ಯುಎಇನವೆಂಬರ್ 8ರಂದು ನಡೆಯುವ 'ಕನ್ನಡ ಕೂಟ ದುಬೈ'ಯ 'ಕನ್ನಡ...

ನವೆಂಬರ್ 8ರಂದು ನಡೆಯುವ ‘ಕನ್ನಡ ಕೂಟ ದುಬೈ’ಯ ‘ಕನ್ನಡ ರಾಜ್ಯೋತ್ಸವ’ಕ್ಕೆ U. T. ಖಾದರ್​ಗೆ ಆಮಂತ್ರಣ; ನಟ ಶಿವರಾಜ್ ಕುಮಾರ್​ಗೆ ಪ್ರತಿಷ್ಠಿತ ‘ಅಂತಾರಾಷ್ಟ್ರೀಯ ಕನ್ನಡ ರತ್ನ’ ಪ್ರಶಸ್ತಿ

ದುಬೈ: ನವೆಂಬರ್ 8ರಂದು ದುಬೈನಲ್ಲಿ ನಡೆಯುವ ‘ಕನ್ನಡ ಕೂಟ ದುಬೈ’ನ ”ಕನ್ನಡ ರಾಜ್ಯೋತ್ಸವ” ಕಾರ್ಯಕ್ರಮಕ್ಕೆ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ U.T. ಖಾದರ್‌ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಯಿತು.

‘ಕನ್ನಡ ಕೂಟ ದುಬೈ’ಯ ಆಹ್ವಾನದ ಆಮಂತ್ರಣವನ್ನು ಮನಃಪೂರ್ವಕವಾಗಿ ಸ್ವೀಕರಿಸಿ, ಕಾರ್ಯಕ್ರಮದಲ್ಲಿ ತಮ್ಮ ಉಪಸ್ಥಿತಿಯನ್ನು ಖಾದರ್‌ ಅವರು ದೃಢಪಡಿಸಿದರು.

ಈ ಸಂದರ್ಭದಲ್ಲಿ ಸಂಘದ ವಿವರ, ಉದ್ದೇಶಗಳು, ಸಾಂಸ್ಥಿಕ ಸಾಧನೆಗಳು ಮತ್ತು ಹಿಂದಿನ ಕಾರ್ಯಕ್ರಮದ ವಿವರಗಳನ್ನು ಒಳಗೊಂಡ “ಪರಿಚಯ ಪುಸ್ತಕ”ವನ್ನು ಅವರಿಗೆ ನೀಡಲಾಯಿತು.

ಈ ವೇಳೆ ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ., ಪೋಷಕ, ಸಲಹಾ ಸಮಿತಿಯ ಸದಸ್ಯರಾದ ಮಂಜುನಾಥ್ ರಾಜನ್ ಮತ್ತಿತರರು ಹಾಜರಿದ್ದರು.

ನವೆಂಬರ್ 8ರಂದು ದುಬೈಯ ಅತೀ ದೊಡ್ಡ ವೇದಿಕೆಯಲ್ಲಿ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಈ ವೇಳೆ ಅವರಿಗೆ ಪ್ರತಿಷ್ಠಿತ ‘ಅಂತಾರಾಷ್ಟ್ರೀಯ ಕನ್ನಡ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅರುಣ್ ಕುಮಾರ್ ಎಂ.ಕೆ. ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಜಾನಪದ ಉತ್ಸವದಲ್ಲಿ ಕಾರ್ಯಕ್ರಮದ ಫ್ಲೈಯರ್ ಬಿಡುಗಡೆ
‘ಕನ್ನಡ ರಾಜ್ಯೋತ್ಸವ’ ಕಾರ್ಯಕ್ರಮದ ಫ್ಲೈಯರ್ (Flyer) ನ್ನು ಕರ್ನಾಟಕ ಜಾನಪದ ಪರಿಷತ್ UAE ಘಟಕ ರವಿವಾರ ದುಬೈಯಲ್ಲಿ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಜಾನಪದ ಉತ್ಸವ – 2025 ‘ರ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು.

Hot this week

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

ಅದ್ದೂರಿಯಾಗಿ ನಡೆದ ಕರ್ನಾಟಕ ಸಂಘ ಖತರ್‌ನ ‘ಎಂಜಿನಿಯರ್ಸ್ ಡೇ’

ದೋಹಾ(ಖತರ್): ಜಗಮೆಚ್ಚಿದ ಎಂಜಿನಿಯರ್ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ...

Related Articles

Popular Categories