ್ಟನ್ ನಲ್ಲಿ ಗುರುವಾರ(ಮಾರ್ಚ್ 5) ಇಫ್ತಾರ್ ಕೂಟವನ್ನು ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಅಲ್ ಖಮರ್ ವೆಲ್ಫೇರ್ ಅಸೋಸಿಯೇಷನ್(AQWA) ಅಧ್ಯಕ್ಷರಾದ ಅಕ್ಬರ್ ಮಾತನಾಡಿ, ರಮಝಾನ್ ತಿಂಗಳು ಸಹಾನುಭೂತಿ, ದಾನ,ಧರ್ಮ ಮತ್ತು ಸಮುದಾಯದ ಒಗ್ಗಟ್ಟನ್ನು ಬೆಳೆಸುವ ಸಮಯವಾಗಿದೆ. ಇದು ಕೇವಲ ಊಟದ ಕಾರ್ಯಕ್ರಮವಲ್ಲದೆ, ನಮ್ಮ ಮಧ್ಯೆ ಒಡನಾಟ ಮತ್ತು ಪರಸ್ಪರ ಸಹಕಾರವನ್ನು ಹೆಚ್ಚಿಸುವ ಸಂದರ್ಭವಾಗಿದೆ ಎಂದರು.

ಅಲ್ ಖಮರ್ ವೆಲ್ಫೇರ್ ಅಸೋಸಿಯೇಷನ್‌ನ ಈ ಇಫ್ತಾರ್ ಕೂಟವು ಸಮುದಾಯದಲ್ಲಿ ಸೌಹಾರ್ದತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಜೊತೆಗೆ ರಮಝಾನ್‌ನ ಆಧ್ಯಾತ್ಮಿಕ ಮೌಲ್ಯಗಳನ್ನು ಎತ್ತಿ ತೋರಿಸುವ ಮತ್ತು ಸಮುದಾಯದ ಒಗ್ಗಟ್ಟನ್ನು ಬಲಪಡಿಸುವ ಉತ್ತಮ ಉದಾಹರಣೆಯಾಗಿದೆ ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.

ಈ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ಸಮುದಾಯದ ಪ್ರಮುಖರು ಹಾಗೂ ಅನೇಕ ಅತಿಥಿಗಳು ಭಾಗವಹಿಸಿದ್ದರು. ರುಚಿಕರವಾದ ಫಲಹಾರಗಳು ಮತ್ತು ವಿಶೇಷ ಭೋಜನದೊಂದಿಗೆ ಸಮಾರಂಭವು ಸಂತೋಷಕರವಾಗಿ ನಡೆಯಿತು.

Hot this week

Yakshagana staged in German for first time in Munich, children from Europe perform

Munich: In a significant moment for coastal Karnataka’s traditional...

ದುಬೈಯಲ್ಲಿ ಸಂಕಷ್ಟಕ್ಕೀಡಾಗಿರುವ ಪ್ರವಾಸಿ ಕನ್ನಡಿಗರಿಗೆ ಧೈರ್ಯ ತುಂಬಿದ ಎಂ.ಎ.ಗಫೂರ್

ದುಬೈ: ಅಮೇರಿಕ-ಇಸ್ರೇಲ್ ಹಾಗು ಇರಾನ್ ಮಧ್ಯೆಗಿನ ಸಂಘರ್ಷದಿಂದ ದುಬೈಯಲ್ಲಿ ಸಂಕಷ್ಟಕ್ಕೀಡಾಗಿರುವ ಕನ್ನಡಿಗ...

DKSC ಕುವೈತ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾಗಿ ಅನ್ವರ್ ಸಾಹೇಬ್ ಕುಂಜಾಲ್ ಆಯ್ಕೆ

ಕುವೈತ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC), ಇದರ ಕುವೈತ್ ರಾಷ್ಟ್ರೀಯ...

ಕರ್ನಾಟಕ ಸಂಘ ಖತರ್‌ನಿಂದ ರಮಝಾನ್‌ ಸೇವಾ ಕಾರ್ಯ: ಇಫ್ತಾರ್ ಆಹಾರ ಕಿಟ್‌ಗಳ ವಿತರಣೆ

ಕರ್ನಾಟಕ ಸಂಘ ಖತರ್‌ (KSQ), ರಮಝಾನ್‌ ಮಾಸದ ಪವಿತ್ರ ಚಟುವಟಿಕೆಗಳ ಭಾಗವಾಗಿ...

Related Articles

Popular Categories