ಯುಎಇದುಬೈಯಲ್ಲಿ ಸಂಪನ್ನಗೊಂಡ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವೈಭವ

ದುಬೈಯಲ್ಲಿ ಸಂಪನ್ನಗೊಂಡ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವೈಭವ

ದುಬೈ: ಅರಬ್ ಸಂಯುಕ್ತ ಸಂಸ್ಥಾನ ವಾಣಿಜ್ಯ ನಗರಿ ದುಬೈಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಆಶ್ರಯದಲ್ಲಿ 24ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ರವಿವಾರ ದುಬೈಯ ಅಲ್ ಸಫಾದಲ್ಲಿರುವ ಜೆ.ಎಸ್.ಎಸ್. ಪ್ರವೈಟ್ ಸ್ಕೂಲ್ ಸಭಾಂಗಣದಲ್ಲಿ ಸಂಜೆ ಸಂಕಲ್ಪ ಹಾಗೂ ಸುಮಂಗಲೆಯರಿಂದ ಜ್ಯೋತಿ ಬೆಳಗುವುದರರೊಂದಿಗೆ ಪ್ರಾರಂಭವಾಯಿತು.

ಪುರೋಹಿತ ರಘುಭಟ್ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರ್ಥನೆ, ಸಂಕಲ್ಪ, ಗುರುಗಣಪತಿ ಪೂಜೆ, ಕಳಸ ಪೂಜೆ, ನವಗ್ರಹ ಪೂಜೆ, ವೃತಕಲ್ಪೋಕ್ತ ಪೂಜೆ, ಕಥಾ ಸಾರ, ಮಹಾನೈವೇದ್ಯ, ಮಂಗಳಾರತಿ, ಬ್ರಾಹ್ಮಣರಾಧನೆ, ಸುವಾಸಿನಿ ಪೂಜೆ, ಕನ್ನಿಕಾರಾಧನೆ ತೀರ್ಥ ಪ್ರಸಾದ ಮತ್ತು ಮಹಾಪ್ರಸಾದ ವಿತರಣೆ ಮಾಡಲಾಯಿತು. ಪೂಜೆಯಲ್ಲಿ ಸಾರ್ವಜನಿಕರ ಪರವಾಗಿ ಅಂಜಲಿ ಕೌಶಿಕ್ ದಂಪತಿ, ಕಾರ್ಯಕಾರಿ ಸಮಿತಿಯ ಪರವಾಗಿ ವೀಣಾ ಸುದರ್ಶನ್ ಹೆಗ್ಡೆ ಕಾರ್ಕಳ ದಂಪತಿಗಳು ಪೂಜೆಯಲ್ಲಿ ಕುಳಿತು ಪೂಜಾ ಕಾರ್ಯದಲ್ಲಿ ಭಾಗಿಯಾದರು.

ದುಬೈಯಲ್ಲಿ ನೆಲೆಸಿ ಕಾರ್ಯೋನ್ಮುಖವಾಗಿರುವ ಸಂಘ ಸಂಸ್ಥೆಗಳಾದ ಯು.ಎ.ಇ ಬಂಟ್ಸ್. ಬಿಲ್ಲವಾಸ್ ಫ್ಯಾಮಿಲಿ ದುಬೈ, ಬ್ರಾಹ್ಮಣ ಸಮಾಜ ದುಬೈ, ಮೊಗವೀರ್ಸ್ ಯು.ಎ.ಇ., ವಿಶ್ವಕರ್ಮ ಸಮಾಜ. ಪದ್ಮಶಾಲಿ ಸಮುದಾಯ ಯು.ಎ.ಇ., ಜಿ.ಎಸ್.ಬಿ. ಸಮುದಾಯ, ಗಾಣಿಗ ಸಮಾಜ, ತೀಯಾ ಸಮಾಜ, ರಜಕ ಸಮಾಜ, ರಾಮಕ್ಷತ್ರೀಯ ಸಮಾಜ, ಜೈನ್ ಮಿಲನ ಸಂಘಟನೆಗಳ ಪ್ರತಿನಿಧಿಗಳು ಒಗ್ಗೂಡಿ ಕಳೆದ 2001ರಲ್ಲಿ ಪ್ರಾರಂಭಿಸಿದ ಸಾಮೂಹಿಕ ಶ್ರೀ ಸತ್ಯನಾರಯಣ 18ನೇಯ ಪೂಜೆಯಾಗಿತ್ತು.

ಆಕರ್ಷಕ ಪೂಜಾ ಮಂಟಪದ ವಿನ್ಯಾಸ ರಾಜೇಶ್ ಕುತ್ತಾರ್ ತಂಡದವರು ನಿರ್ಮಿಸಿದ್ದರು. ಸಂಚಿತಾ ಶ್ರೀಧರ್ ರವರ ಕೃಷ್ಣ ಭಜನಾ ತರಗತಿ ಪುಟ್ಟ ಮಕ್ಕಳ ತಂಡದವರ ಭಜನೆಯೊಂದಿಗೆ ಪ್ರಾರಂಭಿಸಿ ಶ್ರೀ ರಾಜರಾಜೇಶ್ವರಿ ಭಜನಾ ವೃಂದ ದುಬೈಯ ಸುಮಧುರ ಕಂಠಸಿರಿಯ ಗಾಯಕ ಗಾಯಕಿಯರ ಭಜನಾ ಸೇವೆ ಸಭಾಂಗಣದಲ್ಲಿ ಆಸೀನವಾಗಿದ್ದ ಸರ್ವ ಭಕ್ತಾಧಿಗಳು ಪಾಲ್ಗೊಂಡು ಭಜನಾ ಸೇವೆಯನ್ನು ನಡೆಸಿದರು. ಸ್ಮೈಲ್ ಕ್ರೀಯೇಶನ್ಸ್ ದುಬೈಯ ಜಸ್ಮಿತಾ ವಿವೇಕ್ ರವರ ನಿರ್ದೇಶನದಲ್ಲಿ ಮಕ್ಕಳು ಮತ್ತು ಸುಮಂಗಲೆಯರ ನೃತ್ಯ ಭಜನೆ ಸರ್ವರ ಮನ ಸೆಳೆಯಿತು.

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ, ಅಲಂಕಾರ ಸೇವೆ, ಸಪತಾಭಕ್ಷ ಸೇವೆ, ಮಹಾ ಅನ್ನದಾನ ಸೇವೆ, ಮಹಾ ಪ್ರಸಾದ ಸೇವೆಯನ್ನು ಮಾಡಿರುವ ಮಹಾ ದಾನಿಗಳನ್ನು ಪೂಜಾ ವೇದಿಕೆಯಲ್ಲಿ ಗೌರವ ನೀಡಿ ಪ್ರಸಾದ ವಿತರಿಸಲಾಯಿತು. ಮಹಾ ಮಂಗಳಾರತಿಯ ನಂತರ ಸರ್ವ ಭಕ್ತಾಧಿಗಳು ತೀರ್ಥ ಪ್ರಸಾದ, ಮಹಾ ಪ್ರಸಾದವನ್ನು ಸ್ವೀಕರಿಸಿದರು.

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ದುಬೈ ತಂಡದ ಸರ್ವ ಸದಸ್ಯರಾದ ಸತೀಶ್ ಪೂಜಾರಿ, ವಿಶ್ವನಾಥ್ ಶೆಟ್ಟಿ, ಬಿ.ಕೆ.ಗಣೇಶ್ ರೈ, ಬಾಲಕೃಷ್ಣ ಸಾಲಿಯಾನ್, ಜಗನ್ನಾಥ್ ಬೆಳ್ಳಾರೆ, ವಾಸು ಶೆಟ್ಟಿ, ಜೀವನ್ ಕುಕ್ಯಾನ್, ಧನಂಜಯ್ ಶೆಟ್ಟಿಗಾರ್, ಸುಗಂಧರಾಜ್ ಬೇಕಲ್, ದಿನೇಶ್ ಸಾಲಿಯಾನ್, ಸುದರ್ಶನ್ ಹೆಗ್ಡೆ ಕಾರ್ಕಳ, ವಿವೇಕಾನಂದ, ರಮೇಶ್ ಗಾಣಿಗ, ಸಂದೇಶ್ ಜೈನ್, ಕಿರಣ್ ರಾವ್, ಶಿವಾರಾಮ್ ಭಟ್ ಅವರ ಹಲವು ದಿನಗಳ ಪೂರ್ವಭಾವಿ ತಯಾರಿಯೊಂದಿಗೆ ಅತ್ಯಂತ ಭಕ್ತಿಭಾವದೊಂದಿಗೆ ಶಿಸ್ತುಬದ್ಧವಾಗಿ ಪೂಜಾ ಕಾರ್ಯ ಯಶಸ್ವಿಯಾಗಿ ನೆರವೇರಿತು.

ಬಿ. ಕೆ. ಗಣೇಶ್ ರೈ. ದುಬೈ

Hot this week

ಸಲಾಲದಲ್ಲಿ ಅದ್ದೂರಿಯಾಗಿ ನಡೆದ ಕನ್ನಡಿಗರ ‘ಸ್ನೇಹ ಸಂಗಮ’ ಕಾರ್ಯಕ್ರಮ

ಸಲಾಲ(ಒಮಾನ್): ಇಲ್ಲಿನ ಅನಿವಾಸಿ ಕನ್ನಡಿಗರ ಅನ್ನೂರ್ ಎಜುಕೇಶನಲ್ ಸೆಂಟರ್ ವತಿಯಿಂದ 'ಸ್ನೇಹ...

ವಿಶ್ವದಲ್ಲೇ ಮೊದಲ ಬಾರಿ ಜರ್ಮನ್ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆ

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ ಕರಾವಳಿ ಕರ್ನಾಟಕದ ಜನಪ್ರಿಯ ಕಲೆಯಾಗಿರುವ ಯಕ್ಷಗಾನವು...

ಫೆಬ್ರವರಿ 1ರಂದು ಶಾರ್ಜಾದಲ್ಲಿ ‘ಮಾರ್ಗದೀಪ ಪ್ರೀಮಿಯರ್ ಲೀಗ್-4’ ಕ್ರಿಕೆಟ್ ಟೂರ್ನಮೆಂಟ್; ಜರ್ಸಿ ಬಿಡುಗಡೆ

ದುಬೈ: ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ದಿವಂಗತ ವಸಂತ್ ಬೇಕಲ್ ಸ್ಮರಣಾರ್ಥ...

ದುಬೈ; ‘ಗಲ್ಫ್ ಫುಡ್ 2026’ ಮೇಳದಲ್ಲಿ ಮಿಂಚಿದ ‘ನಂದಿನಿ’

ದುಬೈ: ಯುಎಇಯಲ್ಲಿ 31 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ವಿಶ್ವದ ಅತಿದೊಡ್ಡ...

ಫ್ಲೋರಿಡಾ; ತ್ಯಾಗರಾಜ–ಪುರಂದರ ದಾಸರ ಆರಾಧನಾ ಉತ್ಸವ ಭಕ್ತಿಭಾವದಿಂದ ಆಚರಣೆ

ಫ್ಲೋರಿಡಾ: ಇತ್ತೀಚೆಗೆ ತ್ಯಾಗರಾಜ ಹಾಗೂ ಪುರಂದರ ದಾಸರ ಆರಾಧನಾ ಉತ್ಸವವನ್ನು ಸಾಂಸ್ಕೃತಿಕ...

Related Articles

Popular Categories